ಮಸೀದಿಯಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಬೇಡಿ; ನೋಟಿಸ ಜಾರಿ ಮಾಡಿದ್ದಕ್ಕಾಗಿ ಪೊಲೀಸ ಅಧಿಕಾರಿಯನ್ನು ವಜಾಗೊಳಿಸಲಾಗಿಯಿತು !

ಕೇರಳದ ಕಮ್ಯುನಿಸ್ಟ ಮಂಚೂಣಿ ಸರಕಾರದ ಕಟ್ಟರವಾದಿ ಮುಸ್ಲಿಮರ ಕುರಿತು ಪ್ರೀತಿ !

ತಿರುವಂತಪುರಮ (ಕೇರಳ) – ಕೇರಳದಲ್ಲಿಯ ಕನ್ನೂರಿನ ಮಯ್ಯಿಲ ಪೊಲೀಸ ಠಾಣೆಯ ಮುಖ್ಯಸ್ಥ ಬಿಜು ಪ್ರಕಾಶ ಅವರನ್ನು ಕೇರಳದ ಕಮ್ಯುನಿಸ್ಟ ಸರಕಾರ ಹುದ್ದೆಯಿಂದ ವಜಾಗೊಳಿಸಿದೆ. ಬಿಜು ಪ್ರಕಾಶ ಎರಡು ಧರ್ಮಗಳ ನಡುವೆ ದ್ವೇಷದ ಭಾಷಣ ಮಾಡದಂತೆ ಕನ್ನೂರಿನ ಜಾಮಾ ಮಸೀದಿಗೆ ನೋಟಿಸ ನೀಡಿದ್ದರು. ಆದ್ದರಿಂದ ಅವರನ್ನು ಹುದ್ದೆಯಿಂದ ತೆಗೆದು ಹಾಕಲಾಯಿತು. ಈ ಕುರಿತು ಸ್ಷಷ್ಟನೆ ನೀಡಿರುವ ಸರಕಾರ “ರಾಜ್ಯದ ಯಾವುದೇ ಮಸೀದಿಗಳಲ್ಲಿ ಧಾರ್ಮಿಕ ದುಷ್ಪ್ರಚಾರ ನಡೆಸುತ್ತಿಲ್ಲ. ಜಾಮಾ ಮಸಿದಿಗೆ ನೀಡಿರುವ ನೋಟಿಸ ಅಯೋಗ್ಯವಾಗಿದೆ. ಇದು ಸರಕಾರದ ನೀತಿಗೆ ವಿರುದ್ಧವಾಗಿದೆ.’ ಎಂದು ಹೇಳಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಕಚೇರಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

೧. ನೂಪುರ ಶರ್ಮಾ ಅವರ ಹೇಳಿಕೆಯಿಂದ ದೇಶದಾದ್ಯಂತ ಮುಸ್ಲಿಮರು ನಮಾಜ ನಂತರ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಜಾಮಾ ಮಸಿದಿಯಲ್ಲಿ ಶುಕ್ರವಾರದ ನಮಾಜನಂತರ ಯಾವುದೇ ಅಹಿತಕರ ಘಟನೆ ನಡೆಯದಿರಲಿ, ಅದಕ್ಕಾಗಿ ಬಿಜು ಪ್ರಕಾಶ ಇವರು ನೋಟಿಸ್ ನೀಡಿ ನಮಾಜ ಸಮಯದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಬಾರದು. ಯಾರಾದರೂ ಹಾಗೆ ಮಾಡಿದೆರ ಕ್ರಮ ಕ್ರಮಗೊಳ್ಳಲಾಗುವುದು ಎಂದು ಹೇಳಿದ್ದರು.

೨. ಈ ನೋಟಿಸಿನ ನಂತರ ಮುಸ್ಲಿಮ ಲೀಗ ಮತ್ತು ಸೋಶಿಯಲ ಡೆಮಾಕ್ರಟಿಕ ಪಾರ್ಟಿ ಆಫ್ ಇಂಡಿಯಾವು ವಿರೋಧಿಸಿದವು. ಈ ನಿಟ್ಟನಲ್ಲಿ ಮುಖ್ಯಮಂತ್ರಿಗಳು ಸರಕಾರದ ನೀತಿಯನ್ನು ಸ್ಪಷ್ಟಪಡಿಸಬೇಕು ಎಂದು ಕನ್ನೂರಿನ ಮುಸ್ಲಿಮ ಲೀಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ ಕರೀಂ ಚೆಲೆರಿ ಅಗ್ರಹಿಸಿದ್ದಾರೆ. ಅದೇ ರೀತಿ ಅವರು ಬಿಜು ಪ್ರಕಾಶ ವಿರುದ್ಧ ಕನ್ನೂರು ಪೊಲೀಸ ಕಮಿಷನರಗೆ ದೂರು ನೀಡಿದ್ದಾರೆ. ಇದಾದ ಬಳಿಕ ನೋಟಿಸ ಹಿಂಪಡೆದು ಬಿಜು ಪ್ರಕಾಶ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಯಿತು. ಹಾಗೆಯೇ ಅವರನ್ನು ಈ ಪ್ರಕರಣದಲ್ಲಿ ಕಾರಣ ನೀಡಿ ನೋಟಿಸ ಕೂಡಾ ಜಾರಿಗೊಳಿಸಲಾಯಿತು.

ಸಂಪಾದಕೀಯ ನಿಲುವು

ಕಾನೂನು ಸುವ್ಯವಸ್ಥೆ ಕಾಪಾಡಲು ಕೆಲಸ ಮಾಡುತ್ತಿರುವ ಪ್ರಾಮಾಣಿಕ ಪೊಲೀಸರಿಗೆ ಇಂತಹ ಪ್ರತಿಫಲ ಸಿಗುತ್ತಿದ್ದರೆ ಗಲಭೆ ಮಾಡುವ ಮುಸ್ಲಿಮರನ್ನು ತಡೆಯುವವರು ಯಾರು ?

ಕೇರಳದ ಕಮ್ಯುನಿಸ್ಟ ಸರಕಾರವು ಮುಸ್ಲಿಮರನ್ನು ಪ್ರಚೋದಿಸಬೇಕು ಮತ್ತು ಅವರು ಹಿಂಸಾಚಾರವನ್ನು ಮಾಡಬೇಕು ಎಂದು ಅನಿಸುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !