ಮಸೀದಿಗಳ ಮೇಲಿನ ಭೋಂಗಾಗಳಿಗೆ ಯಾವ ಕಾನೂನಿಗನುಸಾರ ಶಾಶ್ವತ ಬಳಕೆಗೆ ಅನುಮತಿ ನೀಡಿದಿರಿ ?

ಕರ್ನಾಟಕ ಉಚ್ಚ ನ್ಯಾಯಾಲಯದಿಂದ ರಾಜ್ಯ ಸರಕಾರಕ್ಕೆ ವಿಚಾರಣೆ

ಬೆಂಗಳೂರು – ಮಸೀದಿಗಳ ಮೇಲೆ ಹಾಕಲಾಗಿರುವ ಭೋಂಗಾಗಳಿಗೆ ಶಾಶ್ವತಸ್ವರೂಪದ ಅನುಮತಿಯನ್ನು ನೀಡಲಾಗಿದೆಯೇ ? ಮತ್ತು ಯಾವ ಕಾನೂನಿಗನುಸಾರ ನೀಡಲಾಗಿದೆ ? ಎಂಬ ಮಾಹಿತಿಯನ್ನು ನೀಡಿರಿ, ಎಂಬ ಆದೇಶವನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯದ ಆಡಳಿತಾತ್ಮಕ ಅಧಿಕಾರಿ ಮತ್ತು ಪೊಲೀಸರಿಗೆ ನೀಡಿದೆ. ಧ್ವನಿಮಾಲಿನ್ಯ ನಿಯಮಕ್ಕನುಸಾರ ಭೋಂಗಾಗಳ ಬಳಕೆಯ ಮೇಲೆ ನಿಷೇಧವನ್ನು ತರಲು ಯಾವ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ ?, ಈ ಬಗೆಗಿನ ಮಾಹಿತಿಯನ್ನು ಪ್ರಸ್ತುತಪಡಿಸುವ ಆದೇಶವನ್ನೂ ನ್ಯಾಯಾಲಯವು ನೀಡಿದೆ. ಧ್ವನಿಮಾಲಿನ್ಯಕ್ಕೆ ಸಂಬಂಧಿಸಿದಂತೆ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಆಲಿಕೆಯ ಸಮಯದಲ್ಲಿ ೧೬ ಧಾರ್ಮಿಕ ಸ್ಥಳಗಳ ಮೇಲೆ ಭೋಂಗಾಗಳನ್ನು ಬಳಸಲು ಶಾಶ್ವತಸ್ವರೂಪದ ಅನುಮತಿಯನ್ನು ನೀಡಿದ ಪ್ರಕರಣದಲ್ಲಿ ನ್ಯಾಯಾಲಯವು ಈ ಆದೇಶವನ್ನು ನೀಡಿತು. ಕರ್ನಾಟಕ ವಕ್ಫ್ ಬೋರ್ಡ್ ಧಾರ್ಮಿಕ ಸ್ಥಳಗಳ ಮೇಲೆ ಭೋಂಗಾಗಳನ್ನು ಹಚ್ಚಲು ಸುತ್ತೊಲೆಯನ್ನು ಹೊರಡಿಸಿತ್ತು ಮತ್ತು ಈ ಸುತ್ತೋಲೆಯ ಆಧಾರದಲ್ಲಿ ಭೋಂಗಾಗಳನ್ನು ಹಚ್ಚಲಾಗಿತ್ತು. ವಕ್ಫ್ ಬೋರ್ಡ್ ಭೋಂಗಾಗಳನ್ನು ಹಚ್ಚುವ ಆದೇಶ ಮತ್ತು ಅನುಮತಿ ನೀಡಲು ಕಾನೂನುಬದ್ಧ ದೃಷ್ಟಿಯಿಂದ ಸಕ್ಷಮವಿಲ್ಲ, ಎಂದು ಈ ಅರ್ಜಿಯಲ್ಲಿ ಹೇಳಲಾಗಿದೆ.

೧. `ಧ್ವನಿ ಮಾಲಿನ್ಯ ನಿಯಮ ೨೦೦೦’ದ ಕಲಮ್ ೫ (೩) ರ ಸಂದರ್ಭದಲ್ಲಿ ಭೋಂಗಾಗಳನ್ನು ಬಳಸಲು ಅನುಮತಿಯನ್ನು ನೀಡಲು ಸಾಧ್ಯವಿಲ್ಲವೆಂದು ಈ ಅರ್ಜಿಯಲ್ಲಿ ಹೇಳಲಾಗಿದೆ. ನ್ಯಾಯಾಲಯವು ಈ ಬಗ್ಗೆ ಸರಕಾರಿ ನ್ಯಾಯವಾದಿಗಳಿಂದ ಸತ್ಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಾಗ ಅವರಿಗೆ ಯಾವುದೇ ಸಮಾಧಾನಕರ ಉತ್ತರ ನೀಡಲು ಸಾಧ್ಯವಾಗಲಿಲ್ಲ.

೨. ಮಸೀದಿಗಳ ನ್ಯಾಯವಾದಿಗಳೂ ಭೋಂಗಾಗಳ ಬಳಕೆಗಾಗಿ ಅಧಿಕೃತ ಅನುಮತಿಯನ್ನು ಪಡೆದ ಬಗ್ಗೆ ಹೇಳಿದರು. ಅನುಮತಿ ಇರುವ ಭೋಂಗಾಗಳ ಧ್ವನಿ ಮಿತಿಮೀರಿ ಹೋಗದಂತೆ ತಡೆಯಲು ವಿಶೇಷ ಉಪಕರಣವನ್ನು ಅಳವಡಿಸಲಾಗಿದೆ. ರಾತ್ರಿ ೧೦ ಗಂಟೆಯಿಂದ ಬೆಳಗ್ಗೆ ೬ ರ ಸಮಯದಲ್ಲಿ ಭೋಂಗಾಗಳ ಬಳಕೆ ಮಾಡಲಾಗುವುದಿಲ್ಲ, ಎಂದೂ ಹೇಳಿದರು; ಆದರೆ ಶಾಶ್ವತ ಬಳಕೆಗೆ ಅನುಮತಿ ನೀಡಲಾಗಿದೆಯೇ ? ಎಂಬ ಪ್ರಶ್ನೆಗೆ ಉತ್ತರಿಸಲು ನ್ಯಾಯವಾದಿಗಳಿಗೆ ಸಾಧ್ಯವಾಗಲಿಲ್ಲ.