ಅಜಮೇರ (ರಾಜಸ್ಥಾನ)ದಲ್ಲಿನ ಮೊಯಿನುದ್ದೀನ ಚಿಶ್ತಿ ದರ್ಗಾವು ಹಿಂದೆ ದೇವಸ್ಥಾನವಾಗಿತ್ತು ! – ಮಹಾರಾಣಾ ಪ್ರತಾಪ ಸೇನಾ

ದರ್ಗಾದಲ್ಲಿ ಹಿಂದೂಗಳ ಧಾರ್ಮಿಕ ಚಿನ್ಹೆಗಳಿರುವುದರಿಂದ ಅದರ ಸಮೀಕ್ಷೆ ನಡೆಸುವ ಬೇಡಿಕೆ

ಅಜಮೇರ (ರಾಜಸ್ಥಾನ) – ಇಲ್ಲಿನ ಹಜರತ ಮೊಯಿನುದ್ದೀನ ಚಿಶ್ತಿ ದರ್ಗಾವು ಮೊದಲು ದೇವಸ್ಥಾನವಾಗಿತ್ತು. ದರ್ಗಾದ ಗೋಡೆಗಳ ಹಾಗೂ ಕಿಟಕಿಗಳ ಮೇಲೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಚಿನ್ಹೆಗಳಿವೆ. ಭಾರತೀಯ ಪುರಾತತ್ತ್ವ ಸಮೀಕ್ಷಾ ವಿಭಾಗವು ಇಲ್ಲಿ ಸಮೀಕ್ಷೆಯನ್ನು ಮಾಡಬೇಕು ಎಂದು ಮಹಾರಾಣಾ ಪ್ರತಾಪ ಸೇನೆಯು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹಲೋತರವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇನ್ನೊಂದು ಕಡೆಯಲ್ಲಿ ದರ್ಗಾದ ಖಾದಿಮ ಸಮಿತಿಯು ‘ಇಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಚಿನ್ಹೆಗಳಿಲ್ಲ. ಬದಲಾಗಿ ಹಿಂದೂ ಹಾಗೂ ಮುಸಲ್ಮಾನ ಹೀಗೆ ಎರಡೂ ಸಮಾಜದ ಕೋಟ್ಯಾಂತರ ಜನರು ದರ್ಗಾಗೆ ಬರುತ್ತಾರೆ, ಎಂದು ಹೇಳಿದೆ. ಮಹಾರಾಣಾ ಪ್ರತಾಪ ಸೇನೆಯ ಮನವಿಯ ನಂತರ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ ಬಂದೋಬಸ್ತನ್ನು ಇಡಲಾಗಿದೆ.
ಖಾದಿಮ ಸಮಿತಿಯ ಅಧ್ಯಕ್ಷರಾದ ಮೊಯಿನ ಚಿಶ್ತಿಯವರು ಮಾತನಾಡುತ್ತ, ಈ ದರ್ಗಾವು ೮೫೦ ವರ್ಷಗಳಿಂದ ಇದೆ. ಇಂದಿನ ವರೆಗೆ ಇಂತಹ ಪ್ರಶ್ನೆಗಳು ಎಂದಿಗೂ ಬಂದಿರಲಿಲ್ಲ. ಇಂದು ದೇಶದಲ್ಲಿ ಹಿಂದೆಂದೂ ಇರದ ವಿಶಿಷ್ಟ ವಾತಾವರಣವು ಸಿದ್ಧವಾಗಿದೆ, ಎಂದು ಹೇಳಿದರು.

ಭಾಜಪದಿಂದಲೂ ಸಮೀಕ್ಷೆಯ ಬೇಡಿಕೆ

ಮಹಾರಾಣಾ ಪ್ರತಾಪ ಸೇನೆಯು ಅಜಮೇರ ದರ್ಗಾದ ಸಮೀಕ್ಷೆಯ ಬೇಡಿಕೆಯನ್ನಿಟ್ಟ ನಂತರ ಭಾಜಪವೂ ಈ ಬೇಡಿಕೆಯನ್ನಿಟ್ಟಿದೆ. ರಾಜಸ್ಥಾನದ ಭಾಜಪದ ಪ್ರದೇಶಾಧ್ಯಕ್ಷರಾದ ಸತೀಶ ಪೂನಿಯಾರವರು ಈ ಮನವಿ ಮಾಡಿದ್ದಾರೆ.