ಕೆಟ್ಟ ಶಕ್ತಿಗಳು ಮನುಷ್ಯನ ಮನಸ್ಸು ಮತ್ತು ಬುದ್ಧಿಯ ಮೇಲೆ ಆಕ್ರಮಣ ಮಾಡಿ ಅವನ ಮನಸ್ಸಿನಲ್ಲಿ ಆತ್ಮಹತ್ಯೆಯ ವಿಚಾರವನ್ನು ಹಾಕಿ ಸಹಜವಾಗಿ ಅವನನ್ನು ಕೊನೆಗಾಣಿಸುತ್ತವೆ ಮತ್ತು ಇಂತಹ ಸೂಕ್ಷ್ಮ ಕೆಟ್ಟ ಶಕ್ತಿಗಳ ಮೇಲೆ ನಿಯಂತ್ರಣ ಪಡೆಯವುದು ಬಹಳ ಕಠಿಣವಾಗಿದೆ ! ಹಾಗೆ ಮೇಲುಮೇಲಿಂದ ನೋಡಿದರೆ ನಮಗೆ ಆತ್ಮಹತ್ಯೆಗಳ ಹಿಂದೆ ನಿರಾಶೆ, ಒತ್ತಡ ಮುಂತಾದ ಮನೋರೋಗಗಳಿಗೆ ಸಂಬಂಧಿಸಿದ ಕಾರಣಗಳು ಕಂಡು ಬರುತ್ತವೆ; ಆದರೆ ಇವು ಮೇಲುಮೇಲಿನ ಕಾರಣಗಳಾದವು. ಇವುಗಳನ್ನು ನಾವು ಸ್ಥೂಲದಿಂದ ನಿರೀಕ್ಷಣೆ ಮಾಡಬಹುದು; ಆದರೆ ಹೀಗೇಕಾಗುತ್ತದೆ ? ಒತ್ತಡ ಮತ್ತು ನಿರಾಶೆ ಅನೇಕ ಜನರಿಗೆ ಬರುತ್ತದೆ; ಆದರೆ ಎಲ್ಲರೂ ಆತ್ಮಹತ್ಯೆಯ ನಿರ್ಣಯವನ್ನು ತೆಗೆದುಕೊಳ್ಳುವುದಿಲ್ಲ. ಇದರ ಅರ್ಥವೇನೆಂದರೆ, ಇಲ್ಲಿ ಇನ್ನೂ ಬೇರೆ ಯಾವುದೋ ಒಂದು ಘಟಕ ಕಾರ್ಯನಿರತವಾಗಿದೆ ಎಂಬುದು ಗಮನಕ್ಕೆ ಬರುತ್ತದೆ. ಪಾಶ್ಚಾತ್ಯರು ವಿವಿಧ ಮನೋರೋಗಗಳನ್ನು ಕಂಡು ಹಿಡಿದಿದ್ದಾರೆ. ಅವು ತಪ್ಪಾಗಿವೆ ಎಂದೇನಿಲ್ಲ; ಆದರೆ ಅವು ಬುದ್ಧಿಯ ಸ್ತರದ ಮೇಲುಮೇಲಿನ ಕಾರಣಗಳಾಗಿವೆ. ಅಧ್ಯಾತ್ಮಶಾಸ್ತ್ರಕ್ಕನುಸಾರ ಆತ್ಮಹತ್ಯೆಗಳ ಹಿಂದಿನ ಎಲ್ಲಕ್ಕಿಂತ ದೊಡ್ಡ ಮತ್ತು ಮೂಲ ಕಾರಣವೆಂದರೆ ಕೆಟ್ಟ ಶಕ್ತಿಗಳ ಪ್ರಭಾವ !
ಕಳೆದ ಕೆಲವು ವರ್ಷಗಳಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ ೩ – ೪ ಆದರೂ ಆತ್ಮಹತ್ಯೆಯ ವಾರ್ತೆಗಳು ಬಂದೇ ಬರುತ್ತವೆ. ಸದ್ಯ ಕಾಲಾನುಸಾರ ಕೆಟ್ಟ ಶಕ್ತಿಗಳ ತೀವ್ರತೆಯು ಬಹಳ ಹೆಚ್ಚಾಗಿದೆ. ಈಗ ಅವು ಅನಾರೋಗ್ಯ, ಹತ್ಯೆ, ಹೊಡೆದಾಟ, ಗೋಲಿಬಾರ್ ಮತ್ತು ಬಾಂಬ್‌ಸ್ಫೋಟ್ ಇವುಗಳ ಮಾಧ್ಯಮಗಳಿಂದ ಮನುಷ್ಯನ ಜೀವವನ್ನು ತೆಗೆಯುವ ಅತ್ಯಂತ ಸುಲಭ ಮಾರ್ಗವನ್ನು ಅವಲಂಬಿಸುತ್ತಿವೆ. ಅವು ಮನುಷ್ಯನ ಮನಸ್ಸು ಮತ್ತು ಬುದ್ಧಿಯ ಮೇಲೆ ಆಕ್ರಮಣ ಮಾಡಲು ಆರಂಭಿಸಿವೆ. ಕೆಟ್ಟ ಶಕ್ತಿಗಳು ನಿರಾಶೆ ಅಥವಾ ಒತ್ತಡದಿಂದ ಮೊದಲೇ ದುರ್ಬಲವಾಗಿರುವ ಮನಸ್ಸಿನ ಮೇಲೆ ಯಾವುದೇ ಕಾರಣ ಇಲ್ಲದಿರುವಾಗ ಆತ್ಮಹತ್ಯೆಯ ವಿಚಾರವನ್ನು ಹಾಕಿ ಸಹಜವಾಗಿ ಅವನ ಅಂತವನ್ನು ತರುತ್ತವೆ. ನಾವು ಎದುರಿಗೆ ಬರುವ ಬಂದೂಕಿನ ಗುಂಡಿನಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸಬಹುದು; ಆದರೆ ಮನುಷ್ಯನ ಮನಸ್ಸು ಮತ್ತು ಬುದ್ಧಿಯ ಮೇಲೆ ಸಂಪೂರ್ಣ ನಿಯಂತ್ರಣ ಪಡೆದು ಅಘಾತಗಳನ್ನು ಮಾಡುವ ಈ ಸೂಕ್ಷ್ಮ ಆಸುರಿ ಶಕ್ತಿಗಳ ಮೇಲೆ ನಿಯಂತ್ರಣ ಪಡೆಯುವುದು ಬಹಳ ಕಠಿಣವಾಗಿದೆ.
ತಮ್ಮ ಜೀವನವನ್ನು ಕೊನೆಗೊಳಿಸುವುದೇನು ಸಾಮಾನ್ಯ ಮತ್ತು ಸರಳ ವಿಷಯವಾಗಿಲ್ಲ; ಆದರೆ ಕೆಟ್ಟ ಶಕ್ತಿಗಳ ಪ್ರಭಾವಕ್ಕೊಳಗಾದ ಕೆಲವರಿಗೆ ಕೆಲವೊಮ್ಮೆ ಕೆಟ್ಟ ಶಕ್ತಿಗಳು ಕಟ್ಟಡದ ಮೇಲಿನಿಂದ ಜಿಗಿಯುವುದು, ಓಡುತ್ತಿರುವ ರೈಲಿನ ಮುಂದೆ ಜಿಗಿಯುವುದು, ಬಾವಿಯಲ್ಲಿ ಅಥವಾ ನದಿಯಲ್ಲಿ ಹಾರುವುದು ಮುಂತಾದವುಗಳನ್ನು ಮಾಡಲು ಪ್ರವೃತ್ತಗೊಳಿಸುತ್ತವೆ. ಇಂತಹ ವ್ಯಕ್ತಿಗಳ ಲಿಂಗದೇಹವನ್ನು ವಶಕ್ಕೆ ತೆಗೆದುಕೊಳ್ಳುವುದು ಅವುಗಳ ಉದ್ದೇಶವಾಗಿರುತ್ತದೆ. ಇದರಿಂದ ಆತ್ಮಹತ್ಯೆಯನ್ನು ಮಾಡಿಕೊಂಡ ಲಿಂಗದೇಹಕ್ಕೆ ಗತಿ ಸಿಗುವುದು ಕಠಿಣವಾಗುತ್ತದೆ.
– ಶ್ರೀ. ದಿವಾಕರ ಆಗಾವಣೆ, ಚೆನ್ನೈ, ತಮಿಳುನಾಡು. (೨೮.೫.೨೦೧೫)
ಸೂಕ್ಷ್ಮ: ವ್ಯಕ್ತಿಯ ಸ್ಥೂಲವೆಂದರೆ ಪ್ರತ್ಯಕ್ಷ ಕಾಣಿಸುವ ಅವಯವ ಗಳಾದ ಮೂಗು, ಕಿವಿ, ಕಣ್ಣು, ನಾಲಿಗೆ ಮತ್ತು ತ್ವಚೆ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚ ಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಆಚೆಗಿನ ವಿಷಯಗಳೆಂದರೆ ‘ಸೂಕ್ಷ್ಮ’. ಸಾಧನೆಯಲ್ಲಿ ಪ್ರಗತಿಯನ್ನು ಸಾಧಿಸಿರುವ ಕೆಲವು ವ್ಯಕ್ತಿಗಳಿಗೆ ಈ ‘ಸೂಕ್ಷ್ಮ’ ಸಂವೇದನಗಳ ಅರಿವಾಗುತ್ತದೆ. ಈ ‘ಸೂಕ್ಷ್ಮ ಜ್ಞಾನ’ದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. ಕೆಟ್ಟ ಶಕ್ತಿಗಳು : ವಾತಾವರಣದಲ್ಲಿ ಒಳ್ಳೆಯ ಮತ್ತು ಕೆಟ್ಟ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿಗಳು ಮಾನವನಿಗೆ ಒಳ್ಳೆಯ ಕಾರ್ಯಕ್ಕೆ ಸಹಾಯ ಮಾಡುತ್ತವೆ ಮತ್ತು ಕೆಟ್ಟ ಶಕ್ತಿಗಳು ಮಾನವನಿಗೆ ತೊಂದರೆಗಳನ್ನು ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತರುತ್ತಿದ್ದ ಅನೇಕ ಕಥೆಗಳು ವೇದ-ಪುರಾಣಗಳಲ್ಲಿವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರ, ರಾಕ್ಷಸ, ಪಿಶಾಚಿ ಹಾಗೆಯೇ ಮಾಟ, ಮಂತ್ರ ಭಾನಾಮತಿ ಇವುಗಳ ನಿವಾರಣೆಯ ಮಂತ್ರಗಳನ್ನು ನೀಡಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದಾದಿ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |