ಬುರಖಾ ಧರಿಸಿ ಬಂದಂತಹ ಭಯೋತ್ಪಾದಕರು ಎಸೆದ ಗ್ರೆನೆಡದ ದಾಳಿಯಲ್ಲಿ ಒಬ್ಬ ಹಿಂದೂವಿನ ಹತ್ಯೆ ಹಾಗೂ ೩ ಜನರಿಗೆ ಗಾಯ

ಬಾರಾಮುಲಾ(ಜಮ್ಮು-ಕಾಶ್ಮೀರ) – ಬಾರಾಮುಲಾದಲ್ಲಿ ಹೊಸದಾಗಿ ತೆರೆಯಲಾದ ಮಧ್ಯದಂಗಡಿ ಮೇಲೆ ಮೇ ೧೭ರಂದು ಬುರಖಾಧಾರಿ ಭಯೋತ್ಪಾದಕನು ಗ್ರೆನೆಡನಿಂದ ದಾಳಿ ನಡೆಸಿದ್ದರಿಂದ ಇದರಲ್ಲಿ ರಂಜಿತ ಸಿಂಗ ಈ ಕಾರ್ಮಿಕನು ಸಾವನ್ನಪ್ಪಿದ್ದಾನೆ ಮತ್ತು ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಗೋವರ್ಧನ ಸಿಂಗ, ರವಿ ಸಿಂಗ ಮತ್ತು ಗೋವಿಂದ ಸಿಂಗ ಸೇರಿದ್ದಾರೆ. ದ್ವಿಚಕ್ರ ವಾಹನದಿಂದ ಬಂದಿದ್ದ ಇಬ್ಬರು ಭಯೋತ್ಪಾದಕರ ಪೈಕಿ ಹಿಂದೆ ಕುಳಿತವನು ಮತ್ತು ಬುರಖಾ ಹಾಕಿರುವ ಭಯೋತ್ಪಾದಕನು ಈ ಗ್ರೆನೆಡ ಎಸೆದನು ಮತ್ತು ಓಡಿ ಹೊದರು.

ಅನೇಕ ಯುರೋಪಿಯನ ದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರಖಾ ಧರಿಸುವುದನ್ನು ನಿಷೇಧಿಸಲಾಗಿದೆ. ಅಷ್ಟೆ ಅಲ್ಲ ಈಜಿಪ್ಟ, ಟ್ಯುನೀಷಿಯಾ, ಕೊಸೊವೊದಂತಹ ಇಸ್ಲಾಮಿಕ ರಾಷ್ಟ್ರಗಳಲ್ಲೂ ನಿಷೇಧವಿರುವಾಗ ಈಗ ಭಾರತದಲ್ಲಿಯು ಅದೇರೀತಿ ನಿಷೇಧ ಹೇರಬೇಕು, ಎಂಬುದನ್ನು ಈ ಘಟನೆ ತೋರಿಸುತ್ತದೆ ! – ಸಂಪಾದಕರು 

ಕಾಶ್ಮೀರದಲ್ಲಿ ಹಿಂದೂಗಳು ಇನ್ನೂ ಅಸುರಕ್ಷಿತವಾಗಿರುವುದು, ಇದು ಇಲ್ಲಿಯವರೆಗಿನ ಆಡಳಿತಗಾರರಿಗೆ ನಾಚಿಕೆಗೇಡಿನ ಸಂಗತಿ ! -ಸಂಪಾದಕರು