ಏಳನೀರು, ಕಿತ್ತಳೆಯ ರಸ, ಭಾರತೀಯ ಗೋವಿನ ಹಾಲು ಇವುಗಳು ವ್ಯಕ್ತಿಯಲ್ಲಿ ಸಕಾರಾತ್ಮಕತೆ ಹೆಚ್ಚಿಸುತ್ತದೆ ಹಾಗೂ ‘ವೈನ್’, ‘ವಿಸ್ಕೀ’, ‘ಬಿಯರ್’ ನಕಾರಾತ್ಮಕತೆ ಹೆಚ್ಚಿಸುತ್ತದೆ !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಲಂಡನ್‌ನ ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಪಾನೀಯಗಳ ಕುರಿತಾದ ಸಂಶೋಧನೆ ಮಂಡನೆ !

ಶ್ರೀ. ಶಾನ್ ಕ್ಲಾರ್ಕ್

‘ಆಹಾರ ಪದಾರ್ಥ ಹಾಗೂ ಪಾನೀಯಗಳ ಗುಣಧರ್ಮಗಳಿಗನುಸಾರ ಸಕಾರಾತ್ಮಕ ಅಥವಾ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ಅದಕ್ಕನುಸಾರ ಅದರ ಸೇವನೆಯಿಂದ ನಮ್ಮ ಆಧ್ಯಾತ್ಮಿಕ ಸ್ಥಿತಿಯ ಹಾಗೂ ಪ್ರಭಾವಳಿಯ ಮೇಲೆ ಪರಿಣಾಮವಾಗುತ್ತದೆ. ಏಳನೀರು, ಕಿತ್ತಳೆಯ ರಸ ಅಥವಾ ಭಾರತೀಯ ಗೋವಿನ ಹಾಲಿನಂತಹ ಸಾತ್ತ್ವಿಕ ಪಾನೀಯಗಳ ಸೇವನೆಯಿಂದ ವ್ಯಕ್ತಿಗೆ ಈ ಪಾನೀಯಗಳ ಮಾಧ್ಯಮದಿಂದ ಸಕಾರಾತ್ಮಕತೆ ಸಿಗುತ್ತದೆ ಮತ್ತು ಅದು ವ್ಯಕ್ತಿಯ ಹಾಗೂ ಆತನ ಅಕ್ಕಪಕ್ಕದ ಸಮಾಜಕ್ಕೂ ಶಾರೀರಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ; ಅದೇ ‘ವೈನ್’, ‘ವಿಸ್ಕಿ’, ‘ಬಿಯರ್’ ಅದೇ ರೀತಿ ‘ಬ್ರಾಂಡೆಡ್’ (ಪ್ರಸಿದ್ಧ ಕಂಪನಿಯ ಉತ್ಪಾದನೆ) ಬಾಟಲಿಬಂದ್ ನೀರಿನಿಂದ ವ್ಯಕ್ತಿಯಲ್ಲಿನ ಸಕಾರಾತ್ಮಕ ಶಕ್ತಿಯು ನಾಶವಾಗಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ಸಂಶೋಧನೆಯಲ್ಲಿ ಕಂಡುಬಂದಿದೆ ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಇವರು ‘ಫುಡ್ ಎಂಡ್ ಬೆವರೆಜಸ್’ನ 31 ನೇ ವಿಶ್ವ ಮಟ್ಟದ ಪರಿಷತ್ತಿನಲ್ಲಿ ಮಾತನಾಡುತ್ತಾ ಹೇಳಿದರು. ಯು.ಕೆ.ಯ ಲಂಡನ್.ನಲ್ಲಿನ ‘ಕಾನ್ಫರೆನ್ಸ್ ಸಿರಿಸ್ ಎಲ್.ಎಲ್.ಸಿ. ಲಿಮಿಟೆಡ್ ಕಾನ್ಫರೆನ್ಸ್’ (Conference Series LLC LTD Conferences) ಯು ಈ ಪರಿಷತ್ತನ್ನು ಆಯೋಜಿಸಿತ್ತು. ಶ್ರೀ. ಕ್ಲಾರ್ಕ್ ಇವರು ‘ಮದ್ಯಪಾನದಿಂದ ವ್ಯಕ್ತಿಯ ಮೇಲೆ ಆಧ್ಯಾತ್ಮಿಕ ಸ್ತರದಲ್ಲಾಗುವ ಪರಿಣಾಮ’ ಈ ಶೋಧ ಪ್ರಬಂಧವನ್ನು ಮಂಡಿಸಿದರು. ಈ ಶೋಧಪ್ರಬಂಧದ ಲೇಖಕರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರಾಗಿದ್ದೂ ಶ್ರೀ. ಶಾನ್ ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ವೈಜ್ಞಾನಿಕ ಪರಿಷತ್ತಿನಲ್ಲಿ ಇದು 88 ನೇ ಪ್ರಸ್ತುತಿಕರಣವಾಗಿತ್ತು.

ಶ್ರೀ. ಕ್ಲಾರ್ಕ್ ಅವರು ತಮ್ಮ ವಿಷಯವನ್ನು ಮಂಡಿಸುತ್ತಾ ಪಾನೀಯದ ಕುರಿತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ನಡೆಸಿದ ಸಂಶೋಧನೆಯನ್ನು ವಿಸ್ತಾರವಾಗಿ ಮಂಡಿಸಿದರು. ವಿಶ್ವವಿದ್ಯಾನಿಲಯವು ನಡೆಸಿದ ಒಂದು ಪ್ರಯೋಗದಲ್ಲಿ 8 ಪಾನೀಯಗಳು ಮತ್ತು ವ್ಯಕ್ತಿಗಳ ಪ್ರಭಾವಳಿಗಳ ಮೇಲಾಗುವ ಸೂಕ್ಷ್ಮ ಪರಿಣಾಮಗಳನ್ನು ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಎಂಬ ಶಕ್ತಿ ಮಾಪನ ಉಪಕರಣದಿಂದ ಅಧ್ಯಯನ ಮಾಡಲಾಯಿತು. ಇದರಿಂದ, ಈ ಪ್ರಯೋಗದಲ್ಲಿ ಬಳಸಲಾದ ಎಲ್ಲಾ ಮದ್ಯಗಳಲ್ಲಿ ಶೇ. 11.5 ರಷ್ಟು ‘ಅಲ್ಕೋಹಾಲ್’ ಇದ್ದರೂ, ‘ರೆಡ ವೈನ್’ನ ಪ್ರಭಾವಳಿ ಅತ್ಯಧಿಕ ನಕಾರಾತ್ಮಕವಾಗಿತ್ತು, ಅದರ ನಂತರ ಕ್ರಮವಾಗಿ ‘ವಿಸ್ಕಿ’ ಮತ್ತು ‘ಬಿಯರ್’ ಇತ್ತು ಎಂದು ಕಂಡುಬಂದಿದೆ. ಖ್ಯಾತ ಕಂಪನಿಗಳ ಬಾಟಲಿಬಂದ್ ನೀರಿನಲ್ಲೂ ನಕಾರಾತ್ಮಕ ಸ್ಪಂದನಗಳು ಇದ್ದವು. ಎಳನೀರು, ತಾಜಾ ಕಿತ್ತಳೆ ರಸ, ಭಾರತೀಯ ಗೋವಿನ ಹಾಲು ಮತ್ತು ಗೋವಾದ ಆಧ್ಯಾತ್ಮಿಕ ಸಂಶೋಧನಾ ಕೇಂದ್ರದ ನೀರು ಇವುಗಳಲ್ಲಿ ಯಾವುದೇ ನಕಾರಾತ್ಮಕ ಪ್ರಭಾವಳಿಗಳು ಇರಲೇ ಇರಲಿಲ್ಲ, ಬದಲಾಗಿ ಸಕಾರಾತ್ಮಕ ಪ್ರಭಾವಳಿ ಮಾತ್ರ ಇತ್ತು.
ಮತ್ತೊಂದು ಪ್ರಯೋಗದಲ್ಲಿ, ಒಬ್ಬ ಪುರುಷ ಮತ್ತು ಮಹಿಳೆಯನ್ನು 8 ವಿಭಿನ್ನ ದಿನಗಳಲ್ಲಿ 8 ವಿಭಿನ್ನ ಪಾನೀಯಗಳನ್ನು ಸೇವಿಸುವಂತೆ ಹೇಳಲಾಯಿತು. ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಈ ಉಪಕರಣದಿಂದ ಅವರಿಬ್ಬರು ಪ್ರತಿದಿನ ಪಾನೀಯಗಳನ್ನು ಸೇವಿಸುವ ಮೊದಲು ಮತ್ತು ನಂತರ 5 ನಿಮಿಷಗಳು ಮತ್ತು 30 ನಿಮಿಷಗಳ ನಂತರ ನಡೆಸಿದ ನಿರೀಕ್ಷಣೆಗಳಲ್ಲಿ ಇಬ್ಬರ ಸಕಾರಾತ್ಮಕ ಪ್ರಭಾವಳಿಯ ಮೇಲೆ ಭಾರತೀಯ ಗೋವಿನ ಹಾಲಿನಲ್ಲಿ ಎಲ್ಲಕ್ಕಿಂತ ಹೆಚ್ಚು ಪರಿಣಾಮವಾಯಿತು, ಅದು ಶೇ. 500 ರಿಂದ 600 ರಷ್ಟು ಹೆಚ್ಚಾಗಿ ಇಬ್ಬರ ನಕಾರಾತ್ಮಕ ಪ್ರಭಾವಳಿಯು ಶೇ. 91 ರಷ್ಟು ಕಡಿಮೆ ಆಯಿತು. ಕಿತ್ತಳೆ ರಸದಿಂದ ಸಕಾರಾತ್ಮಕ ಪ್ರಭಾವಳಿಯು ಶೇ. 358 ರಷ್ಟು ಹೆಚ್ಚಾಯಿತು ಮತ್ತು ನಕಾರಾತ್ಮಕ ಪ್ರಭಾವಳಿ ಶೇ. 85 ರಷ್ಟು ಕಡಿಮೆಯಾಯಿತು. ‘ವಿಸ್ಕಿ’, ‘ಬಿಯರ್’ ಮತ್ತು ‘ವೈನ್’ನ ನಕಾರಾತ್ಮಕ ಪರಿಣಾಮಗಳನ್ನುಂಟು ಮಾಡುವ ಪಾನೀಯಗಳು 5 ನಿಮಿಷಗಳಲ್ಲಿ ಎರಡೂ ವ್ಯಕ್ತಿಗಳಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವಳಿಯನ್ನು ಸಂಪೂರ್ಣವಾಗಿ ನಾಶ ಮಾಡಿತು. ‘ಬಿಯರ್’ನಲ್ಲಿ ಅತಿಹೆಚ್ಚು ನಕಾರಾತ್ಮಕತೆ ಕಂಡುಬಂದಿದೆ. ಅದನ್ನು ಸೇವಿಸಿದ ನಂತರ, ಒಬ್ಬ ವ್ಯಕ್ತಿಯಲ್ಲಿ ನಕಾರಾತ್ಮಕತೆಯು ಸುಮಾರು ಶೇ. 5000 ರಷ್ಟು ಹೆಚ್ಚಾಯಿತು. ಇದರ ನಂತರ ಕ್ರಮವಾಗಿ ‘ಕೆಂಪು ವೈನ್’ನಲ್ಲಿ ನಕಾರಾತ್ಮಕ ಪ್ರಭಾವಳಿ ಕಂಡಿತು. ಪ್ರಯೋಗದಲ್ಲಿ ಮಹಿಳೆಯರು ಇದನ್ನು ಸೇವಿಸುವುದರಿಂದ ನಕಾರಾತ್ಮಕ ಪ್ರಭಾವಳಿಗಳು ಅರ್ಧ ಗಂಟೆಯಲ್ಲಿ ಶೇ. 3691 ರಷ್ಟು ಮತ್ತು ಪುರುಷರಲ್ಲಿ ಶೇ. 1296 ರಷ್ಟು ಹೆಚ್ಚಾಗಿದೆ. ‘ಕೋಲಾ’ ಪೇಯದಿಂದಲೂ ಇಬ್ಬರ ಮೇಲೂ ನಕಾರಾತ್ಮಕ ಪರಿಣಾಮ ಬೀರಿತು.

