ಧಾರ್ಮಿಕ ಸ್ಥಳಗಳಿಂದ ಇಳಿಸಲಾದ ಭೋಂಗಾಗಳನ್ನು ಪುನಃ ಹಚ್ಚಿದರೆ ಕಾರ್ಯಾಚರಣೆ ಮಾಡಿ !

ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರ ಆದೇಶ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶ ರಾಜ್ಯದಲ್ಲಿ ಧಾರ್ಮಿಕ ಸ್ಥಳಗಳಿಂದ ಇಲ್ಲಿಯ ವರೆಗೆ ೧ ಲಕ್ಷಕ್ಕಿಂತಲೂ ಹೆಚ್ಚಿನ ಭೋಂಗಾಗಳನ್ನು ಇಳಿಸಲಾಗಿದೆ. ತೆಗೆಸಲಾದ ಭೋಂಗಾಗಳನ್ನು ಪುನಃ ಹಚ್ಚದಿರುವಂತೆ ಕಾಳಜಿ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ವಹಿಸಲಾಗಿದೆ. ತೆಗೆಯಲಾದ ಭೋಂಗಾಗಳನ್ನು ಪುನಃ ಹಚ್ಚಿದರೆ ಅವರ ಮೇಲೆ ಕಾರ್ಯಾಚರಣೆಯನ್ನು ಮಾಡಬೇಕು ಎಂದು ಆದೇಶಿಸಲಾಗಿದೆ, ಎಂಬ ಮಾಹಿತಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ನೀಡಿದ್ದಾರೆ.