ಗೋವಾದಲ್ಲಿ ಮತಾಂತರ ನಿಷೇಧ ಕಾನೂನು ರೂಪಿಸಲು ತುರ್ತಾಗಿ ಹೆಜ್ಜೆ ಇಡಲು ಆಗ್ರಹ !

ರಾಷ್ಟ್ರೀಯ ಸ್ತರದಲ್ಲಿ ಮತಾಂತರವನ್ನು ತಡೆಗಟ್ಟಲು ಕಾನೂನು ಸಹಿತ ಸಂವಿಧಾನದಲ್ಲಿ ತಿದ್ದುಪಡಿಯ ಅವಶ್ಯಕತೆಯಿದೆ !

ಎಡದಿಂದ ಎಂ. ನಾಗೇಶ್ವರ ರಾವ್, ಶ್ರೀಮತಿ ಏಸ್ಥರ ಧನರಾಜ, ಸದ್ಗುರು ಡಾ. ಚಾರುದತ್ತ ಪಿಂಗಳೆ, ಶ್ರೀ. ಶಂಕರ ಖರೇಲ ಮತ್ತು ಶ್ರೀ. ಪ್ರಬಲ ಪ್ರತಾಪ ಸಿಂಹ ಜುದೇವ

ಇಂದು ದೇಶದಲ್ಲಿ ಪ್ರತಿ ವರ್ಷ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಹಿಂದೂಗಳನ್ನು ಮತಾಂತರಿಸಿ ಅವರನ್ನು ಕ್ರೈಸ್ತ ಮತ್ತು ಮುಸಲ್ಮಾನರನ್ನಾಗಿ ಮಾಡಲಾಗುತ್ತಿದೆ. ಅನೇಕ ರಾಜ್ಯಗಳಲ್ಲಿ ಮತಾಂತರನಿಷೇಧ ಕಾನೂನು ಇದ್ದರೂ ರಾಜಾರೋಶವಾಗಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳನ್ನು ಮತಾಂತರಿಸಿ ಭಾರತವನ್ನು ಒಡೆದು ನಾಶ ಮಾಡುವ ಸಂಚು ಮುಂದುವರಿದಿದೆ. ಮತಾಂತರದ ಸಮಸ್ಯೆ ದೇಶವ್ಯಾಪಿಯಾಗಿರುವುದರಿಂದ ಸಂವಿಧಾನದಲ್ಲಿನ ಕಲಮ್ 25 ರಲ್ಲಿ ತಿದ್ದುಪಡಿ ತರುವ ಮೂಲಕ ಅದರಲ್ಲಿನ ಧರ್ಮದ ಪ್ರಸಾರ (Propagate Religion) ಎಂಬ ಶಬ್ದವನ್ನು ತೆಗೆದು ಹಾಕಬೇಕು. ಅದರೊಂದಿಗೆ ಗೋವಾ ಸರಕಾರವು ಈ ಕುರಿತಾದ ಗೊತ್ತುವಳಿಯನ್ನು ಅನುಮೋದಿಸಿ ಕೇಂದ್ರ ಸರಕಾರಕ್ಕೆ ಕಳಿಸಬೇಕು. ಆಗ ಮಾತ್ರ ಮತಾಂತರವನ್ನು ನಿಷೇಧಿಸಬಹುದು. ತಮ್ಮತಮ್ಮ ಧರ್ಮದ ಪಾಲನೆಯನ್ನು ಮಾಡಲು ಯಾವುದೇ ಅಡೆತಡೆ ತರುವ ಆವಶ್ಯಕತೆ ಇಲ್ಲ; ಆದರೆ ಇತರರನ್ನು ಮೋಸಗೊಳಿಸಿ ಒತ್ತಾಯದಿಂದ ಅಥವಾ ಅವರ ಅಸಹಾಯಕತೆಯ ದುರ್ಲಾಭ ಪಡೆದು ಮಾಡಲಾಗುವ ಮತಾಂತರದ ವಿರುದ್ಧ ಪ್ರತಿಬಂಧವನ್ನು ತರುವ ಆವಶ್ಯಕತೆ ಇದೆ, ಎಂಬ ಬೇಡಿಕೆಯನ್ನು ಸಿಬಿಐ.ನ ಮಾಜಿ ಹಂಗಾಮಿ ಸಂಚಾಲಕರಾದ ಶ್ರೀ. ಎಮ್. ನಾಗೇಶ್ವರ ರಾವ್ ಇವರು ಪತ್ರಿಕಾಗೋಷ್ಠಿಯಲ್ಲಿ ಮಾಡಿದರು.

