ಪರಾತ್ಪರ ಗುರು ಡಾ. ಆಠವಲೆಯವರು ಸನಾತನ ಸಂಸ್ಥೆಯ ಮಾಧ್ಯಮದಿಂದ ಭಾವೀ ರಾಷ್ಟ್ರನಿರ್ಮಿತಿಗಾಗಿ ಪೀಳಿಗೆಯನ್ನು ರೂಪಿಸಿದರು

ಪರಾತ್ಪರ ಗುರು ಡಾ. ಆಠವಲೆ

ಬಾಲ್ಯದಿಂದ, ಅಷ್ಟೇ ಅಲ್ಲ ಗರ್ಭದಲ್ಲಿರುವಾಗಲೇ ಜೀವದ ಮೇಲೆ ಸಾತ್ತ್ವಿಕತೆಯ ಸಂಸ್ಕಾರವನ್ನು ಮಾಡಿದರೆ ಆದರ್ಶ ಮತ್ತು ಧರ್ಮಾಚರಣಿ ಯುವಕರು ನಿರ್ಮಾಣವಾಗುವರು ! ಸರ್ವ ಶ್ರೇಷ್ಠ ಹಿಂದೂ ಧರ್ಮದ ಶಾಸ್ತ್ರ ಮತ್ತು ಉಪಾಸನೆಯನ್ನು ತಿಳಿದು ಅದರಂತೆ ಕೃತಿಯನ್ನು ಮಾಡಿದರೆ ಸಮಾಜದಲ್ಲಿ ಪರಿವರ್ತನೆಯಾಗಲು ಸಮಯ ಬೇಕಾಗುವುದಿಲ್ಲ. ‘ಧರ್ಮಾಚರಣೆ ಮಾಡುವುದು’, ಇದೇ ಸದ್ಯದ ಅನೇಕ ಸಮಸ್ಯೆಗಳಿಗೆ ಉತ್ತರವಾಗಿದ್ದು ಅನೇಕ ವರ್ಷಗಳಿಂದ ಸನಾತನ ಸಂಸ್ಥೆಯು ಧರ್ಮಾಚರಣೆಯ ಮಹತ್ವವನ್ನು ಸಮಾಜದ ಮೇಲೆ ಬಿಂಬಿಸುತ್ತಿದೆ. ಸನಾತನ ಸಂಸ್ಥೆಯು ಅನೇಕ ವರ್ಷಗಳಿಂದ ಮಾಡಿದ ತಪಸ್ಸಿನ ಫಲ, ದೇವತೆಗಳ ಆಶೀರ್ವಾದ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಅಮೂಲ್ಯ ಮಾರ್ಗದರ್ಶನ ಹಾಗೂ ಕೃಪೆಯಿಂದ ಇಂದು ಸಾವಿರಾರು ಯುವಕರು ಸನ್ಮಾರ್ಗದಿಂದ ನಡೆಯುತ್ತಿದ್ದಾರೆ.