ಇಸ್ಲಾಮ್ ನ ಸಂಸ್ಥಾಪಕ ಪ್ರವಾದಿ ಮಹಮ್ಮದ್ ಪೈಗಂಬರ್ ಇವರ ಬಗ್ಗೆ ಭಾಜಪದ ಮಾಜಿ ರಾಷ್ಟ್ರೀಯ ವಕ್ತಾರ ನೂಪುರ ಶರ್ಮಾ ಇವರು ಮಾಡಿದ ಕಥಿತ ಆಕ್ಷೇಪಾರ್ಹ ಹೇಳಿಕೆಯಿಂದ ಕಡಿಮೆಪಕ್ಷ ೧೫ ಇಸ್ಲಾಮಿ ದೇಶಗಳು ಭಾರತದ ವಿರುದ್ಧ ದಂಡ ವಿಧಿಸಿವೆ. ಆಡಳಿತ ಪಕ್ಷದ ಮತ್ತು ಅದರಲ್ಲಿಯೂ ಹಿಂದುತ್ವನಿಷ್ಠ ಭಾಜಪದ ವಕ್ತಾರರ ಹೇಳಿಕೆಯಾಗಿರುವುದರಿಂದ ಅವರಿಗೆ ಇನ್ನಷ್ಟು ಕಸಿವಿಸಿ ಉಂಟಾಗಿದೆ. ವಾಸ್ತವದಲ್ಲಿ ನೂಪುರ ಶರ್ಮಾ ಇವರು ‘ಹದೀಸ್’ ನಲ್ಲಿನ ವಸ್ತುಸ್ಥಿತಿಯನ್ನೇ ಪುನರುಚ್ಚರಿಸಿದ್ದರು. ಹದೀಸ್ ಎಂದರೆ ಒಂದು ವಿಶಿಷ್ಟ ಪರಿಸ್ಥಿತಿಯಲ್ಲಿ ಮಹಮ್ಮದ ಪೈಗಂಬರ್‌ರು ಹೇಗೆ ವರ್ತಿಸಿದರು ? ಹೇಗೆ ಮಾತನಾಡಿದರು ಎಂಬುದರ ಶಬ್ದಕೋಶ !
ಈಗ ಐತಿಹಾಸಿಕ ವಸ್ತುಸ್ಥಿತಿಯನ್ನು ಮಂಡಿಸಿದರೆ, ಅದರಲ್ಲಿ ತಪ್ಪೇನು; ಆದರೆ ಇದರಲ್ಲಿ ಭಾರತವನ್ನು ಕಟ್ಟಿಹಾಕಲು ಮತ್ತು ‘ನಾವೇ ಇಸ್ಲಾಮ್‌ನ ದೊಡ್ಡ ಸಂರಕ್ಷರಾಗಿದ್ದೇವೆ’, ಎಂದು ತೋರಿಸುವ ಪ್ರಯತ್ನವನ್ನೇ ಬಹುತೇಕ ಇಸ್ಲಾಮಿ ದೇಶಗಳಿಂದ ಮಾಡಲಾಗುತ್ತಿದೆ. ‘ಇಸ್ಲಾಮ್‌ನ ಅಪಮಾನವನ್ನು (?) ನಾವು ಸಹಿಸುವುದಿಲ್ಲ’, ಎಂದು ಹೇಳುವ ಬಹರಿನ್ ೨೦೨೦ ನೇ ಇಸವಿಯಲ್ಲಿ ತಮ್ಮ ದೇಶದ ಒಂದು ‘ಸುಪರಮಾರ್ಕೆಟ್’ನಲ್ಲಿ ಕೆಲವು ಬುರಖಾಧಾರಿ ಮಹಿಳೆಯರಿಂದ ‘ಅಲ್ಲಾ ಹೂ ಅಕಬರ್’ನ (‘ಅಲ್ಲಾ ಮಹಾನ ಇದ್ದಾನೆ’ ಎಂಬ) ಘೋಷಣೆಯನ್ನು ನೀಡುತ್ತಾ ಅಲ್ಲಿ ಜೋಡಿಸಲಾಗಿದ್ದ ಶ್ರೀ ಗಣೇಶಮೂರ್ತಿಯನ್ನು ಎಸೆದಿರುವ ವಿರುದ್ಧ ಯಾವ ಕಾರ್ಯಾಚರಣೆ ಮಾಡಿತು ? ಇತರ ಧರ್ಮದ ಅವಹೇಳನವನ್ನು ಸಹಿಸಿಕೊಳ್ಳುವ ಈ ದೇಶ ಹಿಂದೂಗಳ ವಿರುದ್ಧ ಮಾತ್ರ ತಕ್ಷಣ ಒಟ್ಟಾಗುತ್ತವೆ.
ಡೆನ್ಮಾರ್ಕ್ ಮತ್ತು ಫ್ರಾನ್ಸ್ ನಂತರ ಭಾರತ !
ಭಾರತ ಇಂದು ಯಾವ ವಿರೋಧವನ್ನು ಎದುರಿಸಬೇಕಾಗು ತ್ತಿದೆಯೋ, ಅಂತಹುದೇ ಅನುಭವವನ್ನು ಕಳೆದ ಒಂದೂವರೆ ದಶಕದಲ್ಲಿ ಜಗತ್ತು ಏನಿಲ್ಲೆಂದರೂ ಎರಡು ಬಾರಿ ಪಡೆದಿದೆ. ೨೦೦೬ ರಲ್ಲಿ ಡೆನ್ಮಾರ್ಕ್‌ನಲ್ಲಿ ಚಿತ್ರಕಾರನೊಬ್ಬನು ಮಹಮ್ಮದ ಪೈಗಂಬರ್‌ರ ವ್ಯಂಗ್ಯಚಿತ್ರವನ್ನು ಬಿಡಿಸಿದನು, ಆಗ ಇಸ್ಲಾಮಿ ಜಗತ್ತು ಎಲ್ಲ ಕಡೆಗೆ ಹಾಹಾಕಾರವೆಬ್ಬಿಸಿತ್ತು. ೨೦೨೦ ನೇ ಇಸವಿಯಲ್ಲಿ ಫ್ರಾನ್ಸ್‌ನ ಶಿಕ್ಷಕರಾದ ಸ್ಯಮ್ಯುವೆಲ್ ಪ್ಯಟಿ ಇವರು ಮಹಮ್ಮದ ಪೈಗಂಬರ್‌ರ ಬಗ್ಗೆ ‘ಶಾರ್ಲಿ ಹೆಬ್ದೊ’ ಈ ಸಾಪ್ತಾಹಿಕವು ಬಿಡಿಸಿದ ವ್ಯಂಗ್ಯಚಿತ್ರದ ಬಗ್ಗೆ ಹೇಳಿಕೆ ನೀಡಿದುದರಿಂದ ಜಿಹಾದಿ ವಿಚಾರಸರಣಿಯ ಅವರ ವಿದ್ಯಾರ್ಥಿಯೇ ಅವರ ಹತ್ಯೆ ಮಾಡಿದನು. ಅದಕ್ಕೆ ಫ್ರಾನ್ಸ್ ಇಸ್ಲಾಮ್ ವಿರುದ್ಧ ಅಭಿಯಾನವನ್ನು ನಡೆಸಿತ್ತು. ಆಗಲೂ ಇಸ್ಲಾಮಿ ಜಗತ್ತು ಫ್ರಾನ್ಸ್‌ನ ಉತ್ಪಾದನೆಗಳನ್ನು ಬಹಿಷ್ಕರಿಸಿತ್ತು. ದೃಢ ನಿಲುವನ್ನು ತೆಗೆದುಕೊಂಡ ಫ್ರಾನ್ಸ್‌ನ ಸಾಮ್ಯವಾದಿ ವಿಚಾರಸರಣಿಯ ರಾಷ್ಟ್ರಾಧ್ಯಕ್ಷ ಇಮ್ಯನ್ಯುಎಲ್ ಮ್ಯಕ್ರಾನ್ ಇವರು ಆ ವಿರೋಧಕ್ಕೆ ಜಗ್ಗಲಿಲ್ಲ. ಅಂತರ್‌ರಾಷ್ಟ್ರೀಯ ಸ್ತರದಲ್ಲಿ ಭಾರತದ ಪ್ರಧಾನಮಂತ್ರಿ ಮೋದಿ ಮತ್ತು ಅವರ ಸರಕಾರವು ಬಲಪಂಥಿಯ ವಿಚಾರಸರಣಿಯದ್ದಾಗಿದೆ ಎಂಬ ತಿಳುವಳಿಕೆ ಇದೆ. ಅದರಲ್ಲಿ ಸ್ವಲ್ಪ ಮಟ್ಟಿಗೆ ಸತ್ಯವೂ ಇದೆ; ಆದರೆ ಪಕ್ಷವು ನೂಪುರ ಶರ್ಮಾರ ವಿರುದ್ಧ ಮಾಡಿದ ಕಾರ್ಯಾಚರಣೆಯಿಂದ ಹಿಂದೂಗಳು ಆಶ್ಚರ್ಯಚಕಿತರಾದರು. ಸಾಮ್ಯವಾದಿ ಮತ್ತು ಅದರಲ್ಲಿಯೂ ಪ್ರಗತಿಪರರು ಫ್ರಾನ್ಸ್‌ನಿಂದ ತತ್ತ್ವನಿಷ್ಠ ಧೋರಣೆಯನ್ನು ಹಮ್ಮಿಕೊಳ್ಳುವ ಅವಕಾಶವನ್ನು ಹಿಂದೂ ಭಾರತವು ಕಳೆದುಕೊಳ್ಳುವುದು ಬೇಡವೆಂಬುದೇ ಹಿಂದೂಗಳ ಅಪೇಕ್ಷೆಯಾಗಿದೆ ! ಅಂದರೆ ದೆಹಲಿ ಪೊಲೀಸರು ಎಮ್.ಐ.ಎಮ್.ನ ಅಧ್ಯಕ್ಷ ಅಸದುದ್ದೀನ ಓವೈಸಿ ಮತ್ತು ಹಿಂದೂ ದೇವತೆಗಳ ವಿರುದ್ಧ ವಿಷಕಾರುವ ಇತರರ ವಿರುದ್ಧವೂ ಈಗ ಅಪರಾಧಗಳನ್ನು ದಾಖಲಿಸಲು ಆರಂಭಿಸಿದ್ದಾರೆ, ಇದು ಸಕಾರಾತ್ಮಕ ವಿಷಯವಾಗಿದೆ ಎಂದು ಹೇಳಲು ಅಡ್ಡಿಯಿಲ್ಲ.
ಅಂತೇ ಮತಿ ಸಾ ಗತಿ
ಈಗ ಪ್ರಶ್ನೆ ಉಳಿದಿರುವುದು ಭಾಜಪದ್ದು ! ಭಾಜಪದ ಅಥವಾ ಮೂಲದಲ್ಲಿಯೇ ಹಿಂದುತ್ವ ನಿಷ್ಠರ ಧೋರಣೆ ಎಂದಿಗೂ ‘ಫ್ರಿಂಜ್’ ಆಗಿರಲೇ ಇಲ್ಲ ! ಕಾಂಗ್ರೆಸ್ ಮತ್ತು ಅದಕ್ಕೆ ಸಹಾಯ ಮಾಡುವ ಅಂತರರಾಷ್ಟ್ರೀಯ ಶಕ್ತಿಗಳು ಹಿಂದೂದ್ವೇಷಿಗಳು ‘ಸಬ್‌ವರ್ಜನ್’ (ಸಮಾಜವನ್ನು ಅದರ ಮೂಲ ಸಂಸ್ಕೃತಿಯಿಂದ ದೂರಮಾಡಲು ಹಮ್ಮಿಕೊಳ್ಳಲಾಗುವ ಧೋರಣೆಗಳು) ಹಮ್ಮಿಕೊಂಡು ಹಿಂದುತ್ವವನ್ನು ಮತ್ತು ಅದರ ದೈವೀ ಶಿಕ್ಷಣವನ್ನು ಮುಚ್ಚಿ ಅಡಗಿಸಿದ್ದವು. ಜಾತ್ಯತೀತವಾದದ ಕಪ್ಪುಮಸಿ ಈಗ ದೂರವಾಗತೊಡಗಿದೆ. ಹಿಂದೂಗಳು ಜಾಗರೂಕರಾಗುತ್ತಿದ್ದಾರೆ, ಹಿಂದೂ ಹಿತದ ದೃಷ್ಟಿಯಿಂದ ರಾಷ್ಟ್ರಹಿತದ ನಿರ್ಣಯಗಳ ಡೋಲು ದೇಶದಲ್ಲಿ ಬಾರಿಸತೊಡಗಿದೆ. ‘ಅಂತೆ ಮತಿ ಸಾ ಗತಿ’ ಎಂಬಂತೆ ಕಾಂಗ್ರೆಸ್ಸನ್ನು ಸಮೀಪಿಸುತ್ತಿರುವ ಮೃತ್ಯುವಿನ ಘಂಟೆ ಅದಕ್ಕೆ ಸ್ವತಃ ಕೇಳಿಸುತ್ತಿಲ್ಲ. ಆದುದರಿಂದ ಅದು ಇಂದೂ ಹಿಂದೂಗಳನ್ನು ಮರೆತಿದೆ. ಇದೇ ಮತಿಯನ್ನು ನೋಡಿ ಹಿಂದೂಗಳು ಅದನ್ನು ರಾಜಕೀಯ ದೃಷ್ಟಿಯಿಂದ ಅಧೋ‘ಗತಿ’ಗೆ ಕಳುಹಿಸಲು ಸಜ್ಜಾಗಿದ್ದಾರೆ.