ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಉಡುಪಿ ಹಾಗೂ ಕುಮಟಾದಲ್ಲಿ ಹಿಂದೂ ರಾಷ್ಟ್ರ ಅಧಿವೇಶನ !

ಉಡುಪಿ – ‘ನಮಗೆಲ್ಲಾ ಬದುಕಲು ದೇಹ ಎಷ್ಟು ಮುಖ್ಯವೋ ದೇಶ ಮತ್ತು ಧರ್ಮ ಅಷ್ಟೇ ಮುಖ್ಯವಾಗಿದೆ. ನಾವೆಲ್ಲ ಸನಾತನ ಹಿಂದೂ ಧರ್ಮದ ಆಚರಣೆಗಳನ್ನು, ಸಂಸ್ಕಾರಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ಕೊಡಲು ಪ್ರಾರಂಭಿಸಬೇಕು’, ಎಂದು ಆಯುರ್ವೇದ ತಜ್ಞ ವೈದ್ಯರಾದ ಶ್ರೀ. ಆಚಾರ್ಯ ಶ್ರೀಧರ ದಾಸಜಿ ಇವರು ಹೇಳಿದ್ದಾರೆ.

ಶ್ರೀ. ಗುರುಪ್ರಸಾದ ಗೌಡ

ಅವರು ಹಿಂದೂ ಜನಜಾಗೃತಿ ಸಮಿತಿಯಿಂದ ಇಲ್ಲಿನ ದೈವಜ್ಞ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಮಾತನಾಡುತ್ತಿದ್ದರು.  ಈ ವೇಳೆ ನ್ಯಾಯವಾದಿ ಚಂದ್ರಕಾಂತ ಅವರು ಮಾತನಾಡುತ್ತಾ, ‘ಸಮಾಜದಲ್ಲಿರುವ ಕ್ಷಣಿಕ ಸುಖದ ಅಧರ್ಮದ ಕಸವನ್ನು ಪ್ರಖರ ಹಿಂದುತ್ವದ ಜ್ವಾಲೆಯಿಂದ ತೊಲಗಿಸಿ’ ಎಂದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶೇ. ೬೪ ಆಧ್ಯಾತ್ಮಿಕ ಮಟ್ಟದ ಶ್ರೀ. ಗುರುಪ್ರಸಾದ ಗೌಡ ‘ಕೇವಲ ಜನ್ಮ ಹಿಂದೂವಾಗದೇ ಕರ್ಮ ಹಿಂದೂಗಳಾಗಬೇಕಾಗಿದೆ’, ಎಂದು ಕರೆ ನೀಡಿದರು.

ಕುಮಟಾ – ‘ಇಂದು ಹಿಂದೂ ಧರ್ಮದ ಮೇಲೆ ಅನೇಕ ಆಘಾತಗಳು ಆಗುತ್ತಿರುವಾಗ ಹಿಂದೂಗಳು ಜಾತಿ ಪದ್ಧತಿಯಲ್ಲಿ ಸಿಕ್ಕಿಕೊಳ್ಳದೆ ನಾವೆಲ್ಲಾ ಹಿಂದೂಗಳು ಒಂದೇ ಎನ್ನುವ ಮನೋಭಾವದಿಂದ ಸಂಘಟಿತರಾಗಿ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಂಘಟಿತರಾಗಿ ಹೊರಡಬೇಕಿದೆ ಎಂದು ವಿಷ್ಣುಗುಪ್ತ ವಿದ್ಯಾಲಯದ ಶ್ರೀ. ಮಂಜುನಾಥ ಭಟ್ ಅವರು ಮೇ ೧ ರಂದು  ಕುಮಟಾದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಜರುಗಿದ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಹೇಳಿದ್ದಾರೆ. ಈ ವೇಳೆ ಹಿರಿಯ ನ್ಯಾಯವಾದಿಗಳಾದ ಸೌ. ರಾಘವಿ ನಾಯಕ ಇವರೂ ಮಾರ್ಗದರ್ಶನ ಮಾಡಿದರು. ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾಸಮನ್ವಯಕರಾದ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ಚಂದ್ರ ಮೊಗೇರ್ ಇವರು ಮಾರ್ಗದರ್ಶನ ಮಾಡಿದರು.