ದಿವಾಣಿ ನ್ಯಾಯಾಲಯದ ಆದೇಶ
|
ವಾರಾಣಸಿ (ಉತ್ತರಪ್ರದೇಶ) – ಜ್ಞಾನವಾಪಿ ಮಸೀದಿ ಮತ್ತು ಶೃಂಗಾರಗೌರಿ ಮಂದಿರ ಇದರ ಸಮೀಕ್ಷೆ ಮತ್ತು ಚಿತ್ರೀಕರಣವು ಬರುವ ಮೆ ೧೭ ರ ಮೊದಲು ಪೂರ್ಣ ಮಾಡುವುದು ಮತ್ತು ಅದರ ವರದಿ ಸಲ್ಲಿಸಿ, ಎಂದು ಇಲ್ಲಿಯ ದಿವಾಣಿ ನ್ಯಾಯಾಲಯ ಮೆ ೧೨ ರಂದು ನಡೆದಿರುವ ವಿಚಾರಣೆಯಲ್ಲಿ ಆದೇಶ ನೀಡಲಾಗಿದೆ. ಮುಸಲ್ಮಾನ ಕಕ್ಷಿದಾರರಿಂದ ನ್ಯಾಯಾಲಯ ಆಯುಕ್ತ ಅಜಯ್ ಕುಮಾರ ಮಿಶ್ರಾ ಇವರನ್ನು ಬದಲಾಯಿಸುವ ಬೇಡಿಕೆಯನ್ನು ನ್ಯಾಯಾಲಯ ನಿರಾಕರಿಸಿದೆ, ನ್ಯಾಯಾಲಯ ಇನ್ನು ೨ ಆಯುಕ್ತರ ನೇಮಕ ಮಾಡಿದೆ. ವಿಶಾಲ ಸಿಂಹ ಮತ್ತು ಅಜಯ ಪ್ರತಾಪ ಇವರು ಸಹಾಯಕ ಆಯುಕ್ತ ಇರುವರು. ಇದರ ಜೊತೆಗೆ ಜ್ಞಾನವಾಪಿ ಮಸೀದಿಯ ಬೀಗ ತೆಗೆಯುವ ಅನುಮತಿ ನೀಡಿದೆ. ಇಲ್ಲಿರುವ ನೆಲಮನೆ ಹಾಗೂ ಪ್ರತಿಯೊಂದು ವಿಷಯದ ಸಮೀಕ್ಷೆ ನಡೆಸಲು ಹೇಳಲಾಗಿದೆ. ನ್ಯಾಯಾಲಯದ ಈ ಆದೇಶದ ನಂತರ ಮೆ ೧೩ ರಂದು ಬೆಳಿಗ್ಗೆ ೮ ರಿಂದ ಮಧ್ಯಾಹ್ನ ೧೨ ವರೆಗಿನ ಸಮಯದಲ್ಲಿ ಮತ್ತೆ ಸಮೀಕ್ಷೆ ಮತ್ತು ಚಿತ್ರೀಕರಣ ಮಾಡಲಾಗುವುದು. ಸಮೀಕ್ಷೆಯ ಸಮಯದಲ್ಲಿ ಸರಕಾರ ರಕ್ಷಣೆ ಪೂರೈಸುವಂತೆ ಆದೇಶ ನೀಡಿದೆ. ‘ಈ ಸಮಯದಲ್ಲಿ ಈ ಸಮೀಕ್ಷೆಗೆ ಯಾರಾದರೂ ವಿರೋಧ ವ್ಯಕ್ತಪಡಿಸುವ ಪ್ರಯತ್ನ ನಡೆಸಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದು’, ಎಚ್ಚರಿಕೆ ನ್ಯಾಯಾಲಯ ನೀಡಿದೆ.
ಈ ಮೊದಲು ಮೆ ೭ ರಂದು ಜ್ಞಾನವಾಪಿ ಮಸೀದಿಯ ಸಮೀಕ್ಷೆಗೆ ವಿರೋಧ ಮಾಡಿರುವ ಮುಸಲ್ಮಾನರ ಮೇಲೆ ಅಪರಾಧ ದಾಖಲಿಸಲಾಗಿದೆ. ನ್ಯಾಯಾಲಯದಲ್ಲಿ ನಡೆದಿರುವ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯ ಆಯುಕ್ತ, ಎರಡೂ ಪಕ್ಷದ ನ್ಯಾಯವಾದಿಗಳು ಮತ್ತು ಅರ್ಜಿದಾರರು ಉಪಸ್ಥಿತರಿದ್ದರು.
Gyanvapi mosque order accessed: Survey to go on; Commissioner to submit report on May 17 https://t.co/SOG9cgQ2xp
— Republic (@republic) May 12, 2022