ವಾರಾಣಸಿ (ಉತ್ತರಪ್ರದೇಶ) – ಜ್ಞಾನವಾಪಿ ಮಸೀದಿಯ ಪ್ರಕರಣದಲ್ಲಿ ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಮೇ ೨೪ರಂದು ನಡೆದ ಖಟ್ಲೆಯ ಆಲಿಕೆಯ ಸಮಯದಲ್ಲಿ ನ್ಯಾಯಾಲಯವು ಮೇ ೨೬ರಂದು ಈ ಖಟ್ಲೆಯ ಸ್ವರೂಪದ ಮೇರೆಗೆ ಆಲಿಕೆ ನಡೆಸಲಿದೆ ಎಂದು ಹೇಳಿದೆ. ಈ ಸಂದರ್ಭದಲ್ಲಿ ನ್ಯಾಯಾಲಯವು ‘ಸಮೀಕ್ಷೆಯ ವರದಿಯ ಮೇಲೆ ಮುಂಬರುವ ವಾರದ ವರೆಗೆ ಎರಡೂ ಪಕ್ಷದವರು ಆಕ್ಷೇಪಗಳನ್ನು ನೋಂದಾಯಿಸಬಹುದು’ ಎಂದು ಹೇಳಿದೆ. ಹಾಗೆಯೇ ಎರಡೂ ಪಕ್ಷಗಳಿಗೆ ಸಮೀಕ್ಷೆಯ ಚಿತ್ರೀಕರಣ ಹಾಗೂ ಛಾಯಾಚಿತ್ರಗಳನ್ನು ದೊರಕಿಸಿ ಕೊಡಲು ಆದೇಶಿಸಲಾಗಿದೆ.
#Varanasi court to hear Gyanvapi mosque case on Thursday
(@nalinisharma_ ) https://t.co/hGVeAOQfFB— IndiaToday (@IndiaToday) May 24, 2022
೧. ಮೇ ೨೬ರಂದು ಮೊಟ್ಟ ಮೊದಲಿಗೆ ಖಟ್ಲೆಯ ಸ್ವರೂಪದ ಮೇರೆಗೆ ಆಲಿಕೆಯನ್ನು ನಡೆಸಲಾಗುವುದು. ಖಟ್ಲೆಯ ಸ್ವರೂಪದ ಮೇರೆಗೆ ಮುಸಲ್ಮಾನ ಪಕ್ಷದವರು ಆಕ್ಷೇಪವೆತ್ತಿದ್ದಾರೆ. ಅವರು ‘ಈ ಖಟ್ಲೆಯು ‘ಧಾರ್ಮಿಕ ಸ್ಥಳಗಳ ಕಾನೂನು ೧೯೯೧’ರ (‘ಪ್ಲೇಸಸ್ ಆಫ್ ವರ್ಶಿಪ್’ನ) ಉಲ್ಲಂಘನೆಯಾಗಿದೆ. ಆದುದರಿಂದ ಅದನ್ನು ರದ್ದುಗೊಳಿಸಬೇಕು’ ಎಂದು ಹೇಳಿದ್ದಾರೆ. ಹಿಂದೂ ಪಕ್ಷದವರು ‘ನಾವು ಜ್ಞಾನವಾಪಿ ಮಸೀದಿಯ ಜಾಗದಲ್ಲಿರುವ ಶ್ರೀ ಶೃಂಗಾರ ಗೌರಿ ದೇವಿಯ ಪೂಜೆಯನ್ನು ನಿಯಮಿತವಾಗಿ ಮಾಡಲು ಅರ್ಜಿ ದಾಖಲಿಸಿದ್ದೆವು, ಇದು ಕಾನೂನಿನ ಉಲ್ಲಂಘನೆಯಲ್ಲ’ ಎಂದು ಹೇಳಿದರು.
೨. ಮೇ ೨೪ರಂದು ನಡೆದ ಆಲಿಕೆಯ ಸಮಯದಲ್ಲಿ ಮುಸಲ್ಮಾನ ಪಕ್ಷವು ‘ದಿವಾಣಿ ಪ್ರಕ್ರಿಯೆ ಆದೇಶ ೭, ನಿಯಮ ೧೧ರ ಅನ್ವಯ ಖಟ್ಲೆಯ ಆಲಿಕೆ ನಡೆಸಬಹುದೇ ? ಎಂಬುದರ ಬಗ್ಗೆ ತೀರ್ಪು ನೀಡಲು ಮನವಿ ಮಾಡಿತ್ತು. ಹಿಂದೂ ಪಕ್ಷವು ‘ಜ್ಞಾನವಾಪಿ ಪರಿಸರದಲ್ಲಿ ನಡೆದ ಸಮೀಕ್ಷೆಯ ಮೇಲಿನ ಆಕ್ಷೇಪಗಳ ಮೇಲೆ ಮೊದಲು ಆಲಿಕೆ ನಡೆಸಬೇಕು. ಅನಂತರ ನ್ಯಾಯಾಲಯವು ಮೇ ೨೬ರಂದು ಖಟ್ಲೆಯ ಸ್ವರೂಪದ ಮೇರೆಗೆ ಆಲಿಕೆ ನಡೆಸಲಾಗುವುದು ಎಂದು ಹೇಳಿದೆ ಎಂದು ಹೇಳಿದೆ.
ಈ ಆದೇಶ ೭, ನಿಯಮ ೧೧ ಏನು ?
‘ನ್ಯಾಯಾಲಯದಲ್ಲಿ ದಾಖಲಿಸಲಾದ ಅರ್ಜಿಯ ಮೇಲೆ ತಥ್ಯಗಳ ಗುಣಮಟ್ಟದ ಮೇರೆಗೆ ವಿಚಾರ ಮಾಡುವ ಬದಲು ಆ ಅರ್ಜಿಗೆ ತೀರ್ಪು ನೀಡುವುದು ಯೋಗ್ಯವಿದೆಯೇ ? ಇದನ್ನು ಆದೇಶ ೭, ನಿಯಮ ೧೧ರ ಅನುಸಾರ ಪರಿಶೀಲಿಸಬೇಕು. ಹಾಗೆಯೇ ಅರ್ಜಿದಾರು ಭರವಸೆಯನ್ನು ಕೇಳುತ್ತಿದ್ದರೆ ಅದನ್ನು ನ್ಯಾಯಾಲಯಕ್ಕೆ ಕೊಡಲು ಸಾಧ್ಯವೇ ? ಅರ್ಜಿಯಲ್ಲಿ ಕೇಳಲಾದ ಭರವಸೆಯನ್ನು ನೀಡಲು ಸಾಧ್ಯವಿಲ್ಲ, ಎಂದು ನ್ಯಾಯಾಲಯದಲ್ಲಿ ಕಂಡುಬಂದರೆ, ನ್ಯಾಯಾಲಯವು ಖಟ್ಲೆಯ ಗುಣಮಟ್ಟದ ಬದಲು ಅರ್ಜಿದಾರರ ಆಲಿಕೆಯನ್ನು ಪಡೆಯದೇ ನಿರಾಕರಿಸಬಹುದು. ಆದೇಶ ೭ ರ ಅನ್ವಯ ಅನೇಕ ಕಾರಣಗಳಿಂದ ನ್ಯಾಯಾಲಯವು ಮೊದಲೇ ಅರ್ಜಿಯನ್ನು ತಿರಸ್ಕರಿಸಬಹುದು. ಅರ್ಜಿದಾರರು ಅರ್ಜಿಯನ್ನು ದಾಖಲಿಸುವಾಗ ಕಾರಣಗಳನ್ನು ಸ್ಪಷ್ಟಪಡಿಸದಿದ್ದರೆ ಅಥವಾ ಅರ್ಜಿಯಲ್ಲಿನ ಖಟ್ಲೆಯಲ್ಲಿ ತಥ್ಯವಿಲ್ಲದಿದ್ದರೆ ನ್ಯಾಯಾಲಯವು ಅರ್ಜಿಯನ್ನು ದಾಖಲಿಸುವ ಮೊದಲೇ ತಡೆಯಬಹುದು.
ಧಾರ್ಮಿಕ ಸ್ಥಳಗಳ ಕಾನೂನು ಏನು ಹೇಳುತ್ತದೆ ?
‘ಧಾರ್ಮಿಕ ಸ್ಥಳಗಳ ಕಾನೂನು ೧೯೯೧’ರ ಅನ್ವಯ ಯಾವುದೇ ಉಪಾಸನೆಯ ಸ್ಥಳದ ರೂಪಾಂತರವನ್ನು ನಿರ್ಬಂಧಿಸಲು ಹಾಗೂ ಅಗಸ್ಟ ೧೫, ೧೯೪೭ರಂದು ಅಸ್ತಿತ್ವದಲ್ಲಿರುವಂತೆಯೇ ಯಾವುದೇ ಸ್ಥಳದ ಧಾರ್ಮಿಕ ಸ್ವರೂಪವನ್ನು ಉಳಿಸಲು ವಿಶೇಷ ಸಂಗತಿಗಳ ವ್ಯವಸ್ಥೆಯನ್ನು ಈ ಕಾನೂನಿನಲ್ಲಿ ಮಾಡಲಾಗಿದೆ.