ಹಿಂದೂಗಳು ಅಲ್ಪಸಂಖ್ಯಾತರಿದ್ದಾರೆ, ಅಲ್ಲಿ ಸಂವಿಧಾನದ ನಿಯಮಗಳು ಅವರಿಗೆ ಅನ್ವಯಿಸುವುದಿಲ್ಲ ! – ಎಮ್. ನಾಗೇಶ್ವರ ರಾವ, ಮಾಜಿ ಮಹಾಸಂಚಾಲಕರು, ಸಿಬಿಐ

ಮೊದಲ ದಿನ : ಸತ್ರ(ಅಂಶ) ಎರಡು : ರಾಷ್ಟ್ರೀಯ ಕಾರ್ಯ ಮತ್ತು ಸಾಂವಿಧಾನಾತ್ಮಕ ಸುಧಾರಣೆ

ಎಮ್. ನಾಗೇಶ್ವರ ರಾವ

ಕೇಂದ್ರೀಯ ಅಪರಾಧ ತನಿಖಾ ವಿಭಾಗದ (‘ಸಿಬಿಐ’ನ) ಮಾಜಿ ಮಹಾಸಂಚಾಲಕರಾದ ಶ್ರೀ. ಎಮ್ ನಾಗೇಶ್ವರ ರಾವ್ ಇವರು, ‘ಭಾರತದಲ್ಲಿ ಹಿಂದೂ ಧರ್ಮದ ಪಾಲನೆ, ಅಧ್ಯಯನ ಮತ್ತು ಪ್ರಚಾರದ ಸ್ವಾತಂತ್ರ್ಯದ ಅಭಾವ’ ಈ ಬಗ್ಗೆ ಮಾತನಾಡುವಾಗ “ಸಂವಿಧಾನಕ್ಕನುಸಾರ ದೊರಕುವ ೫ ಅಧಿಕಾರಗಳ ಪೈಕಿ ಹಿಂದೂಗಳಿಗೆ ಕೇವಲ ರಾಜಕೀಯ ಅಧಿಕಾರವಿದೆ; ಆದರೆ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಈ ಕ್ಷೇತ್ರಗಳಲ್ಲಿ ಹಿಂದೂಗಳಿಗೆ ಸಮಾನ ಸಾಂವಿಧಾನಿಕ ಹಕ್ಕುಗಳನ್ನು ಅನುಭವಿಸಲು ಸಾಧ್ಯವಿಲ್ಲ. ಹಿಂದೂಗಳನ್ನು ದ್ವಿತೀಯ ಶ್ರೇಣಿ ನಾಗರಿಕರನ್ನಾಗಿ ಮಾಡಲಾಗಿದೆ. ಆದುದರಿಂದ ಹಿಂದೂಗಳಿಗೆ ಸಮಾನ ಹಕ್ಕು ದೊರಕಲು ಪ್ರಯತ್ನಿಸಬೇಕು. ಕಾಶ್ಮೀರದಲ್ಲಿ ೯೦ ನೇ ದಶಕದಲ್ಲಿ ಹಿಂದೂಗಳ ನರಮೇಧ ಮಾಡಲಾಯಿತು. ಲಕ್ಷಗಟ್ಟಲೇ ಹಿಂದೂಗಳು ಅಲ್ಲಿಂದ ಪಲಾಯನಗೈಯ್ಯುವಂತೆ ಒತ್ತಾಯಿಸಲಾಯಿತು; ಆದರೆ ಅವರನ್ನು ರಕ್ಷಿಸಲು ಯಾರೂ ಪ್ರಯತ್ನಿಸಲಿಲ್ಲ. ಯಾವ ಸಮಯದಲ್ಲಿ ಹಿಂದೂ ಅಲ್ಪಸಂಖ್ಯಾತರಾಗುವರೋ, ಆಗ ದೇಶದ ಸಂವಿಧಾನದಲ್ಲಿನ ನಿಯಮಗಳು ಅವರಿಗೆ ಅನ್ವಯಿಸುವುದಿಲ್ಲ. ಸರಕಾರ ಹಿಂದೂಗಳನ್ನು ಸಮರ್ಥಿಸುವುದೂ ಇಲ್ಲ. ಮಿಝೊರಾಮ್‌ನಲ್ಲಿ ಹಿಂದೂಗಳ ದೇವಸ್ಥಾನಗಳಿಲ್ಲ, ಅಲ್ಲಿ ಶೇ. ೧೦೦ ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಇದೆ. ರಾಜ್ಯ, ಜಿಲ್ಲೆ, ಊರುಗಳಿಂದ ಹಿಂದೂಗಳು ಪಲಾಯನಗೈಯ್ಯುತ್ತಿದ್ದಾರೆ; ಆದರೆ ‘ಈ ಹಿಂದೂಗಳು ಇತರ ಸ್ಥಳಕ್ಕೆ ಎಲ್ಲಿಗೆ ಹೋಗುವರು ?’, ಎಂಬ ವಿಚಾರ ಮಾಡಬೇಕು”, ಎಂದು ಹೇಳಿದರು.

