ಹಿಂದೂಗಳೇ, 2025 ರಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲು ಇಂದಿನಿಂದಲೇ ಕೃತಿಶೀಲರಾಗಿ ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ

‘ದಶಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ವು ಉತ್ಸಾಹ ವಾತಾವರಣದಲ್ಲಿ ಆರಂಭ !

ಶುಕ್ರವಾರದ ಪ್ರಾರ್ಥನೆಯ ನಂತರ ಮತಾಂಧರು ದೇಶಾದ್ಯಂತ ನಡೆಸಿದ ಹಿಂಸಾಚಾರವನ್ನು ಗಮನಿಸಿದರೆ, ಎಲ್ಲಿಯ ವರೆಗೆ ಇಡೀ ಆಡಳಿತ ವ್ಯವಸ್ಥೆಯು ಹಿಂದೂಗಳ ಹಿತಾಸಕ್ತಿಗೆ ಪೂರಕವಾಗಿರುವುದಿಲ್ಲವೋ ಅಲ್ಲಿಯವರೆಗೆ ಹಿಂದೂ ರಾಷ್ಟ್ರಕ್ಕಾಗಿ ನಮಗೆ ಹೋರಾಡಲೇಬೇಕಾಗಿದೆ. ‘ವಾರಣಾಸಿಯಲ್ಲಿರುವ ನಂದಿಯು ಇಂದಿಗೂ ಜ್ಞಾನವಾಪಿ ಮಸೀದಿಯತ್ತ ಮುಖ ಮಾಡಿ ಮೂಲ ವಿಧ್ವಂಸಗೊಂಡ ದೇವಸ್ಥಾನದ ಭಗ್ನಾವಶೇಷವನ್ನು ನೋಡುತ್ತಿದೆ ! ಕರ್ನಾಟಕದಲ್ಲಿ ‘ಪಹಲೇ ಹಿಜಾಬ್, ಬಾದ್ ಮೇ ಕಿತಾಬ್’ ಎಂಬ ಅಭಿಯಾನವನ್ನು ಮೂಲಭೂತವಾದಿಗಳು ವಿದ್ಯಾರ್ಥಿನಿಯರ ಮೂಲಕ ಆರಂಭಿಸಿದ್ದರು. ಅವರ ವಿರುದ್ಧ ಉಚ್ಚ ನ್ಯಾಯಾಲಯವು ತೀರ್ಪು ನೀಡಿದ ನಂತರವೂ ಹಿಜಾಬ್‌ಗಾಗಿ ಒತ್ತಾಯಿಸುವ ಮುಸ್ಲಿಮರಿಗೆ ‘ಕುರಾನ್ ಶ್ರೇಷ್ಠವೇ ಅಥವಾ ದೇಶದ ಸಂವಿಧಾನವೇ ?’, ಎಂದು ಪ್ರಶ್ನಿಸಲು ದೇಶದ ಯಾವುದೇ ‘ಸೆಕ್ಯುಲರ್’ವಾದಿಗೆ ಧೈರ್ಯವಾಗಲಿಲ್ಲ ! ಹಿಂದೂಗಳು ‘ಹಿಂದೂ ರಾಷ್ಟ್ರ’ಕ್ಕಾಗಿ ಒತ್ತಾಯಿಸುವುದು ಹೇಗೆ ಅಯೋಗ್ಯವಿದೆ ? ಇದು ನಮ್ಮ ನೈಸರ್ಗಿಕ ಮತ್ತು ಸಾಂವಿಧಾನಿಕ ಹಕ್ಕಾಗಿದೆ ! ಪ್ರಸ್ತುತ ಭಾರತದಲ್ಲಿ ಸಕ್ರಿಯವಿರುವ ಹಿಂದೂವಿರೋಧಿ ‘ಅಲಾಯನ್ಸ್’ನ ಹಿಂದೆ ರಾಜಕೀಯ ಸ್ವಾರ್ಥವಿದೆ. ಈ ‘ಅಜೆಂಡಾ’ವು ಹಿಂದೂ ರಾಷ್ಟ್ರದ ಮುಂದಿರುವ ದೊಡ್ಡ ಸವಾಲಾಗಿದೆ ! ಈ ಹಿಂದೂವಿರೋಧಿ ‘ಅಲಾಯನ್ಸ್’ಅನ್ನು ಸೋಲಿಸಲು, ಮುಂಬರುವ ಕಾಲದಲ್ಲಿ ನಾವು ಅದನ್ನು ವೈಚಾರಿಕ ಮತ್ತು ಬೌದ್ಧಿಕ ಮಟ್ಟದಲ್ಲಿ ನಿರಂತರವಾಗಿ ಖಂಡಿಸಬೇಕಾಯಿತು. ಆ ದೃಷ್ಟಿಯಿಂದ ಈ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಮಹತ್ವದ್ದಾಗಿದೆ. ಕಾಲಮಹಾತ್ಮೆಗನುಸಾರ 2025 ರಲ್ಲಿ ಹಿಂದೂ ರಾಷ್ಟ್ರ ಬಂದೇ ಬರುವುದು, ಅದಕ್ಕಾಗಿ ಹಿಂದೂಗಳು ಈಗಿನಿಂದಲೇ ಕೃತಿಶೀಲರಾಗಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಕರೆ ನೀಡಿದರು. ಅವರು ಗೋವಾದ ಫೋಂಡಾದಲ್ಲಿರುವ ‘ಶ್ರೀ ರಾಮನಾಥ ದೇವಸ್ಥಾನ’ದಲ್ಲಿ ನಡೆಯುತ್ತಿರುವ ‘ದಶಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಈ ಅಧಿವೇಶನದಲ್ಲಿ ದೇಶ-ವಿದೇಶಗಳಿಂದ ಹಾಗೂ ಭಾರತದ ವಿವಿಧ ರಾಜ್ಯಗಳಿಂದ ಸುಮಾರು ೨೨೫ ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಮರಾಠಿ ಮತ್ತು ಹಿಂದಿ ಭಾಷೆಯ ‘ಹಲಾಲ್ ಜಿಹಾದ್ ?’ ಎಂಬ ಗ್ರಂಥ ಬಿಡುಗಡೆ !

`ಹಲಾಲ್ ಜಿಹಾದ್?’ ಈ ಗ್ರಂಥದ ಬಿಡುಗಡೆ ಮಾಡುತ್ತಿರುವಾಗ ಎಡದಿಂದ ಸ್ವಾಮಿ ನಿರ್ಗುಣಾನಂದಗಿರಿ ಮಹಾರಾಜರು, ನ್ಯಾಯವಾದಿ ಪೂಜ್ಯ ಹರಿಶಂಕರ ಜೈನ, ಸ್ವಾಮಿ ಸಂಯುಕ್ತಾತಾನಂದ ಮಹಾರಾಜರು ಮತ್ತು ಸದ್ಗುರು (ಡಾ.) ಚಾರುದತ್ತ ಪಿಂಗಳೆ

ಈ ವೇಳೆ ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ‘ಭಾರತೀಯ ಆರ್ಥಿಕತೆಯ ಮೇಲೆ ಹೊಸ ದಾಳಿ – ‘ಹಲಾಲ್ ಜಿಹಾದ್ ?’ ಗ್ರಂಥವನ್ನು ವ್ಯಾಸಪೀಠದಲ್ಲಿ ಉಪಸ್ಥಿತರಿದ್ದ ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ಪೋಷಕರು ಹಾಗೂ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಪೂಜ್ಯ ಹರಿ ಶಂಕರ ಜೈನ್, ‘ಭಾರತ ಸೇವಾಶ್ರಮ ಸಂಘ’ದ ಸ್ವಾಮಿ ಸಂಯುಕ್ತಾನಂದ ಮಹಾರಾಜ, ‘ಇಂಟರನ್ಯಾಶನಲ್ ವೇದಾಂತ ಸೋಸೈಟಿ’ಯ ಸ್ವಾಮಿ ನಿರ್ಗುಣಾನಂದಗಿರಿ ಮಹಾರಾಜ ಮತ್ತು ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಇವರ ಹಸ್ತದಿಂದ ಪ್ರಕಾಶಿಸಲಾಯಿತು. ಶಂಖನಾದದಿಂದ ಅಧಿವೇಶನವನ್ನು ಆರಂಭಿಸಲಾಯಿತು. ನಂತರ ವ್ಯಾಸಪೀಠದ ಮೇಲೆ ಉಪಸ್ಥಿತರಿದ್ದ ಗಣ್ಯರ ಶುಭಹಸ್ತಗಳಿಂದ ದೀಪಪ್ರಜ್ವಲನೆ ಮಾಡಲಾಯಿತು. ದೀಪಪ್ರಜ್ವಲನೆಯ ನಂತರ ವೇದಮಂತ್ರ ಪಠಿಸಲಾಯಿತು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಸದ್ಗುರು ಸತ್ಯವಾನ ಕದಮ್ ಇವರು ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ನೀಡಿದ ಸಂದೇಶವನ್ನು ಓದಿದರು. ‘ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ನ್ಯಾಸ’ದ ಕೋಶಾಧಿಕಾರಿ ಪ.ಪೂ. ಸ್ವಾಮಿ ಗೋವಿಂದದೇವಗಿರಿಜಿ ಮಹಾರಾಜರು “ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪವು ಕೆಲವೇ ವರ್ಷಗಳಲ್ಲಿ ಪೂರ್ಣಗೊಳ್ಳುವುದು”, ಎಂದು ವಿಡಿಯೋ ಮೂಲಕ ನೀಡಿದ ಆಶೀರ್ವಚನವನ್ನು ತೋರಿಸಲಾಯಿತು. ಅಧಿವೇಶನದ ನಿಮಿತ್ತ ಟ್ವಿಟರ್‌ನಲ್ಲಿ #10th_Hindu_Rashtra_Adhiveshan ಎಂಬ ಹ್ಯಾಶ್‌ಟ್ಯಾಗ್ ಮೂಲಕ ದೇಶದಾದ್ಯಂತ ಹಿಂದೂ ರಾಷ್ಟ್ರದ ಚರ್ಚೆ ನಡೆಯುತ್ತಿರುವುದು ಕಂಡು ಬಂದಿದೆ. ಈ ಅಧಿವೇಶನವನ್ನು ಹಿಂದೂ ಜನಜಾಗೃತಿ ಸಮಿತಿಯ ವೆಬ್‌ಸೈಟ್ HinduJagruti.org ನಲ್ಲಿ ಮತ್ತು ‘HinduJagruti’ ಈ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ.