#Boycott_MalabarGold ಹೆಸರಿನ ಟ್ವಿಟರ್ ಟ್ರೆಂಡ್ ರಾಷ್ಟ್ರೀಯ ಸ್ತರದಲ್ಲಿ ೫ ನೇ ಸ್ಥಾನದಲ್ಲಿ !

ಮುಂಬಯಿ – ಮಲಬಾರ್ ಗೋಲ್ಡ್ ಜಾಹಿರಾತಿನ ವಿರೋಧದಲ್ಲಿ ಟ್ವಿಟರ್ ಮೇಲೆ #Boycott MalabarGold ಮತ್ತು #No _Bindi _ No Business ಹ್ಯಾಷಟ್ಯಾಗ್ ಟ್ರೆಂಡ್ ಆಯಿತು. ಈ ಟ್ರೆಂಡ್ ಮೂಲಕ ಧರ್ಮಪ್ರೇಮಿ ಹಿಂದೂಗಳು ಮಲಬಾರ್ ಗೋಲ್ಡ್ ಅನ್ನು ನಿಷೇಧಿಸಿ ಅದನ್ನು ಬಹಿಷ್ಕರಿಸುವಂತೆ ಕೋರಿದ್ದರು. ಈ ಟ್ರೆಂಡ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು, ಈ ೨ ಹ್ಯಾಷಟ್ಯಾಗ್ ರಾಷ್ಟ್ರೀಯ ಸ್ತರದಲ್ಲಿ ಅನುಕ್ರಮವಾಗಿ ೫ ಮತ್ತು ೬ ನೇ ಸ್ಥಾನ ಪಡೆದವು. ಈ ವಿಷಯದಲ್ಲಿ ೨೫ ಸಾವಿರಕ್ಕೂ ಹೆಚ್ಚಿನ ಟ್ವೀಟ್ ಮಾಡಲಾಯಿತು.

ದೊಡ್ಡಪ್ರಮಾಣದಲ್ಲಿ ಪ್ರಸಾರವಾಗಿರುವುದರಿಂದ ಕೆಲವು ಆಕರ್ಷಕ ಟ್ವೀಟ್ಸ್ !

೧. ಅಕ್ಷಯ ತೃತೀಯಾ ಇದು ಹಿಂದೂಗಳ ಹಬ್ಬವಾಗಿದೆ. ಅದರಲ್ಲಿ ರಮಜಾನಿನ ಹಾಗೆ ಪ್ರಚಾರ ಮಾಡಬಾರದು ಎಂದು ಮಲಬಾರ್ ಗೋಲ್ಡ್ ಕಂಪನಿ ಗಮನದಲ್ಲಿಟ್ಟುಕೊಳ್ಳಬೇಕು! – ಶ್ರೀ ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದು ಜನಜಾಗೃತಿ ಸಮಿತಿ

೨. ಮಲಬಾರ್ ಗೋಲ್ಡ್ ಈ ಜಾಹೀರಾತು ಹಿಂದೂಗಳ ಹಬ್ಬವನ್ನು ಅವಮಾನಿಸಿದೆ. ಕುಂಕುಮ ಹಚ್ಚುವುದು ಇದು ಪಾರಂಪಾರಿಕ ಹಿಂದೂ ವೇಷಭೂಷಣದಲ್ಲಿ ಮಹತ್ವಪೂರ್ಣ ಭಾಗವಾಗಿದೆ. ಹಿಂದೂಗಳ ಪರಂಪರೆಯನ್ನು ವಿಡಂಬನೆ ಮಾಡುವವರ ಮೇಲೆ ಹಿಂದೂಗಳು ಅವರ ಹಣ ವ್ಯಯಿಸಬೇಕೇ ? ಇದು ಎಂದಿಗೂ ಸಾಧ್ಯವಾಗುವುದಿಲ್ಲ ! – ಹಿಂದುತ್ವನಿಷ್ಠ ಅಪರ್ಣಾ ನಾಯಿಕ

೩. ಹಿಂದೂಗಳ ಪರಂಪರೆಯನ್ನು ಗೌರವಿಸುವವರ ಜೊತೆಗೆ ನಾವು ವ್ಯವಹಾರ ಮಾಡಲು ನಿಶ್ಚಯಿಸೋಣ ! – ಹಿಂದೂ ಜನಜಾಗೃತಿ ಸಮಿತಿಯ ಅಧಿಕೃತ ಟ್ವಿಟರ್ ಖಾತೆ

೪. ಹಿಂದೂಗಳಿಗೆ ಕುಂಕುಮ ಒಂದು ಕೆಂಪು ಚುಕ್ಕೆಗೂ ಹೆಚ್ಚು ಮಹತ್ವದ್ದಾಗಿದೆ. ಹಾಗಾದರೆ ಮಲಬಾರ್ ಗೋಲ್ಡ್ ಇಂತಹ ಕಂಪನಿಗಳು ಇದು ಅರ್ಥ ಮಾಡಿಕೊಳ್ಳುವುದಿಲ್ಲ ಅಥವಾ ಬೇಕು ಅಂತಲೆ ಅದರ ಕಡೆಗೆ ದುರ್ಲಕ್ಷ ಮಾಡುತ್ತಿವೆ, ಹಾಗಾದರೆ ಹಿಂದೂಗಳು ಅವರಿಗೆ ಪಾಠ ಕಲಿಸಲು ಇದೆ ಯೋಗ್ಯವಾದ ಸಮಯವಾಗಿದೆ ! – ಸನಾತನ ಪ್ರಭಾತ ಕನ್ನಡ ದ ಅಧಿಕೃತ ಟ್ವಿಟರ್ ಖಾತೆ