ಅವರು ಮುಂದೆ ಮಾತನಾಡುತ್ತಾ,

೧. ತ್ರಿಪುರೇಶ್ವರ ದೇವಸ್ಥಾನದಲ್ಲಿ ಪ್ರಾಣಿಬಲಿಯನ್ನು ನೀಡುವ ವಿಷಯದಲ್ಲಿ ನ್ಯಾಯಾಲಯವು ನಿಷೇಧ ತರುತ್ತದೆ; ಆದರೆ ಭಾರತದಲ್ಲಿ ಪ್ರತಿದಿನ ಲಕ್ಷಗಟ್ಟಲೇ ಪ್ರಾಣಿಗಳು ಕತ್ತರಿಸಲ್ಪಡುತ್ತವೆ, ಅದರ ಮೇಲೆ ನಿಷೇಧವನ್ನು ತರುವುದಿಲ್ಲ. ‘ಪಿಂಕ್ ರಿವೊಲ್ಯುಶನ್’ (ಗೋಮಾಂಸ ಮಾರಾಟಕ್ಕೆ ಪ್ರೋತ್ಸಾಹ ನೀಡುವ ಧೋರಣೆ) ನಿಲ್ಲಿಸಿ ‘ವೈಟ್ ರಿವೋಲ್ಯುಶನ್ (ಹಾಲಿನ ಉತ್ಪಾದನೆಗಳಲ್ಲಿ ಹೆಚ್ಚಳ) ನಾವು ತರುತ್ತೇವೆ’, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದರು; ಆದರೆ ಇಂದಿನ ವಸ್ತುಸ್ಥಿತಿಯನ್ನು ನೋಡಿದರೆ ಜಗತ್ತಿನಲ್ಲಿ ಮಾಂಸ ಮತ್ತು ಗೋಮಾಂಸ ಮಾರಾಟ ಮಾಡುವಲ್ಲಿ ಭಾರತವು ಎರಡನೇಯ ಕ್ರಮಾಂಕದಲ್ಲಿದೆ. ಪ್ರತಿದಿನ ೧ ಲಕ್ಷ ಪ್ರಾಣಿಗಳ ಹತ್ಯೆಯನ್ನು ಮಾಡಲಾಗುತ್ತದೆ. ವಿದೇಶಕ್ಕೆ ಮಾಂಸವನ್ನು ರಫ್ತು ಮಾಡಲು ಸಹಾಯಧನ ನೀಡಲಾಗುತ್ತದೆ’, ಎಂದು ಹೇಳಿದರು.

೨. ಇಂದು ಕ್ರೈಸ್ತರು ಮತ್ತು ಮುಸಲ್ಮಾನರು ಆಗಿರುವುದು ಎಂದರೆ ಹಿಂದೂಗಳನ್ನು ಮತಾಂತರಿಸಲು ಅನುಮತಿ ಇದ್ದಂತೆ ಆಗಿದೆ.

೩. ದೇವಸ್ಥಾನಗಳ ಸರಕಾರೀಕರಣದಿಂದಾಗಿ, ದೇವಸ್ಥಾನಗಳ ಮುಂದೆ ಚಪ್ಪಲಿ ಇಡುವುದರಿಂದ ಹಿಡಿದು ದರ್ಶನದವರೆಗೆ ಪ್ರತಿಯೊಂದಕ್ಕೂ ಹಿಂದೂಗಳು ಹಣ ಪಾವತಿಸಬೇಕಾಗುತ್ತದೆ. ಹಿಂದೂಗಳು ತಮ್ಮದೇ ದೇವರನ್ನು ಭೇಟಿಯಾಗಲು ಏಕೆ ಹಣ ಪಾವತಿಸಬೇಕು? ಒಂದು ರೀತಿಯಲ್ಲಿ ಹೇಳುವುದಾದರೆ, ‘ಇದು ಔರಂಗಜೇಬನು ವಿಧಿಸಿದ ಜಿಝಿಯಾ ತೆರಿಗೆಗಿಂತ ಭೀಕರವಾದ ತೆರಿಗೆ ಆಗಿದೆ’ ಎಂದು ಹೇಳಿದರೆ ತಪ್ಪಾಗಲಾರದು.

೪. ಕಲಮ ೧೨, ೨೫ ಮತ್ತು ೨೬ ಅನ್ನು ತೆಗೆದುಹಾಕಬೇಕು ಮತ್ತು ಕೇಂದ್ರ ಸರಕಾರದ ಮೂಲಕ ‘ಸೆಂಟ್ರಲ್ ಟೆಂಪಲ್ ಆಕ್ಟ್’ (ಕೇಂದ್ರ ದೇವಾಲಯ ನಿರ್ವಹಣಾ ಕಾಯ್ದೆ) ಅನ್ನು ಅನ್ವಯಿಸಬೇಕಾಗಬಹುದು. ಅದರ ಮೂಲಕ ದೇವಸ್ಥಾನಗಳು ಸರಕಾರದ ವಶದಿಂದ ಮುಕ್ತವಾಗಿ ಅವುಗಳ ನಿರ್ವಹಣೆ ಹಿಂದೂಗಳ ವಶಕ್ಕೆ ಬರುವುದು.

೫. ಹಿಂದೂ ಧರ್ಮದಲ್ಲಿನ ಇಂತಹ ಒಂದು ಸುಧಾರಣೆ ಹೇಳಿದಾಗ, ‘ದೇವಸ್ಥಾನಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತದೆ’ ಎಂಬ ಕಾರಣ ಹೇಳಿ ಹಿಂದೂಗಳು ಸಂಘಟಿತರಾಗುವುದರಿಂದ ತಡೆಯಲಾಗುತ್ತದೆ; ಆದರೆ ಪ್ರಾಚೀನ ಕಾಲದಿಂದಲೂ ಹಿಂದೂಗಳು ತಮ್ಮ ದೇವಾಲಯಗಳನ್ನು ಅತ್ಯಂತ ಪ್ರಾಮಾಣಿಕತನದಿಂದ ನಿಭಾಯಿಸುತ್ತಿದ್ದಾರೆ. ಆದುದರಿಂದ ಇಂತಹ ತಪ್ಪು ಕಲ್ಪನೆಗಳಿಗೆ ಬಲಿಯಾಗದೆ ದೇವಸ್ಥಾನಗಳನ್ನು ಹಿಂದೂಗಳು ಮರಳಿ ಪಡೆಯುವ ನಿಟ್ಟಿನಲ್ಲಿ ಈ ಅಧಿವೇಶನದ ಮೂಲಕ ಪ್ರಯತ್ನ ನಡೆಸಬೇಕು.

೬. ದೇವಸ್ಥಾನಗಳಿಂದ ಬರುವ ಹಣವನ್ನು ಸರಕಾರ ತನ್ನ ಸ್ವಂತ ಖರ್ಚಿಗೆ ಬಳಸುತ್ತಿದೆಯೇ ಹೊರತು ದೇವಸ್ಥಾನಗಳ ಅಭಿವೃದ್ಧಿಗಾಗಿ ಬಳಸುತ್ತಿಲ್ಲ. ಆದ್ದರಿಂದ ಹಿಂದೂಗಳು ದೇವಸ್ಥಾನಗಳನ್ನು ಸರಕಾರದ ವಶದಿಂದ ಮುಕ್ತಗೊಳಿಸಲು ಪ್ರಯತ್ನಿಸಬೇಕು.

ಸಮಾನ ನಾಗರಿಕ ಕಾನೂನನ್ನು ಕಣ್ಣುಮುಚ್ಚಿ ಬೆಂಬಲಿಸಬೇಡಿ ! – ಎಂ. ನಾಗೇಶ್ವರ ರಾವ್, ಮಾಜಿ ಮಹಾನಿರ್ದೇಶಕರು, ಸಿಬಿಐ

ಸಮಾನ ನಾಗರಿಕ ಕಾನೂನಿನ ಬಗ್ಗೆ ನಿರಂತರವಾಗಿ ಚರ್ಚೆಯಾಗುತ್ತಿದೆ. ಅದನ್ನು ಬಹುಸಂಖ್ಯಾತ ಹಿಂದೂಗಳು ಬೆಂಬಲಿಸುತ್ತಿದ್ದಾರೆ; ಆದರೆ ಆ ಕಾನೂನು ಏನು ಹೇಳುತ್ತದೆ ಎಂದು ಸರಿಯಾಗಿ ತಿಳಿದುಕೊಳ್ಳದೇ ಅದನ್ನು ಕುರುಡಾಗಿ ಬೆಂಬಲಿಸಬೇಡಿ. ನಾವು ದೇಶದಲ್ಲಿ ಸಮಾನತೆಯ ಬಗ್ಗೆ ಮಾತನಾಡುತ್ತೇವೆ; ಆದರೆ ನರಿಗಳು ಮತ್ತು ಜಿಂಕೆಗಳಿಗೆ ಸಮಾನ ಹಕ್ಕುಗಳನ್ನು ನೀಡುವುದು ಹೇಗೆ ?