ಜ್ಞಾನವಾಪಿಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಇಂದು ಆಲಿಕೆ

ನವದೆಹಲಿ – ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ವಿಷಯವಾಗಿ ಮೇ ೧೮ ರಂದು ಆಲಿಕೆ ನಡೆಯುವುದಿತ್ತು. ಆ ಸಮಯದಲ್ಲಿ ಹಿಂದೂ ಪಕ್ಷವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಮಯಾವಕಾಶ ಕೇಳಿದ ನಂತರ ನ್ಯಾಯಾಲಯವು ಇದರ ಬಗ್ಗೆ ನಾಳೆ ಮೇ ೧೯ ರಂದು ಮಧ್ಯಾಹ್ನ ೩ ಗಂಟೆಗೆ ಆಲಿಕೆ ನಡೆಸಲು ನಿಶ್ಚಯಿಸಿದೆ. ಆ ಸಮಯದಲ್ಲಿ ಎಲ್ಲಾ ಪಕ್ಷಗಳಿಗೆ ವರದಿ ಪ್ರಸ್ತುತಪಡಿಸಲು ಹೇಳಲಾಗಿದೆ. ಹಿಂದೂ ಪಕ್ಷದ ನ್ಯಾಯವಾದಿ ವಿಷ್ಣುಶಂಕರ ಜೈನ ಇವರು ನ್ಯಾಯಾಲಯಕ್ಕೆ, ‘ನಮ್ಮ ಸಹಕಾರಿ ಜೇಷ್ಠ ನ್ಯಾಯವಾದಿ (ಪೂ) ಹರಿಶಂಕರ ಜೈನ ಇವರ ಆರೋಗ್ಯ ಸರಿಯಿಲ್ಲ. ಆದ್ದರಿಂದ ನ್ಯಾಯಾಲಯವು ಈ ಪ್ರಕರಣದ ಆಲಿಕೆಯನ್ನು ನಾಳೆ ನಡೆಸಬೇಕು’ ಎಂದು ಹೇಳಿದರು. ಇದರ ಜೊತೆಗೆ ಸರ್ವೋಚ್ಚ ನ್ಯಾಯಾಲಯವು ವಾರಾಣಸಿ ನ್ಯಾಯಾಲಯದಲ್ಲಿನ ಆಲಿಕೆಯನ್ನೂ ಸ್ಥಗಿತಗೊಳಿಸಿದೆ. ಸರ್ವೋಚ್ಚ ನ್ಯಾಯಾಲಯವು ದಿವಾಣಿ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಮೇ ೧೯ ರವರೆಗೆ ಮುಂದೂಡುವಂತೆ ಆದೇಶ ನೀಡಿದೆ. ಈ ಮೊದಲು ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ವರದಿಯನ್ನು ವಾರಾಣಸಿ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾಗಿದೆ. ಈ ವರದಿಯ ವಿಷಯವಾಗಿ ಯಾವುದೇ ಖುಲಾಸೆ ಮಾಡಲು ನ್ಯಾಯಾಲಯದ ಆಯುಕ್ತರು ನಿರಾಕರಿಸಿದ್ದಾರೆ. ನ್ಯಾಯಾಲಯದ ವರದಿ ತೆಗೆದುಕೊಂಡ ನಂತರ ಈ ವಿಷಯವಾಗಿ ಯಾವುದೇ ರೀತಿಯಲ್ಲಿ ಖುಲಾಸೆ ಮಾಡಬಹುದು, ಎಂದು ನ್ಯಾಯಾಲಯದ ಆಯುಕ್ತ ವಿಶಾಲ ಸಿಂಹ ಇವರು ಹೇಳಿದರು.

೧. ಜ್ಞಾನವಾಪಿ ಮಸೀದಿಯ ವ್ಯವಸ್ಥಾಪನಾ ಸಮಿತಿಯಿಂದ ಸಮೀಕ್ಷೆಯ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ದಾಖಲಿಸಲಾಗಿದೆ. ವ್ಯವಸ್ಥಾಪಕರು ಇದರ ಬಗ್ಗೆ, ‘ಜ್ಞಾನವಾಪಿ ಮಸೀದಿ ಆವರಣದಲ್ಲಿ ನಡೆಸಲಾದ ಸಮೀಕ್ಷೆಯು ಪ್ರಾರ್ಥನಾ ಸ್ಥಳ ಕಾನೂನು ೧೯೯೧ ಇಸ್ವಿಯ (ಪ್ಲೇಸಸ್ ಅಫ್ ವರ್ಷಿಪ್ ಆಕ್ಟ್) ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ಹಿಂದೂ ಸೇನೆಯು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮನವಿಯನ್ನು ದಾಖಲಿಸಿ ಮಸೀದಿ ವ್ಯವಸ್ಥಾಪನ ಸಮಿತಿಯ ಮನವಿ ತಿರಸ್ಕರಿಸಲು ಒತ್ತಾಯಿಸಿದೆ.

೨. ಈ ವಿಷಯವಾಗಿ ನ್ಯಾಯಾಲಯವು ಸಮೀಕ್ಷೆಯ ಸಂದರ್ಭದಲ್ಲಿ ದಿವಾಣಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ಆಲಿಕೆಯನ್ನು ಸ್ಥಗಿತಗೊಳಿಸಲು ನಿರಾಕರಿಸಿದೆ. ಸಮೀಕ್ಷೆಯ ಸಮಯದಲ್ಲಿ ಸಿಕ್ಕಿರುವ ಶಿವಲಿಂಗದ ಪರಿಸರ ಸಂರಕ್ಷಿಸುವ ನಿರ್ದೇಶವನ್ನು ನ್ಯಾಯಾಲಯವು ಜಿಲ್ಲಾಧಿಕಾರಿಗಳಿಗೆ ನೀಡಿತ್ತು.