ಆಧ್ಯಾತ್ಮಿಕ ತೊಂದರೆಗಳನ್ನು ನಿವಾರಿಸಲು ಉಪಯುಕ್ತವಾಗಿರುವ ನಾಮಜಪಗಳ ಧ್ವನಿಮುದ್ರಣವು ಖ್ಯಾತ ಗಾಯಕ ಪೂ. ಕಿರಣ ಫಾಟಕ್ ಇವರ ಶುಭಹಸ್ತದಿಂದ ಲೋಕಾರ್ಪಣೆ !

ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ, ‘ಶೂನ್ಯ’, ‘ಮಹಾಶೂನ್ಯ’ ಮತ್ತು ‘ನಿರ್ಗುಣ’ ನಾಮಜಪ ಸಿದ್ಧ !

‘ಸನಾತನ ಚೈತನ್ಯವಾಣಿ’ ಆಪ್ ಮೂಲಕ ನಾಮಜಪವನ್ನು ಲೋಕಾರ್ಪಣೆ ಮಾಡುತ್ತಿರುವಾಗ ಪೂ. ಕಿರಣ ಫಾಟಕ್

ರಾಮನಾಥಿ (ಗೋವಾ) – ಆಧ್ಯಾತ್ಮಿಕ ತೊಂದರೆಗಳನ್ನು ನಿವಾರಿಸಲು ಉಪಯುಕ್ತವಾಗಿರುವ ‘ಶೂನ್ಯ’, ‘ಮಹಾಶೂನ್ಯ’ ಮತ್ತು ‘ನಿರ್ಗುಣ’ ನಾಮಜಪಗಳ ಧ್ವನಿಮುದ್ರಣವನ್ನು ಡೊಂಬಿವಲಿ (ಠಾಣೆ ಜಿಲ್ಲೆ)ಯಲ್ಲಿನ ಶಾಸ್ತ್ರೀಯ ಸಂಗೀತದ ಖ್ಯಾತ ಗಾಯಕ ಪೂ. ಕಿರಣ ಫಾಟಕ ಇವರ ಶುಭಹಸ್ತದಿಂದ ಏಪ್ರಿಲ್ ೧೫ ರಂದು ಇಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶೇ. ೬೩ ಆಧ್ಯಾತ್ಮಿಕ ಮಟ್ಟದ ಸಂಗೀತ ಸಮನ್ವಯಕಿ ಸಂಗೀತ ವಿಶಾರದ ಕು. ತೇಜಲ ಪಾತ್ರಿಕರ್ ಇವರು ವಿಶ್ವವಿದ್ಯಾಲಯದ ಸಂಸ್ಥಾಪಕ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಈ ನಾಮಜಪಗಳನ್ನು ಧ್ವನಿಮುದ್ರಿಸಲಾಗಿದ್ದು ಅದು ಸನಾತನದ ಜಾಲತಾಣ ಮತ್ತು ‘ಸನಾತನ ಚೈತನ್ಯವಾಣಿ’ ಆಪ್‌ನಲ್ಲಿ ಕನ್ನಡ, ಮರಾಠಿ, ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ ಎಲ್ಲರಿಗಾಗಿ ಲಭ್ಯವಾಗುವಂತೆ ಮಾಡಲಾಗಿದೆ.

ಇಂದೇ ಡೌನಲೋಡ್ ಮಾಡಿರಿ ಸನಾತನ ಚೈತನ್ಯವಾಣಿ ’ಆಪ್‌ : http://Sanatan.org/Chaitanyavani

ನಾಮಜಪ ಲೋಕಾರ್ಪಣೆ ಕಾರ್ಯಕ್ರಮದ ಸದ್ಗುರು ಡಾ. ಮುಕುಲ ಗಾಡಗೀಳ ಮತ್ತು ಇತರ ಸಾಧಕರು ಮಾಡಿದ ಸೂಕ್ಷ್ಮ-ಪರೀಕ್ಷಣೆಗಳನ್ನು ಶೀಘ್ರದಲ್ಲೇ ಪ್ರಕಟಿಸುತ್ತೇವೆ.