ಹಿಂದೂ ರಾಷ್ಟ್ರ ಸಂಸತ್ತು ಎಂದರೇನು ?

ಎಡದಿಂದ ವ್ಯಾಸಪೀಠದ ಮೇಲೆ ಕುಳಿತಿರುವ ಸಭಾಧ್ಯಕ್ಷರು -ಉಪಸಭಾಧ್ಯಕ್ಷ – ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ್ ಶಿಂಧೆ, ದೆಹಲಿಯ ‘ಭಾರತಮಾತಾ ಪರಿವಾರ’ದ ಪ್ರಧಾನ ಕಾರ್ಯದರ್ಶಿ ಮತ್ತು ಸುಪ್ರೀಂ ಕೋರ್ಟ್‌ನ ವಕೀಲರಾದ ಉಮೇಶ್ ಶರ್ಮಾ, ಕಾರ್ಯದರ್ಶಿ – ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಚೇತನ್ ರಾಜಹಂಸ್

ಯಾವ ರೀತಿ ಜನಹಿತ ಮತ್ತು ರಾಷ್ಟ್ರಹಿತದ ಬಗ್ಗೆ ವಿವಿಧ ವಿಷಯಗಳ ಚರ್ಚೆ ಮಾಡಲು ಜನಪ್ರತಿನಿಧಿಗಳ ಸಂಸತ್ತು ಅಸ್ತಿತ್ವದಲ್ಲಿದೆಯೋ, ಅದೇ ರೀತಿ ಧರ್ಮಹಿತದ ಬಗ್ಗೆ ಚರ್ಚಿಸಲು ಧರ್ಮಪ್ರತಿನಿಧಿಗಳ ಹಿಂದೂ ರಾಷ್ಟ್ರ ಸಂಸತ್ತು ಇದೆ. ಈ ಸಂಸತ್ತಿನಲ್ಲಿ ಅಂಗೀಕರಿಸಿದ ನಿರ್ಣಯಗಳನ್ನು ಭಾರತೀಯ ಜನಪ್ರತಿನಿಧಿಗಳಿಗೆ ಕಳುಹಿಸಲಾಗುವುದು. ಆ ಆಧಾರದಲ್ಲಿ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಯಾಗಬಹುದು. ತಾತ್ಪರ್ಯವೆಂದರೆ ಈ ಸಂಸತ್ತು ಕೇವಲ ಪ್ರತಿಕಾತ್ಮಕವಾಗಿದೆ. ಈ ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಪ್ರಸ್ತಾವನೆಗಳನ್ನು ಭವಿಷ್ಯದಲ್ಲಿ ಭಾರತೀಯ ಸಂಸತ್ತಿನಲ್ಲಿ ಚರ್ಚಿಸಬಹುದು.

೧. ಹಿಂದೂ ರಾಷ್ಟ್ರ ಸಂಸತ್ತಿನ ನೀತಿ ಸಂಹಿತೆ !
ಈ ಸಂಸತ್ತಿನಲ್ಲಿ ಪಾಲ್ಗೊಳ್ಳಲು ಆವಶ್ಯಕ ಶಿಷ್ಟಾಚಾರ ಮತ್ತು ನಿಯಮಗಳು ಮುಂದಿನಂತಿವೆ

ಅ. ಈ ಸಂಸತ್ತಿನಲ್ಲಿ ಪಾಲ್ಗೊಳ್ಳುವ ಹಿಂದುತ್ವವಾದಿಗಳನ್ನು `ಸದಸ್ಯರು’ ಎಂದು ಕರೆಯಲಾಗುವುದು.

ಆ. ಸಂಸತ್ತಿನ ಕಾರ್ಯಕಲಾಪಗಳನ್ನು ನಿಶ್ಚಿತಪಡಿಸಲು ಮತ್ತು ಸದಸ್ಯರಿಂದ ನೀತಿ ಸಂಹಿತೆಯ ಪಾಲನೆಯಾಗಬೇಕೆಂದು, ೩ ಸದಸ್ಯರ ಒಂದು ಸಭಾಧ್ಯಕ್ಷರ ಮಂಡಳವನ್ನು ಸ್ಥಾಪಿಸಲಾಗಿದೆ. ನಿರ್ದೇಶಕರ ಮಂಡಳಿಯು ಸಂಸತ್ತನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. `ಸಂಸತ್ತಿನಲ್ಲಿ ವಿಷಯವನ್ನು ಯಾರು ಮಂಡಿಸುವರು ?’, `ಅದಕ್ಕಾಗಿ ಎಷ್ಟು ಸಮಯ ಬೇಕಾಗುತ್ತದೆ ?’, ಎಂಬುದರ ನಿರ್ಣಯವನ್ನು ಅಧ್ಯಕ್ಷ ಮಂಡಳವು ತೆಗೆದುಕೊಳ್ಳುತ್ತದೆ.

ಇ. ಯಾವ ಸದಸ್ಯರಿಗೆ ಸಂಸತ್ತಿನಲ್ಲಿ ವಿಷಯವನ್ನು ಮಂಡಿಸುವುದಿದೆಯೋ, ಅವರು ವಿಷಯ ಮತ್ತು ಅದರ ಆವಶ್ಯಕತೆಯನ್ನು ಚೀಟಿಯಲ್ಲಿ ಬರೆದು ಸಭಾಧ್ಯಕ್ಷ ಮಂಡಳಕ್ಕೆ ಸ್ವೀಕೃತಿ ಪಡೆಯಲು ಅಧಿವೇಶನ ಸಮನ್ವಯ ಕಕ್ಷೆಯಲ್ಲಿ ನೀಡಬೇಕು. ಸಭಾಧ್ಯಕ್ಷರ ಅನುಮತಿಯ ನಂತರ ಸದಸ್ಯರು ವೇದಿಕೆಯ ಮುಂಭಾಗದಲ್ಲಿ ಕಾಯ್ದಿರಿಸಿದ ಆಸನದಲ್ಲಿ ಕುಳಿತುಕೊಂಡು ಸಭಾಧ್ಯಕ್ಷರ ಅನುಮತಿಯಿಂದ ಸಂಸತ್ತಿನಲ್ಲಿ ವಿಷಯವನ್ನು ಮಂಡಿಸಬಹುದು.

ಈ. ಸದಸ್ಯರು ಸಭಾಪತಿಗಳು ನೀಡಿದ ಕಾಲಾವಧಿಯಲ್ಲಿ ತಮ್ಮ ವಿಷಯವನ್ನು ಪೂರ್ಣಗೊಳಿಸುವುದು ಆವಶ್ಯಕವಾಗಿದೆ. ಸಮಯಮಿತಿ ಮುಗಿದ ನಂತರ ಸಂಸತ್ತಿನ ಕಾರ್ಯದರ್ಶಿಗಳು ಸದಸ್ಯರಿಗೆ ಸೂಚಿಸಲು ಗಂಟೆಯನ್ನು ಬಾರಿಸುತ್ತಾರೆ. ಅನಂತರವೂ ಸದಸ್ಯರು ವಿಷಯವನ್ನು ಮುಂದುವರಿಸಿದರೆ, ಅದನ್ನು ಸಭೆಯ ಮಿತಿಯ ಉಲ್ಲಂಘನೆಯಂದು ತಿಳಿದುಕೊಳ್ಳಲಾಗುವುದು. ವಿಶೇಷ ಪರಿಸ್ಥಿತಿಯಲ್ಲಿ ಸದಸ್ಯನಿಗೆ ವಿಷಯವನ್ನು ಮಂಡಿಸಲು ಹೆಚ್ಚು ಕಾಲಾವಧಿ ನೀಡುವ ನಿರ್ಣಯವನ್ನು ಸಭಾಧ್ಯಕ್ಷ ಮಂಡಳವು ತೆಗೆದುಕೊಳ್ಳಬಹುದು.

ಉ. ಸಂಸತ್ತಿನಲ್ಲಿ ಮಂಡಿಸಲಾದ ವಿಚಾರಗಳನ್ನು ಖಂಡಿಸುವುದಿದ್ದರೆ, ಆ ಸದಸ್ಯನು ಆ ಬಗ್ಗೆ ಸಭಾಧ್ಯಕ್ಷ ಮಂಡಳಕ್ಕೆ ನಿವೇದನೆಯನ್ನು ನೀಡಿ ಅನುಮತಿ ಪಡೆಯಬೇಕಾಗುವುದು.

ಊ. ಸಂಸತ್ತಿನಲ್ಲಿ ವಿಷಯವನ್ನು ಮಂಡಿಸುವಾಗ ಅಪಶಬ್ದ, ಅಸಂಸದೀಯ ಶಬ್ದಗಳನ್ನು ಯಾರೂ ಬಳಸಬಾರದು. ಈ ರೀತಿ ಮಾಡುವುದನ್ನು ಸಭೆಯ ಮರ್ಯಾದೆಯ ಉಲ್ಲಂಘನೆಯಂದು ತಿಳಿಯಲಾಗುವುದು. ಇಂತಹ ಭಾಷಣವನ್ನು ಸಭೆಯ ಕಾರ್ಯಕಲಾಪಗಳಿಂದ ತೆಗೆದುಹಾಕುವ ಅಧಿಕಾರ ಸಭಾಧ್ಯಕ್ಷ ಮಂಡಳಿಗೆ ಇರುತ್ತದೆ.

ಎ. ಸದಸ್ಯರು ಸಂಸತ್ತಿನಲ್ಲಿ ವಿಷಯವನ್ನು ಪ್ರಸ್ತಾಪಿಸುವಾಗ ಅವರು ವೇದಿಕೆಯ ಮುಂಭಾಗದಲ್ಲಿರುವ ಆಸನದಿಂದ ಎದ್ದು ವಿಷಯವನ್ನು ಪ್ರಸ್ತಾಪಿಸಬಹುದು.

೨. ಸಭಾಧ್ಯಕ್ಷ ಮಂಡಳದ ಸ್ವರೂಪ : ಸಭಾಧ್ಯಕ್ಷ ಮಂಡಳದಲ್ಲಿ ಸಭಾಧ್ಯಕ್ಷರು, ಉಪಸಭಾಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮಾವೇಶವಿರುತ್ತದೆ.

೩. ವಿಶೇಷ ಸಂಸದೀಯ ಸಮಿತಿ : ವಿಶೇಷ ಸಂಸದೀಯ ಸಮಿತಿ (ಪಾರ್ಲಿಮೆಂಟರಿ ಎಕ್ಸಪರ್ಟ್ ಕಮಿಟಿ) ಗೌರವಾನ್ವಿತ ಸದಸ್ಯರು ಮಂಡಿಸಿದ ಅಂಶಗಳನ್ನು ಆವಶ್ಯಕತೆಗನುಸಾರ ತಿದ್ದುಪಡಿ ಅಥವಾ ನಿರಾಕರಿಸ ಬಹುದು. ಅದಕ್ಕಾಗಿ ಈ ಸಮಿತಿಯ ಸದಸ್ಯರು ತಮ್ಮ ಸ್ಥಾನದಿಂದ ಎದ್ದು ಸಭಾಧ್ಯಕ್ಷರ ಅನುಮತಿಯಿಂದ ವಿಷಯವನ್ನು ಮಂಡಿಸುವರು. ಇತರ ಸದಸ್ಯರಿಗೆ ಈ ರೀತಿ ಅನುಮತಿಯನ್ನು ಪಡೆಯಲು ಸಾಧ್ಯವಿಲ್ಲ. ಇತರ ಸದಸ್ಯರು ತಮ್ಮ ಅಂಶಗಳನ್ನು ಬರೆದು ಕೊಡುವುದು ಕಡ್ಡಾಯವಾಗಿದೆ.