ಜ್ಞಾನವಾಪಿ ಪ್ರಕರಣದ ಮುಂದಿನ ರೂಪರೇಷೆ ಕುರಿತು ಜಿಲ್ಲಾ ನ್ಯಾಯಾಲಯದಲ್ಲಿ ಇಂದು ತೀರ್ಪು

ವಾರಾಣಸಿ (ಉತ್ತರ ಪ್ರದೇಶ) – ಜ್ಞಾನವಾಪಿ ಮಸೀದಿಯ ಪ್ರಕರಣ ಸರ್ವೋಚ್ಛ ನ್ಯಾಯಾಲಯವು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿದ ನಂತರ ಮೇ ೨೩ ರಂದು ಇದರ ಮೇಲೆ ವಿಚಾರಣೆ ನಡೆಸಿತು. ಈ ಸಮಯದಲ್ಲಿ ಹಿಂದೂ ಮತ್ತು ಮುಸಲ್ಮಾನ ಎರಡೂ ಪಕ್ಷದವರು ತಮ್ಮ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಹಿಂದೂ ಪಕ್ಷದವರು ನ್ಯಾಯಾಲಯದಲ್ಲಿ ಸಮೀಕ್ಷೆಯ ವರದಿ, ವಿಡಿಯೋ ಮತ್ತು ಛಾಯಾಚಿತ್ರಗಳು ಇದರ ಬೇಡಿಕೆ ಇಟ್ಟಿದೆ. ಸರಿಸುಮಾರು ೪೫ ನಿಮಿಷ ವಾದ ನಡೆದ ಮೇಲೆ ನ್ಯಾಯಾಲಯವು ಈ ಕುರಿತು ಮೇ ೨೪ ರವರೆಗೆ ತೀರ್ಪು ಕಾಯ್ದಿರಿಸಿದೆ. ಇದರಲ್ಲಿನ ಮುಂದಿನ ವಿಚಾರಣೆ ಹೇಗೆ ನಡೆಯುವುದು, ಅದರ ರೂಪರೇಷೆ ಏನು ಇರುವುದು, ಇದನ್ನು ನಾಳೆ ಹೇಳಲಾಗುವುದು. ಇದರ ಜೊತೆಗೆ ಮುಂದಿನ ವಿಚಾರಣೆಯ ದಿನಾಂಕವೂ ತಿಳಿಸಲಾಗುವುದು. ಸರ್ವೋಚ್ಚ ನ್ಯಾಯಾಲಯವು ೮ ವಾರದಲ್ಲಿ ವಿಚಾರಣೆ ಪೂರ್ಣಗೊಳಿಸುವ ಆದೇಶ ನೀಡಿದೆ. ವಿಚಾರಣೆಯ ಸಮಯದಲ್ಲಿ ನ್ಯಾಯಾಲಯದಲ್ಲಿ ಎರಡು ಪಕ್ಷದ ನ್ಯಾಯವಾದಿಗಳು, ಅರ್ಜಿದಾರರು ಮುಂತಾದ ಕೇವಲ ೨೩ ಜನರು ಉಪಸ್ಥಿತರಿದ್ದರು. ಮಾಜಿ ನ್ಯಾಯಾಲಯ ಆಯುಕ್ತ ಅಜಯ ಕುಮಾರ ಮಿಶ್ರಾ ಇವರನ್ನು ನ್ಯಾಯಾಲಯದಲ್ಲಿ ಬರುವುದನ್ನು ತಡೆಯಲಾಯಿತು. ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ ಅದಕ್ಕಾಗಿ ತಡೆಯಲಾಗಿದೆ ಎಂದು ಹೇಳಲಾಗಿದೆ.
ಈ ಪ್ರಕರಣದ ಸಂಬಂಧ ಪಟ್ಟ ಒಟ್ಟು ೩ ಅರ್ಜಿ ದಾಖಲಿಸಲಾಗಿದ್ದು, ಎರಡೂ ಪಕ್ಷದವರು ಬೇರೆ ಬೇರೆ ಬೇಡಿಕೆ ಸಲ್ಲಿಸಿದ್ದಾರೆ. ಹಿಂದೂ ಪಕ್ಷದಿಂದ ಲಕ್ಷ್ಮೀದೇವಿ, ರಾಕಿ ಸಿಂಹ, ಸೀತಾ ಸಾಹೋ, ಮಂಜು ವ್ಯಾಸ್ ಮತ್ತು ರೇಖಾ ಪಾಠಕ ಈ ೫ ಮಹಿಳೆಯರು ಪ್ರತಿದಿನ ಶ್ರೀ ಶೃಂಗಾರಗೌರಿ ದೇವಿಯ ಪೂಜೆ ಮಾಡುವುದಕ್ಕಾಗಿ ಬೇಡಿಕೆ ಮಾಡಿರುವ ಅರ್ಜಿ ದಾಖಲಿಸಿದ್ದಾರೆ. ಮುಸಲ್ಮಾನ ಪಕ್ಷದಿಂದ ‘ಅಂಜುಮನ ಇಂತೆಜಾಮಿಯಾ ಮಸೀದಿ ಸಮಿತಿ’ಯಿಂದ ಎರಡನೇ ಅರ್ಜಿ ದಾಖಲಿಸಿ ಈ ಮೊಕದ್ದಮೆ ‘ಧಾರ್ಮಿಕ ಸ್ಥಳ ಕಾನೂನು ೧೯೯೧ ರ ಉಲ್ಲಂಘನೆ ಆಗಿದೆ, ಎಂದು ಹೇಳಿದೆ. ಈ ಎರಡು ಪಕ್ಷದಿಂದ ಇತರ ಕೆಲವು ಬೇಡಿಕೆ ಸಲ್ಲಿಸಲಾಗಿದೆ. ಇದರಲ್ಲಿ ಹಿಂದೂಗಳಿಂದ ವಜೂಖಾನದಲ್ಲಿ ಸಿಕ್ಕಿರುವ ಶಿವಲಿಂಗದ ಪೂಜೆ ಮಾಡಲು ಅನುಮತಿ ನೀಡಬೇಕು, ನಂದಿಯ ಉತ್ತರಕ್ಕೆ ಇರುವ ಗೋಡೆ ತೆರವುಗೊಳಿಸಬೇಕು. ವಜೂಖಾನದಲ್ಲಿ ಪತ್ತೆಯಾದ ಶಿವಲಿಂಗದ ಉದ್ದ ಮತ್ತು ಅಗಲ ಅಳತೆಗಾಗಿ ಸಮೀಕ್ಷೆ ನಡೆಸಬೇಕು, ಮುಂತಾದ ಬೇಡಿಕೆಗಾಗಿ ಒತ್ತಾಯಿಸಲಾಗಿದೆ. ಈ ಎಲ್ಲದರ ಮೇಲೆ ಮೇ ೨೪ ರಂದು ತೀರ್ಪಿನಲ್ಲಿ ನ್ಯಾಯಾಲಯ ವಿಚಾರಣೆಯ ರೂಪರೇಷೆ ನಿಶ್ಚಯಿಸಲಿದೆ.