ಅಲವರ (ರಾಜಸ್ಥಾನ) ಇಲ್ಲಿಯ ಮಾಜಿ ಜಿಲ್ಲಾಧಿಕಾರಿ ಸೇರಿದಂತೆ ಮುವರನ್ನು ೫ ಲಕ್ಷ ರೂಪಾಯಿ ಲಂಚ ಸ್ವಿಕರಿಸುತ್ತಿರುವಾಗ ಬಂಧನ

ಅಲವರ (ರಾಜಸ್ಥಾನ) – ಅಲವರ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ನನ್ನುಮಲ ಪಹಾಡಿಯಾ, ಆದಾಯ ತೆರಿಗೆ ಅಧಿಕಾರಿ ಅಶೋಕ ಸಂಖಲಾ ಮತ್ತು ದಲ್ಲಾಳಿ ನಿತಿನ ಅವರನ್ನು ೫ ಲಕ್ಷ ರೂಪಾಯಿಗಳ ಲಂಚ ಸ್ವಿಕರಿಸುತ್ತಿರುವಾಗ ರಾಜ್ಯದ ಲಂಚ ತಡೆ ಇಲಾಖೆಯು ಬಂಧಿಸಿದೆ. ಸರಕಾರ ಇತ್ತೀಚೆಗೆ ಪಹಾಡಿಯಾ ಅವರನ್ನು ಸ್ಥಳಾಂತರ ಮಾಡಿತ್ತು. ಈ ಮುವರು ಕಂಪನಿಯೊಂದರ ನಿರ್ಮಾಣಕ್ಕೆ ಯಾವುದೇ ಅಡೆತಡೆ ಬರದಂತೆ ೧೬ ಲಕ್ಷ ರುಪಾಯಿಗಳ ಬೇಡಿಕೆ ಇಟ್ಟಿದ್ದರು.

ಸಂಪಾದಕೀಯ ನಿಲುವು

ಇಂತಹ ಲಂಚಕೋರರ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಅವರಿಗೆ ಕಠಿಣ ಶಿಕ್ಷೆಯಾಗಲು ಸರಕಾರ ಪ್ರಯತ್ನ ಮಾಡಬೇಕು !