ಜ್ಞಾನ ವಾಪಿ ಗುಮ್ಮಟದ ಕೆಳಗೆ ಮಂದಿರದ ಮೂಲ ಗುಮ್ಮಟ ! ಹಿಂದೂ ಪಕ್ಷದ ನ್ಯಾಯವಾದಿ (ಪೂ) ಹರಿಶಂಕರ ಜೈನ

ನ್ಯಾಯವಾದಿ (ಪೂ) ಹರಿಶಂಕತ ಜೈನ( ಎಡದಲ್ಲಿ)

ವಾರಾಣಸಿ (ಉತ್ತರಪ್ರದೇಶ) – ನ್ಯಾಯಾಲಯದ ಆದೇಶದಿಂದ ನಡೆಸಲಾಗಿರುವ ಸಮೀಕ್ಷೆಯಿಂದ ಸ್ಪಷ್ಟವಾಗಿರುವುದು ಏನೆಂದರೆ, ಜ್ಞಾನ ವಾಪಿಯಲ್ಲಿ ದೇವಸ್ಥಾನವನ್ನು ನಾಶಗೊಳಿಸಿ ಮಸೀದಿಯನ್ನು  ಕಟ್ಟಲಾಗಿತ್ತು. ಅಲ್ಲಿಯ ಶಿವಲಿಂಗದ ಸತ್ಯಾಸತ್ಯತೆ ೩೫೨ ವರ್ಷಗಳ ನಂತರ ಜನರೆದುರು ಬಂದಿದೆ. ಯಾರು ಅದನ್ನು ಕಾರಂಜಿ ಎಂದು ಹೇಳುತ್ತಿದ್ದಾರೆಯೋ ಅದು ಕಾರಂಜಿಯಲ್ಲ, ಕೇವಲ ಶಿವಲಿಂಗವೇ ಆಗಿದೆ ಮತ್ತು ಅದರ ಎತ್ತರ ಮತ್ತು ಆಳ ಹೆಚ್ಚಾಗಿರಬಹುದು. ೩೫೩ ವರ್ಷಗಳ ಮೊದಲು ಕಾರಂಜಿಗಳು ಎಲ್ಲಿ ಇದ್ದವು ? ಅದಕ್ಕೆ ಎಲ್ಲಿಯೂ ಛಿದ್ರವಿಲ್ಲ. ನೀರು ಬರಲು ಸಹ ಎಲ್ಲಿಯೂ ಜಾಗವಿಲ್ಲ. ಪೈಪ್ ಲೈನ್ ಇಲ್ಲ. ದೇವಸ್ಥಾನದ ಶಿಖರದ ಮೇಲೆ ತಥಾಕಥಿತ ಗುಮ್ಮಟ ಇದೆ. ಅದರ ಕೆಳಗೆ ದೇವಸ್ಥಾನದ ನಿಜವಾದ ಗುಮ್ಮಟವಿದೆ. ಅದರ ಛಾಯಾಚಿತ್ರಗಳು ಸಹ ಬೆಳಕಿಗೆ ಬಂದಿದೆ, ಎಂದು ಹಿಂದೂ ಪಕ್ಷದ ನ್ಯಾಯವಾದಿ (ಪೂ) ಹರಿಶಂಕತ ಜೈನ ಇವರು ತಮ್ಮ ಪಕ್ಷವನ್ನು ಒಂದು ವಾರ್ತಾವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಂಡಿಸಿದರು.

ಜ್ಞಾನವಾಪಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿ ಅನೇಕ ವಿಷಯಗಳನ್ನು ಮುಚ್ಚಿಡುವ ಪ್ರಯತ್ನ !

ಪೂ.(ನ್ಯಾಯವಾದಿ) ಹರಿಶಂಕರ  ಜೈನ  ಮುಂದೆ ಹೀಗೆಂದರು, ಇಂದಿನ ಸಮೀಕ್ಷೆಯಲ್ಲಿ ಪ್ರಸ್ತುತಪಡಿಸಲಾದ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಏನೆಂದರೆ, ಜ್ಞಾನ ವಾಪಿಯಲ್ಲಿ ಅನೇಕ ಕಡೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿ ಮುಚ್ಚಿಡಲು ಪ್ರಯತ್ನಿಸಲಾಗಿದೆ. ಆದರೂ ಸಹ ಕೆಲವು ವಿಷಯಗಳು ಸ್ಪಷ್ಟವಾಗಿ ಕಾಣುತ್ತವೆ. ಅಲ್ಲಿ ಭಗ್ನವಾಗಿರುವ ಮೂರ್ತಿಗಳು ಸಿಕ್ಕಿವೆ. ಪಿಓಪಿ ಗೆ ಕೈ ತಗಲಿಸಿದರೆ ಅದು ಈಗಷ್ಟೇ ಹಚ್ಚಲಾಗಿರುವ ಹಾಗೆ ಕಾಣುತ್ತದೆ. ಮುಸಲ್ಮಾನ ಪಕ್ಷವು ದಾರಿ ತಪ್ಪಿಸುತ್ತಿದೆ.