ಉತ್ತರ ಪ್ರದೇಶದಲ್ಲಿ ಮಸೀದಿಯಲ್ಲಿ ಗರ್ಭಿಣಿ ಪತ್ನಿಯನ್ನು ಕೊಂದ ಇಮಾಮ್‌ನ ಬಂಧನ

ವಾಮಾಚಾರದ ಮೂಲಕ ಹೆಂಡತಿಯ ಹೊಟ್ಟೆಯಲ್ಲಿ ಮಗಳಿದ್ದಾಳೆಂದು ತಿಳಿದು ಕೊಂದ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಸಹರಾನ್‌ಪುರದ ಮಸೀದಿಯೊಂದರಲ್ಲಿ ಗರ್ಭಿಣಿ ಪತ್ನಿಯನ್ನು ಕೊಂದ ಇಮಾಮ್‌ನನ್ನು ಪೊಲೀಸರು ಇತ್ತಿಚೆಗೆ ಬಂಧಿಸಿದ್ದಾರೆ. ಆರೋಪಿ ಇಮಾಮ್ ಉಸ್ಮಾನ್ ತಪ್ಪೊಪ್ಪಿಕೊಂಡಿದ್ದಾನೆ. ಉಸ್ಮಾನ್, ಪತ್ನಿ ಹಿನಾ ೮ ತಿಂಗಳ ಗರ್ಭಿಣಿಯಾಗಿದ್ದಳು. ಅವನಿಗೆ ಗಂಡುಮಗು ಬೇಕಿತ್ತು. ಹಾಗಾಗಿ ಪತ್ನಿಯ ಗರ್ಭದಲ್ಲಿ ಏನಿದೆ ಎಂದು ಪತ್ತೆ ಹಚ್ಚಲು ವಾಮಾಚಾರದಿಂದ ಕಂಡುಹಿಡಿದ. ಅವಳ ಹೊಟ್ಟೆಯಲ್ಲಿ ಮಗಳಿದ್ದಾಳೆಂದು ತಿಳಿದ ನಂತರ, ಅವನು ಹಿನಾಗೆ ಗರ್ಭಪಾತ ಮಾಡುವಂತೆ ಹೇಳಿದನು; ಆದರೆ ಆಕೆ ಅದನ್ನು ನಿರಾಕರಿಸಿದಳು. ಬಳಿಕ ಮೇ ೧೨ರಂದು ಪತ್ನಿಯನ್ನು ಮಸೀದಿಯ ಮೇಲ್ಛಾವಣಿಯಿಂದ ತಳ್ಳಿ ಕೊಲೆ ಮಾಡಿದ. ಹಿನಾ ಮಸೀದಿಯ ಮೇಲ್ಛಾವಣಿಯಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಇಮಾಮ್ ಉಸ್ಮಾನ್ ತನ್ನ ಮಗಳ ಕೊಲೆಗಾರ ಎಂದು ತಿಳಿದ ಹಿನಾ ಅವರ ತಾಯಿ ಉಸ್ಮಾನ್ ಮತ್ತು ಅವರ ಇಬ್ಬರು ಸಹಚರರ ವಿರುದ್ಧ ಸಹರಾನ್‌ಪುರ ಪೊಲೀಸರಿಗೆ ದೂರು ನೀಡಿದರು. ಪ್ರಕರಣದ ತನಿಖೆ ನಡೆಸುವಾಗ, ಇಮಾಮ್ ತಪ್ಪಿತಸ್ಥ ಎಂದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿ ಪಿಯೂಷ್ ದೀಕ್ಷಿತ್ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರಿರುವ ಮುಸ್ಲಿಮರು ಅಪರಾಧದಲ್ಲಿ ಬಹುಸಂಖ್ಯಾತರಾಗಿರುತ್ತಾರೆ !

ಈಗ ಸ್ತ್ರೀವಾದಿ ಸಂಘಟನೆಗಳು ಈ ಬಗ್ಗೆ ಏಕೆ ಮೌನ ವಹಿಸಿದ್ದಾರೆ ?