‘ಜಿ.ಡಿ.ವಿ. ಬಯೋವೆಲ್’ ಉಪಕರಣವನ್ನು ಬಳಸಿಕೊಂಡು ನಡೆಸಿದ ಅಧ್ಯಯನದಲ್ಲಿ, ‘ವೈನ್’ ಸೇವಿಸಿದ ನಂತರ, ವ್ಯಕ್ತಿಯ ಕುಂಡಲಿನಿ ಚಕ್ರಗಳು ಮಧ್ಯರೇಖೆಯಿಂದ ತುಂಬಾ ದೂರ ಸರಿಯಿತು ಮತ್ತು ಅವರ ಶಕ್ತಿಯು ಕಡಿಮೆ ಆಯಿತು, ಎಂದು ಕಂಡುಬಂದಿದೆ. ಇದು ಪ್ರತಿಕೂಲ ಪರಿಣಾಮಗಳ ಸೂಚಕವಾಗಿದೆ.

ಅಂತೆಯೇ, ಪಾರ್ಟಿಯಲ್ಲಿ ಸೇವಿಸುವ ಪಾನೀಯಗಳ ಸೂಕ್ಷ್ಮ ಶಕ್ತಿಯ ಮಟ್ಟದ ಪರಿಣಾಮಗಳನ್ನು ಅಧ್ಯಯನ ಮಾಡಲು ಸಂಗೀತ, ಪಾಶ್ಚಾತ್ಯ ನೃತ್ಯ ಮತ್ತು ಸಸ್ಯಾಹಾರಿ ಆಹಾರವನ್ನು ಒಳಗೊಂಡ ಪಾರ್ಟಿಯನ್ನು ಆಯೋಜಿಸಲಾಯಿತು. ಅದರಲ್ಲಿ ಭಾಗವಹಿಸಿದ ಹತ್ತು ಜನರಲ್ಲಿ, ಕೆಲವರಿಗೆ ಒಂದೇ ರೀತಿಯ ‘ಅಲ್ಕೋಹಾಲ್’ನ ಪ್ರಮಾಣವನ್ನು ನೀಡಲಾಯಿತು ಮತ್ತು ಕೆಲವರಿಗೆ ‘ಅಲ್ಕೊಹಾಲ್ ಇಲ್ಲ’ದ ಪಾನೀಯಗಳನ್ನು ನೀಡಲಾಯಿತು. ಇದನ್ನು 2 ಗಂಟೆಗಳ ಒಳಗೆ ಸೇವಿಸಬೇಕಿತ್ತು. ಪ್ರಭಾವಳಿಯ ನಿರೀಕ್ಷಣೆಗಳಿಂದ, ಪಾರ್ಟಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರ ಪ್ರಭಾವಳಿಯ ಸಕಾರಾತ್ಮಕತೆಯು ಸಂಪೂರ್ಣವಾಗಿ ನಾಶವಾಗಿತ್ತು. ‘ಅಲ್ಕೊಹಾಲ್’ ಇಲ್ಲದ ಪಾನೀಯಗಳಲ್ಲಿನ ಸಕಾರಾತ್ಮಕತೆಯು ಸಂಗೀತ ಮತ್ತು ವಾತಾವರಣದಿಂದ ನಾಶವಾಯಿತು ಮತ್ತು ಇದು ಸೇವಿಸುವ ಜನರ ಮೇಲೆ ನಕಾರಾತ್ಮಕ ಪ್ರಭಾವಳಿಯನ್ನು ಉಂಟುಮಾಡಿತು.