ಕೇರಳದಲ್ಲಿ ಸಾಮ್ಯವಾದಿ ಸಂಘಟನೆಯ ಮುಸಲ್ಮಾನ ನೇತಾರನು ಕ್ರೈಸ್ತ ಯುವತಿಯೊಂದಿಗೆ ಮಾಡಿಕೊಂಡ ನಿಕಾಹಕ್ಕೆ ಮಾಕಪದ ಕ್ರೈಸ್ತ ನೇತಾರರಿಂದ ವಿರೋಧ !

ಮಾಕಪ ಪಕ್ಷದಿಂದ ಮಾತ್ರ ಸಮರ್ಥನೆ !

ಇದರಿಂದ ಮಾಕಪದ ‘ಲವ್‌ ಜಿಹಾದ’ಗೆ ಬೆಂಬಲವಿದೆ ಎಂಬುದು ಸ್ಪಷ್ಟವಾಗುತ್ತದೆ. ಇದು ಕೇರಳದಲ್ಲಿನ ಕ್ರೈಸ್ತರಿಗೆ, ಚರ್ಚಸಂಸ್ಥೆಗೆ ಒಪ್ಪಿಗೆ ಇದೆಯೇ ? ಎಂಬುದನ್ನು ಅವರು ಬಹಿರಂಗವಾಗಿ ಹೇಳಬೇಕಿದೆ !

ತಿರುವನಂತಪುರಮ್‌ (ಕೇರಳ) – ಕೇರಳದಲ್ಲಿನ ‘ಡೊಮೆಸ್ಟಿಕ್‌ ಯುಥ ಫೆಡರೇಶನ ಆಫ್ ಇಂಡಿಯಾ’ ಎಂಬ ಸಾಮ್ಯವಾದಿ ಸಂಘಟನೆಯ (ಡಿ. ವೈ. ಎಫ್‌. ಐ. ನ) ಮುಸಲ್ಮಾನ ನೇತಾರ ಎಮ್‌. ಎಸ್‌. ಶೀಜೀನನು ಜ್ಯೋತ್ಸನಾ ಎಂಬ ಕ್ರೈಸ್ತ ಯುವತಿಯೊಂದಿಗೆ ವಿವಾಹವಾಗಿದ್ದರಿಂದ ಕೊಂಡೆಚೆರಿ ಜಿಲ್ಲೆಯಲ್ಲಿನ ಸಾಮಾಜಿಕ ಸ್ಥಿರತೆಗೆ ಧಕ್ಕೆ ಉಂಟಾಗಿದೆ, ಎಂದು ಮಾರ್ಕ್ಸವಾದಿ ಕಮ್ಯುನಿಸ್ಟ ಪಕ್ಷದ (ಮಾಕಪದ) ನೇತಾರ ಜಾರ್ಜ ಎಮ್‌ ಥಾಮಸ್‌ರವರು ಟೀಕಿಸಿದ್ದಾರೆ. ಈ ಬಗ್ಗೆ ಈಗ ಮಾಕಪವು ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿದೆ. ಮಾಕಪದ ಕೊಝಿಕೊಡೆ ಜಿಲ್ಲೆಯ ಸಚಿವರಾದ ಪಿ. ಮೋಹನಲಾಲರವರು ‘ಲವ್‌ ಜಿಹಾದ್‌’ ಎಂದು ಏನೂ ಇರುವುದಿಲ್ಲ. ಇದು ಸಂಘಪರಿವಾರದ ಧೋರಣೆಗಳ ಒಂದು ಭಾಗವಾಗಿದೆ. ಈ ಮೂಲಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತದೆ. ಜಾರ್ಜ ಎಮ್‌. ಥಾಮಸ್‌ರವರು ತಿಳಿದೇ ಈ ಹೇಳಿಕೆಯನ್ನು ನೀಡಿದ್ದಾರೆ. ಅವರಿಗೆ ಅವರ ತಪ್ಪು ತಿಳಿದಿದೆ, ಎಂದು ಹೇಳಿದರು.

೧. ಜ್ಯೋತ್ಸನಾ ಮತ್ತು ಶೀಜೀನರ ವಿವಾಹವು ಮಾರ್ಚ ೯ರಂದು ನಡೆದಾಗ ಸ್ಥಳೀಯ ಕ್ರೈಸ್ತರು ಆಂದೋಲನ ಮಾಡಿದರು. ಇದರಿಂದಲೇ ಈ ಇಬ್ಬರು ಭೂಗತರಾದಂತೆ ಅಡಗಿದ್ದರು. ಸ್ಥಳೀಯರು ಪೊಲೀಸ ಠಾಣೆಯಲ್ಲಿ ದೂರನ್ನು ನೋಂದಾಯಿಸಿ ಜ್ಯೋತ್ಸನಾರನ್ನು ಹುಡುಕಲು ಮನವಿ ಮಾಡಿದ್ದರು. ಹುಡುಗಿಯ ಪಾಲಕರೂ ಬೇರೆ ದೂರು ನೀಡಿದ್ದರು.

೨. ಥಾಮಸರವರು ಈ ವಿವಾಹದ ಬಗ್ಗೆ ಮಾತನಾಡುತ್ತ, ‘ಈ ತರುಣಿಯ ಪಾಲಕರೊಂದಿಗೆ ಪಕ್ಷದ ಸಂವೇದನೆಯು ಶಾಶ್ವತವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಶೀಜೀನನು ತಪ್ಪು ಭೂಮಿಕೆಯನ್ನು ಹೊಂದಿದ್ದಾನೆ. ಶೀಜೀನನರು ವಿವಾಹದ ಬಗ್ಗೆ ಮೊದಲೇ ತಿಳಿಸಿದ್ದರೆ ಪಕ್ಷವು ಮೊದಲೇ ಬೆಂಬಲ ನೀಡಿರುತ್ತಿತ್ತು. ಈ ರೀತಿಯಲ್ಲಿ ಓಡಿ ಹೋಗಬೇಕಾಗಿರಲಿಲ್ಲ. ಇದರಿಂದ ಈ ಪ್ರದೇಶದಲ್ಲಿನ ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ನೋವಾಗಿದೆ’ಎ ಂದು ಹೇಳಿದರು.

೩. ಡಿ. ವೈ. ಎಫ್‌. ಐಯು ಥಾಮಸ್‌ರವರ ಹೇಳಿಕೆಯ ವಿರುದ್ಧ ಭೂಮಿಕೆಯನ್ನು ತಾಳುತ್ತ ಒಂದು ಪತ್ರಕವನ್ನು ಜ್ಯಾರಿಗೊಳಿಸಿದೆ. ಇದರಲ್ಲಿ ನೇತಾರನ ವಿವಾಹದ ಬಗ್ಗೆ ನಡೆದಿರುವ ವಾದವು ದುರದೃಷ್ಟಕರವಾಗಿದೆ ಮತ್ತು ಆವಶ್ಯಕತೆ ಇಲ್ಲದಿರುವಾಗಲೂ ನಿರ್ಮಾಣ ಮಾಡಲಾಗಿದೆ. ಈ ಮದುವೆಯು ಈ ಇಬ್ಬರ ಖಾಸಗೀ ನಿರ್ಣಯವಾಗಿದೆ. ಈ ಇಬ್ಬರಿಗೂ ನಮ್ಮ ಪಕ್ಷದ ಬೆಂಬಲವಿದೆ, ಎಂದು ಹೇಳಲಾಗಿದೆ.