ಅವರು 10 ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಮೂರನೇಯ ದಿನ ಗೋವಾದ ಫೋಂಡಾದಲ್ಲಿನ ‘ಶ್ರೀ ರಾಮನಾಥ ದೇವಸ್ಥಾನ’ದಲ್ಲಿನ ವಿದ್ಯಾಧಿರಾಜ ಸಭಾಗೃಹದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ವೇದಿಕೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ, ಕ್ರೈಸ್ತ ಪಂಥವನ್ನು ತ್ಯಜಿಸಿ ಹಿಂದೂವಾದ ತೆಲಂಗಣಾದ ಶ್ರೀಮತಿ ಎಸ್ಥರ್ ಧನರಾಜ, ಛತ್ತಿಸಗಡ್‌ನಲ್ಲಿ ಲಕ್ಷಗಟ್ಟಲೇ ಹಿಂದೂಗಳನ್ನು ಸ್ವಧರ್ಮಕ್ಕೆ ಮರಳಿ ಕರೆತಂದಿರುವ ಭಾಜಪದ ಪ್ರದೇಶಮಂತ್ರಿ ಶ್ರೀ. ಪ್ರಬಲ ಪ್ರತಾಪಸಿಂಹ ಜುದೇವ ಮತ್ತು ನೇಪಾಳದ ವಿಶ್ವ ಹಿಂದೂ ಮಹಾಸಂಘದ ಜಿಲ್ಲಾಧ್ಯಕ್ಷ ಶ್ರೀ. ಶಂಕರ ಖರೆಲ ಇವರು ಉಪಸ್ಥಿತರಿದ್ದರು.

ಈ ವೇಳೆ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು (ಡಾ.) ಪಿಂಗಳೆಯವರು ಮಾತನಾಡುತ್ತಾ, ಮತಾಂತರವನ್ನು ತಡೆಗಟ್ಟಲು ಹಿಂದೂಗಳಲ್ಲಿ ಜಾಗೃತಿ ಮೂಡಿಸಿ ಅವರಿಗೆ ಧರ್ಮಶಿಕ್ಷಣ ನೀಡಬೇಕು. ಧರ್ಮಶಿಕ್ಷಣ ಪಡೆದು ಧರ್ಮಾಚರಣೆ ಆರಂಭಿಸಿದರೆ ಯಾರೂ ಮತಾಂತರಿಸಲು ಸಾಧ್ಯವಿಲ್ಲ; ಗೋವಾ ಮುಖ್ಯಮಂತ್ರಿ ಶ್ರೀ. ಪ್ರಮೋದ ಸಾವಂತ ಇವರು ಮತಾಂತರ ನಿಷೇಧವನ್ನು ಘೋಷಿಸಿದ್ದಾರೆ. ನಾವೂ ಅದನ್ನು ಸ್ವಾಗತಿಸುತ್ತೇವೆ. ಅಲ್ಲದೆ, ಗೋವಾದಲ್ಲಿ ಡಾಮನಿಕ ಮತ್ತು ಇತರರರಿಂದ ಮತಾಂತರ ಆಗುತ್ತಿದೆ ಅದನ್ನು ತಡೆಯಲು ಕಾನೂನು ಸೇರಿದಂತೆ ಹೆಚ್ಚು ಪರಿಣಾಮಕಾರಿ ಉಪಾಯೋಜನೆಗಳನ್ನು ಕೈಗೊಳ್ಳಬೇಕಾಗಿದೆ ಎಂದರು.

ಛತ್ತೀಸಗಡದ ಭಾಜಪದ ರಾಜ್ಯ ಕಾರ್ಯದರ್ಶಿ ಶ್ರೀ. ಪ್ರಬಲ ಪ್ರತಾಪ ಸಿಂಹ ಜುದೇವ ಇವರು ಮಾತನಾಡುತ್ತಾ, ಹಿಂದೂಗಳನ್ನು ಮತಾಂತರಿಸುವ ವಿದೇಶಿ ಶಕ್ತಿಗಳ ಬಳಿ ಅಪಾರ ಹಣ ಮತ್ತು ಸಂಪನ್ಮೂಲಗಳಿವೆ. ನನ್ನ ತಂದೆ ಲಕ್ಷಾಂತರ ಹಿಂದೂಗಳನ್ನು ಮತ್ತು ನಾನು ೧೫ ಸಾವಿರ ಹಿಂದೂಗಳನ್ನು ಘರವಾಪಸಿ ಮಾಡಿಸಿದ್ದೇವೆ; ಆದರೆ ಹೀಗೆ ಮಾಡುತ್ತಿರುವಾಗ ಮಿಷನರಿಗಳು ಮತ್ತು ನಕ್ಸಲೀಯರಿಂದ ನಮ್ಮ ಮೇಲೆ ಮಾರಣಾಂತಿಕ ದಾಳಿಗಳು ನಡೆದಿವೆ. ಮತಾಂತರ ತಡೆಗೆ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಧರ್ಮ ಸಮಿತಿ ಸ್ಥಾಪಿಸಿ ಧರ್ಮ ಸೇನೆ ರಚಿಸಬೇಕು. ಅದರಿಂದ ಉತ್ತಮ ಲಾಭವಾಗಿದೆ ಎಂದರು.

ನೇಪಾಳದ ಶ್ರೀ. ಶಂಕರ ಖರೆಲ ಮಾತನಾಡುತ್ತಾ, 3 ಕೋಟಿ ಜನರಿರುವ ನೇಪಾಳದಲ್ಲಿ 30 ಲಕ್ಷ ಜನರು ಮತಾಂತರಗೊಂಡಿದ್ದಾರೆ. ಇದು ಕಳವಳಕಾರಿ ವಿಷಯವಾಗಿದೆ. ಈ ಮತಾಂತರವನ್ನು ತಡೆಗಟ್ಟಲು ಬಡತನ, ಶಿಕ್ಷಣ ಮತ್ತು ಇತರ ಮೂಲಭೂತ ಅಂಶಗಳ ಮೇಲೆ ಕೆಲಸ ಮಾಡುವುದು ಅವಶ್ಯಕವಾಗಿದೆ ಎಂದು ಹೇಳಿದರು.

ತೆಲಂಗಾಣಾದ ಎಸ್ಥರ ಧನರಾಜ ಇವರು ಮಾತನಾಡುತ್ತಾ, ನಾನು ಸ್ವತಃ ಕ್ರಿಶ್ಚಿಯನ್ ಆಗಿದ್ದೆ; ಆದರೆ ನಾನು ಅಮೆರಿಕಕ್ಕೆ ಹೋಗಿ ಬೈಬಲ್‌ನ ಅಧ್ಯಯನ ಮಾಡಿದಾಗ ಅದರಲ್ಲಿ ಯಾವುದೇ ತರ್ಕವಿಲ್ಲ ಎಂದು ನನಗೆ ಗಮನಕ್ಕೆ ಬಂದಿತು. ನಂತರ ಭಾರತಕ್ಕೆ ಬಂದಾಗ ಮಿಷನರಿಗಳು ಮತಾಂತರಕ್ಕಾಗಿ ನಡೆಸುತ್ತಿದ್ದ ಷಡ್ಯಂತ್ರಗಳನ್ನು ಕಂಡು ಅದರ ವಿರುದ್ಧ ಜಾಗೃತಿ ಆರಂಭಿಸಿದ್ದೇನೆ. ಅದೇ ರೀತಿ ಮತಾಂತರಗೊಂಡ ಹಿಂದೂಗಳನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರುವ ಹಾಗೂ ಯುವಕರಿಗೆ ಸಲಹೆ ನೀಡುವ ಕೆಲಸವನ್ನೂ ಮಾಡುತ್ತಿದ್ದೇನೆ ಎಂದು ಹೇಳಿದರು.