ಆತ್ಮಹತ್ಯೆಯನ್ನು ಮಾಡಿಕೊಳ್ಳುವುದು ಮಹಾಪಾಪವಾಗಿದ್ದು, ಸಾಧನೆಯನ್ನು ಮಾಡುವುದೇ ಎಲ್ಲ ಸಮಸ್ಯೆಗಳ ಏಕೈಕ ಉಪಾಯವಾಗಿದೆ !

ಕು. ಸೋನಮ್ ಫಣಸೆಕರ

೬.೫.೨೦೧೫ ರಂದು ದೈನಿಕ ‘ಸನಾತನ ಪ್ರಭಾತ’ದಲ್ಲಿ ‘ಶಿಕ್ಷಣದಲ್ಲಿ ಯಶಸ್ಸು ಸಿಗಲಿಲ್ಲವೆಂದು ಜಿಗುಪ್ಸೆಗೊಂಡ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ’, ಎಂದು ಓದಿದಾಗ ‘ನಮ್ಮ ವಿದ್ಯಾರ್ಥಿ ಮಿತ್ರರಿಗೆ ಏನಾದರೂ ಹೇಳಬೇಕು’, ಎಂದೆನಿಸಿತು. ವಿದ್ಯಾರ್ಥಿಗಳು ಮುಂದಿನಂತೆ ಪ್ರಯತ್ನಿಸಿದರೆ ಅವರು ನಿಶ್ಚಿತವಾಗಿಯೂ ಆತ್ಮಹತ್ಯೆಯಿಂದ ವಿಮುಖರಾಗುವರು.

೧. ಸತತ ದೇವರ ಅನುಸಂಧಾನದಲ್ಲಿ ಇದ್ದುದರಿಂದ ಛತ್ರಪತಿ ಶಿವಾಜಿ ಮಹಾರಾಜರು ಯಶಸ್ವಿಯಾದರು

‘ಮಿತ್ರರೇ, ಮನುಷ್ಯಜನ್ಮವು ಈಶ್ವರನು ನಮಗೆ ನೀಡಿದ ಒಂದು ಅಮೂಲ್ಯ ಕೊಡುಗೆಯಾಗಿದೆ. ನಿಮ್ಮ ವಯಸ್ಸಿನವರಿರುವಾಗಲೇ ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸುವ ಪ್ರತಿಜ್ಞೆ ಮಾಡಿದ್ದರು. ಅವರು ಚಿಕ್ಕ ವಯಸ್ಸಿನಲ್ಲಿಯೇ ಯುದ್ಧವನ್ನು ಆರಂಭಿಸಿದರು. ಅವರಿಗೂ ವೈಫಲ್ಯದ ಕಠಿಣ ಪ್ರಸಂಗಗಳು ಬಂದವು; ಆದರೆ ಅವರು ಎಂದಿಗೂ ಧೈರ್ಯಗುಂದಲಿಲ್ಲ. ಅಫ್ಝಲ್‌ಖಾನನನ್ನು ವಧಿಸುವುದು, ಶಾಹಿಸ್ತೆಖಾನನ ಬೆರಳುಗಳನ್ನು ಕತ್ತರಿಸುವುದು ಇವುಗಳಂತಹ ಕಠಿಣ ಮತ್ತು ಅಸಾಧ್ಯವೆನಿಸುವ ಪ್ರಸಂಗಗಳಲ್ಲಿಯೂ ಅವರು ಯಶಸ್ವಿಯಾದರು. ಏಕೆ ? ಅದಕ್ಕೆ ಒಂದೇ ಕಾರಣ, ಅದೆಂದರೆ ಪ್ರತಿಯೊಂದು ಪ್ರಸಂಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ದೇವರೊಂದಿಗೆ ಅನುಸಂಧಾನದಲ್ಲಿರುತ್ತಿದ್ದರು. ಅವರ ನಾಮಜಪವು ಸತತವಾಗಿ ನಡೆದಿರುತ್ತಿತ್ತು. ಆದುದರಿಂದ ಅವರಿಗೆ ಬಲಾಢ್ಯ ಮೊಗಲ್ ಸೈನ್ಯದೊಂದಿಗೆ ಹೋರಾಡಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಲು ಸಾಧ್ಯವಾಯಿತು.

