‘ವಿಂಬಲ್ಡನ್’ನಲ್ಲಿ ರಷ್ಯಾದ ಆಟಗಾರರನ್ನು ನಿಷೇಧಿಸುವುದು ಸ್ವೀಕಾರಾರ್ಹವಲ್ಲ ! – ರಷ್ಯಾ

ಜಾಗತಿಕ ಸಂಖ್ಯೆಗಳಲ್ಲಿ ಮೊದಲ ೧೦ ರಲ್ಲಿ ೨ ಪುರುಷ ಆಟಗಾರರು ಹಾಗೂ ಮೊದಲಿನ ೨೦ ರಲ್ಲಿಯ ೩ ಮಹಿಳಾ ಆಟಗಾರರು ಹೊರ ಬರಲಿದ್ದಾರೆ !

ಮಾಸ್ಕೋ (ರಷ್ಯಾ) – ವಿಶ್ವದ ಪ್ರತಿಷ್ಠಿತವೆಂದೇ ಖ್ಯಾತವಾಗಿರುವ ಟೆನಿಸ ಪಂದ್ಯಾವಳಿಯ ‘ವಿಂಬಲ್ಡನ’ನಿಂದ ರಷ್ಯಾದ ಆಟಗಾರರಿಗೆ ನಿಷೇಧ ಹೇರುವ ಸಾಧ್ಯತೆ ಇದೆ. ಇಂಗ್ಲೇಂಡನ ‘ದ ಗಾರ್ಡಿಯನ’ ನೀಡಿದ ವಾರ್ತೆಯನುಸಾರ ಆದರೆ ‘ವಿಂಬಲ್ಡನ’ವು ರಷ್ಯಾದ ಮೇಲೆ ನಿಷೇಧಿಸಲ್ಪಟ್ಟ ಮೊದಲನೆ ಪಂದ್ಯಾವಳಿಯಾಗುವುದು. ರಷ್ಯಾ ಸಂಭವಿಸಬಹದಾದ ನಿರ್ಧಾರವನ್ನು ‘ಸ್ವಿಕಾರಾರ್ಹವಲ್ಲ’ ಎಂದು ಹೇಳಿದೆ. ಉಕ್ರೇನ ಮೇಲಿನ ಆಕ್ರಮಣವು ರಷ್ಯಾದ ಮೇಲೆ ಹಲವಾರು ಜಾಗತಿಕ ನಿರ್ಬಂಧಗಳನ್ನು ಹೇರಲು ಕಾರಣವಾಗಿದೆ. ಈ ಹಿನ್ನ್ಲೆಯಲ್ಲಿ ಟೆನಿಸ ಮೇಲೆ ಪ್ರಭಾವ ಬೀರಿದರೆ ರಷ್ಯಾ ಅದನ್ನು ಒಪ್ಪಿಕೊಳ್ಳುವದಿಲ್ಲ ಎಂದು ಕ್ರೆಮಲಿನ ವಕ್ತಾರ ದಮಿತ್ರೊ ಪೆಸ್ಕೋವ ಇವರು ಸ್ಪಷ್ಟಪಡಿಸಿದ್ದಾರೆ. ‘ಕ್ರೀಡಾಪಟುಗಳಿಗೆ ಪೂರ್ವಾಗ್ರಹ ಮತ್ತು ರಾಜಕಿಯ ಸಂಘರ್ಷದಲ್ಲಿ ಸಿಲುಕಿಸಿದರೆ ‘ರಾಜಕೀಯ ಒತ್ತೆಯಾಳು’ ಎಂದು ನಿರ್ಧರಿಸಬಾರದು’, ಎಂದೂ ಕೂಡ ಹೇಳಿದರು.
‘ವಿಂಬಲ್ಡನ್’ವು ರಷ್ಯಾದ ಆಟಗಾರರನ್ನು ನಿಷೇಧಿಸಿದರೆ ವಿಶ್ವದ ಮೊದಲ ೧೦ ಸ್ಥಾನದಲ್ಲಿರುವ ಇಬ್ಬರು ರಷ್ಯಾದ ಪುರುಷರು ಮತ್ತು ಅಗ್ರ ೨೦ ರೊಳಗಿನ ಮೂವರು ಮಹಿಳಾ ಆಟಗಾರರು ಹೊರ ಹಾಕಲ್ಪಡುತ್ತಾರೆ. ಅವರಲ್ಲಿ ವಿಶ್ವದ ಎರಡನೇ ಕ್ರಮಾಂಕದ ಆಟಗಾರರಾಗಿರುವ ಡೇನಿಯಲ ಮೆದವೆದ ಮತ್ತು ೮ನೇ ಕ್ರಮಾಂಕದಲ್ಲಿರುವ ಆಂದ್ರೆ ರೂಬಲೇವ ಸೇರಿದ್ದಾರೆ.