ಕಾನಪುರ : ಸರಕಾರಿ ಭೂಮಿಯಲ್ಲಿದ್ದ ಮದರಸಾ ನೇಲಸಮ ಮಾಡಿದ ಸರಕಾರ

ಕಾನಪುರ (ಉತ್ತರಪ್ರದೇಶ) – ಘಟಂಪುರ ಭಾಗದಲ್ಲಿರುವ ಇಸ್ಲಾಮಿಯ ಮದರಸಾವನ್ನು ಅತಿಕ್ರಮಣ ವಿರೋಧಿ ದಳದಿಂದ ಬಿಳಿಸಲಾಯಿತು.ಈ ಮದರಸಾ ಸರ್ಕಾರಿ ಭೂಮಿಯಲ್ಲಿ ಕಟ್ಟಲಾಗಿರುವುದರಿಂದ ಅದರ ಮೇಲೆ ಕ್ರಮ ಕೈಗೊಳ್ಳಲಾಯಿತು. ಈ ಸಮಯದಲ್ಲಿ ದೊಡ್ಡಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು. ಇನ್ನೊಂದು ಕಡೆ ಮದರಸಾದ ಮುಖ್ಯಾಧ್ಯಾಪಕ ಇಂತಜಾರ ಅಹಮದ ಇವರು ‘ಈ ಭೂಮಿ ನಮ್ಮದು , ಎಂದು ಹೇಳುವ ಪ್ರಯತ್ನ ಮಾಡಿದ್ದೇವೆ. ಆದರೆ ಸರಕಾರ ಇದನ್ನು ಕೇಳಲು ನಿರಾಕರಿಸಿತು’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಸರಕಾರಿ ಭೂಮಿಯಲ್ಲಿ ಕಾನೂನುಬಾಹಿರ ಕಟ್ಟಡ ಆಗುವವರೆಗೂ ಸರಕಾರ ಮಲಗಿತ್ತೆ ? ಕಟ್ಟಡ ಕಟ್ಟುವವರೆಗೆ ಅದರ ಕಡೆಗೆ ದುರ್ಲಕ್ಷಿಸಿ ಜವಾಬ್ದಾರರ ಮೇಲೆ ಈಗ ಕ್ರಮ ಕೈಗೊಳ್ಳಬೇಕು !