೨. ಪ್ರಯತ್ನವಿರುವಲ್ಲಿ ಜಯ-ಪರಾಜಯ ಎರಡೂ ಇವೆ !

ಮಿತ್ರರೇ, ನೀವು ದೇಶದ ಭಾವಿ ಪೀಳಿಗೆಯಾಗಿರುವಿರಿ. ಆದುದರಿಂದ ನೀವು ಸುದೃಢರಾಗಿರಬೇಕು. ಚಿಕ್ಕ ಚಿಕ್ಕ ವಿಷಯಗಳಿಗೆ ನಾವು ಧೈರ್ಯಗುಂದಬಾರದು. ‘ನನ್ನ ಶಿಕ್ಷಣ, ನನ್ನ ಅಭ್ಯಾಸ, ನನ್ನ ಭವಿಷ್ಯ’ ಇಷ್ಟೇ ನಮ್ಮ ಜೀವನವಲ್ಲ; ‘ನಮಗೆ ರಾಷ್ಟ್ರ ಮತ್ತು ಧರ್ಮದ ಬಗ್ಗೆಯೂ ಕೆಲವು ಕರ್ತವ್ಯವಿದೆ’, ಎಂಬ ಅರಿವನ್ನು ಮನಸ್ಸಿಗೆ ಆಗಾಗ ಮಾಡಿಕೊಡಬೇಕು. ನಾವು ಸತತವಾಗಿ ಪ್ರಯತ್ನ ಮಾಡಬೇಕಾಗುತ್ತದೆ. ಪ್ರಯತ್ನವಿರುವಲ್ಲಿ ಜಯ-ಪರಾಜಯ ಎರಡೂ ಇರುತ್ತವೆ.

೨ ಅ. ಪ್ರಯತ್ನದಲ್ಲಿ ವಿಫಲರಾದರೆ, ಮುಂದಿನ ವಿಷಯಗಳನ್ನು ಗಮನದಲ್ಲಿಡಿ !

೨ ಅ ೧. ಜೀವನವನ್ನು ಕೊನೆಗೊಳಿಸುವುದೆಂದರೆ ಹೇಡಿತನ : ಅಧ್ಯಯನದಲ್ಲಿ ವಿಫಲರಾದರೆ ಅದನ್ನು ನಮ್ಮ ಪ್ರಾರಬ್ಧವೆಂದು ತಿಳಿದು ಮನಃಪೂರ್ವಕವಾಗಿ ಸ್ವೀಕರಿಸಬೇಕು.

೨ ಅ ೨. ನಿಮ್ಮ ತುಲನೆಯನ್ನು ನಿಮ್ಮೊಂದಿಗೇ ಮಾಡಿರಿ : ನಿಮ್ಮ ತುಲನೆಯನ್ನು ಯಾವುದೇ ಮಿತ್ರನೊಂದಿಗಾಗಲಿ ಅಥವಾ ಅವರಿಗೆ ದೊರಕಿದ ಅಂಕಗಳೊಂದಿಗಾಗಲಿ ಮಾಡಬೇಡಿರಿ. ನಿಮ್ಮ ತುಲನೆಯನ್ನು ನಿಮ್ಮೊಂದಿಗೇ ಮಾಡಿರಿ ‘ನಾವೆಲ್ಲಿ ಕಡಿಮೆ ಬೀಳುತ್ತೇವೆ’, ಎಂಬುದರ ಅಧ್ಯಯನ ಮಾಡಿರಿ ಮತ್ತು ಅದಕ್ಕಾಗಿ ಪ್ರಯತ್ನಿಸಿರಿ, ಅದರಿಂದ ನಿಮ್ಮ ಮನಸ್ಸಿಗೆ ನಿರಾಶೆ ಬರುವುದಿಲ್ಲ.

೨ ಅ ೩. ಮನಸ್ಸು ಯಾವಾಗಲೂ ಸಕಾರಾತ್ಮಕವಾಗಿರಲಿ : ‘ಇಂದು ನನಗೆ ಪರಾಜಯ ಬಂದಿದೆ; ಆದರೆ ಇಂದಿನಿಂದ ನಾನು ನನ್ನ ಪೂರ್ಣ ಸಾಮರ್ಥ್ಯದಿಂದ ಪ್ರಯತ್ನಿಸುವೆನು’, ಎಂದು ಪ್ರಾರ್ಥಿಸಿ.

೨ ಅ ೪. ದೇವರನ್ನು ಮಿತ್ರನನ್ನಾಗಿ ಮಾಡಿಕೊಳ್ಳಿರಿ : ಪ್ರತಿಯೊಂದು ಪ್ರಸಂಗದಲ್ಲಿ ಮನಸ್ಸಿಗೆ ದೇವರ ಸಹಾಯ ಪಡೆಯುವ ರೂಢಿಯನ್ನು ಮಾಡಿಸಿರಿ. ‘ಭಗವಂತನು ನನ್ನ ಮಿತ್ರನಾಗಿದ್ದಾನೆ’, ಎಂಬ ಭಾವದಿಂದ ಅವನಿಗೆ ಮನಸ್ಸಿನಲ್ಲಿನ ಎಲ್ಲ ವಿಷಯಗಳನ್ನು ಹೇಳಿರಿ.

೨ ಅ ೫. ಭಗವಂತನಿಗೆ ಮನಃಪೂರ್ವಕ ಪ್ರಾರ್ಥನೆ ಮಾಡಿರಿ : ಪರೀಕ್ಷೆ ಮುಗಿದ ನಂತರ ‘ಹೇ ಭಗವಂತಾ, ಈಗ ನೀನು ಯಾವ ಫಲಿತಾಂಶ ನೀಡುವಿಯೋ, ಅದನ್ನು ನನಗೆ ಮನಃಪೂರ್ವಕ ಮತ್ತು ಆನಂದದಿಂದ ಸ್ವೀಕರಿಸಲು ಸಾಧ್ಯವಾಗಲಿ ! ಅದಕ್ಕಾಗಿ ನೀನು ನನಗೆ ಶಕ್ತಿಯನ್ನು ಕೊಡು. ನನ್ನನ್ನು ಸಕಾರಾತ್ಮಕವಾಗಿರಿಸು’, ಎಂದು ಪ್ರಾರ್ಥನೆಯನ್ನು ಮಾಡಿರಿ.

೩. ಮನಸ್ಸಿನಲ್ಲಿ ಆತ್ಮಹತ್ಯೆಯ ವಿಚಾರಗಳು ಬರುತ್ತಿವೆ, ಎಂದು ಗಮನಕ್ಕೆ ಬಂದ ತಕ್ಷಣ ಮುಂದಿನ ಪ್ರಯತ್ನ ಮಾಡಿರಿ !

೩ ಅ. ವೇಗದಿಂದ ನಾಮಜಪವನ್ನು ಮಾಡಿರಿ ! : ವಿಚಾರಗಳು ಬಹಳ ಹೆಚ್ಚಾದರೆ, ಸಾಧ್ಯವಾದರೆ ದೊಡ್ಡದಾಗಿ ಮತ್ತು ಸಾಧ್ಯವಿಲ್ಲದಿದ್ದರೆ ಮನಸ್ಸಿನಲ್ಲಿಯೇ ಮಗ್ಗಿಗಳನ್ನು ಬಾಯಿಪಾಠ ಮಾಡುವ ಹಾಗೆ ವೇಗದಿಂದ ದೇವರ ಹೆಸರನ್ನು ತೆಗೆದುಕೊಳ್ಳಲು ಆರಂಭಿಸಿರಿ, ಉದಾ. ಶ್ರೀಕೃಷ್ಣನ ಹೆಸರನ್ನು ತೆಗೆದುಕೊಳ್ಳುವುದಿದ್ದರೆ, ‘ಕೃಷ್ಣ, ಕೃಷ್ಣ, ಕೃಷ್ಣ’ ಮತ್ತು ಶ್ರೀರಾಮನ ಹೆಸರನ್ನು ತೆಗೆದುಕೊಳ್ಳುವುದಿದ್ದರೆ, ‘ರಾಮ, ರಾಮ, ರಾಮ’. ಹೀಗೆ ಮನಸ್ಸಿನಲ್ಲಿನ ವಿಚಾರಗಳು ಸಂಪೂರ್ಣ ನಾಶವಾಗುವವರೆಗೆ ಮಾಡಿರಿ.

೩ ಆ. ಒಂದೆಡೆ ಕುಳಿತು ದೇವರಿಗೆ ಪ್ರಾರ್ಥನೆಯನ್ನು ಮಾಡಿರಿ ! : ಅನಂತರ ೧೦ ನಿಮಿಷಗಳ ಕಾಲ ಒಂದೆಡೆ ಕುಳಿತುಕೊಳ್ಳಿರಿ. ಈಶ್ವರನಿಗೆ ಸತತವಾಗಿ ೧೫ ಬಾರಿ ಮುಂದಿನಂತೆ ಪ್ರಾರ್ಥನೆಯನ್ನು ಮಾಡಿರಿ, ‘ಹೇ ಈಶ್ವರಾ, ನನ್ನ ಮನಸ್ಸಿನಲ್ಲಿನ ಈ ವಿಚಾರಗಳನ್ನು ನೀನು ಸಂಪೂರ್ಣ ನಾಶ ಮಾಡು. ನನ್ನನ್ನು ಈ ನಕಾರಾತ್ಮಕ ಸ್ಥಿತಿಯಿಂದ ಹೊರಗೆ ತೆಗೆದು ನನ್ನ ರಕ್ಷಣೆಯನ್ನು ಮಾಡು’.

೩ ಇ. ದಿನದಲ್ಲಿ ೫೦ ಬಾರಿ ಮನಸ್ಸಿಗೆ ತಾಕೀತು ಮಾಡಿ, ‘ನನಗೆ ಇನ್ನೂ ಬಹಳಷ್ಟು ಕಾಲ ಜೀವಿಸುವುದಿದೆ. ನಾನು ಇಂದಿನಿಂದಲೇ ಜೋರಾಗಿ ಪ್ರಯತ್ನವನ್ನು ಮಾಡುವೆನು. ಭಗವಂತನು ನನಗೆ ಸಹಾಯ ಮಾಡುವನು. ಭಗವಂತನು ಸಹಾಯ ಮಾಡಿದರೆ ಯಾವುದೇ ವಿಷಯವು ಅಸಾಧ್ಯವಿರುವುದಿಲ್ಲ. ಆದುದರಿಂದ ನಾನು ಯಶಸ್ವಿಯಾಗುವೆನು’, ಎಂದು ಹೇಳಿರಿ.

೩ ಈ. ಮನಸ್ಸಿನ ಮೇಲೆ ಒತ್ತಡವಿದ್ದರೆ ಪಾಲಕರೊಂದಿಗೆ ಅಥವಾ ಆಪ್ತ ಮಿತ್ರರೊಂದಿಗೆ ಆ ಕುರಿತು ಮನುಮುಕ್ತವಾಗಿ ಮಾತನಾಡಿರಿ. ಅದಕ್ಕೆ ಕೂಡಲೇ ಪರಿಹಾರೋಪಾಯವನ್ನು ತೆಗೆದು ಅದರಿಂದ ಹೊರಗೆ ಬರಲು ಪ್ರಯತ್ನಿಸಿ.

– ಕು. ಸೋನಮ್ ಫಣಸೇಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.