VIDEO: ದೇವಾಲಯಗಳನ್ನು ಸಾಮೂಹಿಕ ಪೂಜಾ ಕೇಂದ್ರಗಳನ್ನಾಗಿ ಮಾಡಲು ಸಂಘಟಿತ ಪ್ರಯತ್ನಗಳು ಅಗತ್ಯ! – ಸುನೀಲ ಘನವಟ, ಮಹಾರಾಷ್ಟ್ರ ಮತ್ತು ಛತ್ತೀಸಗಢ ರಾಜ್ಯ ಸಂಯೋಜಕ, ಹಿಂದೂ ಜನಜಾಗೃತಿ ಸಮಿತಿ

(ಸೌಜನ್ಯ : Hindu Janajagruti Samiti)

ಶ್ರೀ. ಸುನೀಲ ಘನವಟ

ರಾಮನಾಥಿ, ಫೋಂಡಾ – ದೇವಾಲಯ ಸಂಸ್ಕೃತಿ ರಕ್ಷಣೆಗೆ ಇನ್ನೂ ಸಾಕಷ್ಟು ಕಾರ್ಯಗಳು ನಡೆಯಬೇಕಿದೆ. ದೇವಾಲಯಗಳು ಚೈತನ್ಯದ ಚಿಲುಮೆಗಳಾಗಿರುತ್ತವೆ. ಇಂದು ಮಸೀದಿಗಳಲ್ಲಿ ಅನಧಿಕೃತ ಧ್ವನಿವರ್ಧಕಗಳ ವಿರೋಧಕ್ಕಾಗಿ ಯಾದರೂ ಪರವಾಗಿಲ್ಲ; ಆದರೆ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಪಠಿಸಲಾಗುತ್ತಿದೆ. ಅನೇಕ ದೇವಾಲಯಗಳಲ್ಲಿ ಮಹಾ ಆರತಿಯನ್ನು ಮಾಡಲಾಗುತ್ತಿದೆ. ಈಗ ದೇವಸ್ಥಾನಗಳನ್ನು ಸಾಮೂಹಿಕ ಪೂಜಾ ಕೇಂದ್ರಗಳನ್ನಾಗಿಸಲು ನಾವು ಸಂಘಟಿತ ಪ್ರಯತ್ನ ಮಾಡಬೇಕಾಗಿದೆ. ದೇವಾಲಯಗಳು ಪೂಜಾ ಕೇಂದ್ರಗಳಾದರೆ ಅವುಗಳ ಮೂಲಕವೇ ಸಮಾಜದ ಆಧ್ಯಾತ್ಮಿಕ ಶಕ್ತಿಯೂ ಹೆಚ್ಚುತ್ತದೆ. ದೇವಾಲಯಗಳು ಉಳಿದರೆ ಧರ್ಮ ಉಳಿಯುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸಗಢ ರಾಜ್ಯ ಸಂಯೋಜಕ, ಶ್ರೀ. ಸುನೀಲ ಘನವಟ ಪ್ರತಿಪಾದಿಸಿದರು. ಅವರು ಅಧಿವೇಶನದ ಐದನೇ ದಿನದಂದು ನಡೆದ ಎರಡನೇ ಸತ್ರದಲ್ಲಿ `ದೇವಾಲಯ ವಿಶ್ವಸ್ಥರು ಮತ್ತು ಪುರೋಹಿತರನ್ನು ಸಂಘಟಿಸುವುದು’ ಎಂಬ ವಿಷಯದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.