ಚಂದ್ರನ ಮೇಲಿರುವ ಮಣ್ಣಿನಲ್ಲಿ ಸಸ್ಯ ಬೆಳೆಸಲು ವಿಜ್ಞಾನಿಗಳಿಗೆ ಯಶಸ್ಸು !

ವಾಶಿಂಗ್ಟನ್‌ (ಅಮೇರಿಕಾ) – ಯಾವುದೇ ಭೂಮಿಯಲ್ಲಿ ವನಸ್ಪತಿಯನ್ನು ಬೆಳೆಸಲು ಆ ಭೂಮಿಯು ಫಲವತ್ತಾಗಿರುವುದು ಆವಶ್ಯಕವಾಗಿದೆ. ಚಂದ್ರನ ಸಂಶೋಧನೆ ಮಾಡುವ ‘ನಾಸಾ’ ಎಂಬ ಅಮೇರಿಕಾದ ಸಂಶೋಧನಾ ಸಂಸ್ಥೆಯು ಇದಕ್ಕಾಗಿ ಮುಂದಾಳತ್ವವನ್ನು ವಹಿಸಿದೆ. ಈ ಸಂಶೋಧನೆಯ ಸಮಯದಲ್ಲಿ ‘ಫ್ಲೋರಿಡಾ ವಿಶ್ವವಿದ್ಯಾಲಯ’ದ ವಿಜ್ಞಾನಿಗಳ ಒಂದು ಗುಂಪು ಚಂದ್ರನ ಮೇಲಿರುವ ಮಣ್ಣಿನಲ್ಲಿ ಸಸ್ಯಗಳನ್ನು ಬೆಳೆಸುವ ವಿಷಯದಲ್ಲಿ ಯಶಸ್ಸನ್ನು ಗಳಿಸಿವೆ. ಈ ಸಂಶೋಧನೆಯನ್ನು ಒಂದು ವರದಿಯಲ್ಲಿ ಪ್ರಕಾಶಿಸಲಾಗಿದೆ.

೧. ಚಂದ್ರನ ಮೇಲ್ಮೈಯಲ್ಲಿರುವ ಮಣ್ಣು ಕಲ್ಲುಗಳಿಂದ ಕೂಡಿದೆ. ಆದರೂ ‘ನಾಸಾ’ದ ವಿಜ್ಞಾನಿಗಳು ವಿವಿಧ ‘ಅಪೋಲೊ ಮಿಶನ್ಸ್‌’ನ ಸಮಯದಲ್ಲಿ ಒಟ್ಟು ೩೮೨ ಕಿಲೋ ಭಾರದ ಕಲ್ಲನ್ನು ಅಲ್ಲಿಂದ ಪೃಥ್ವಿಗೆ ತಂದರು. ಅವುಗಳನ್ನು ವಿವಿಧ ವಿಜ್ಞಾನಿಗಳಿಗೆ ಸಂಶೋಧನೆಗಾಗಿ ಹಂಚಲಾಯಿತು.

೨. ಅಮೇರಿಕಾದಲ್ಲಿನ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿನ ಎನಾ-ಲಿಸಾ ಪೌಲ ಮತ್ತು ಪ್ರಾ. ರಾಬರ್ಟ ಫರ್ಲರವರು ಸಂಶೋಧನೆಯನ್ನು ನಡೆಸಿದ್ದು ಅವರಿಗೆ ಚಂದ್ರನ ಕೇವಲ ೧೨ ಗ್ರಾಮ ಮಣ್ಣು ದೊರೆತಿತ್ತು. ಅವರು ೧೧ ವರ್ಷಗಳ ವರೆಗೆ ಸಂಶೋಧನೆಯನ್ನು ಮಾಡಿ ಚಂದ್ರನ ಮಣ್ಣಿನಲ್ಲಿ ಸಸ್ಯವನ್ನು ಬೆಳೆಸಿದರು.

೩. ಪೌಲರವರು ಮಾತನಾಡುತ್ತ, ಈ ಹಿಂದೆಯೂ ಇಂತಹ ಸಸ್ಯಗಳನ್ನು ಬೆಳೆಸಲಾಗಿತ್ತು; ಆದರೆ ಆಗ ಬೀಜಗಳ ಮೇಲೆ ಚಂದ್ರನ ಮಣ್ಣನ್ನು ಕೇವಲ ಸಿಂಪಡಿಸಲಾಗಿತ್ತು. ಈ ಬಾರಿ ಮಾತ್ರ ಪ್ರತ್ಯಕ್ಷ ಚಂದ್ರನ ಮಣ್ಣಿನಲ್ಲಿಯೇ ಸಸ್ಯವನ್ನು ಬೆಳೆಸಿದೆವು. ಈ ಸಸ್ಯಗಳಿಗೆ ಪೃಥ್ವಿಯಲ್ಲಿರುವ ಗಾಳಿ ಮತ್ತು ನೀರು ನೀಡಲಾಯಿತು, ಎಂದು ಹೇಳಿದರು.