ಪೇಟಾದಂತಹ ವಿದ್ವೇಷಿ ಪ್ರವೃತ್ತಿಯಿಂದ ಹಿಂದೂ ಸಮಾಜವನ್ನು ರಕ್ಷಿಸುವುದಕ್ಕಾಗಿ ಜಾಗೃತಿಯು ಅವಶ್ಯಕವಾಗಿದೆ – ನರೇಂದ್ರ ಸುರ್ವೆ, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ನರೇಂದ್ರ ಸುರ್ವೆ

ಪ್ರತಿವರ್ಷ ಅಮೇರಿಕದಲ್ಲಿ ಮೂರುವರೆ ಕೋಟಿ ದನ-ಎಮ್ಮೆಗಳನ್ನು, ೧೨ ಕೋಟಿ ಹಂದಿಗಳನ್ನು, ೭೦ ಲಕ್ಷ ತೋಳಗಳನ್ನು, ೩ ಕೋಟಿ ಬಾತುಕೋಳಿಗಳನ್ನು ಸಾಯಿಸಲಾಗುತ್ತದೆ. ಹಾಗಾಗಿ ಪೇಟಾ ಇಂಡಿಯವು ಹಿಂದೂಗಳಿಗೆ ಪಶುಪ್ರೇಮವನ್ನು ಕಲಿಸುವ ಮೊದಲು ತಮ್ಮ ದೇಶದಲ್ಲಿ ಪಶುಪ್ರೇಮವನ್ನು ತೋರಿಸಲಿ. ಭಾರತದಲ್ಲಿಯ ಡೈರಿ ಇಂಡಸ್ಟ್ರೀಯ ವಹಿವಾಟು ೮ ಲಕ್ಷ ಕೋಟಿ ರೂಪಾಯಿಗಳಾಗಿದೆ. ಡೈರಿ ಇಂಡಸ್ಟ್ರೀ ಎಲ್ಲಾ ರಾಷ್ಟ್ರೀಯ ಉತ್ಪನ್ನಗಳಲ್ಲಿ (‘ಜಿಡಿಪಿ’ಯಲ್ಲಿ) ಶೇಕಡಾ ೪ ರಷ್ಟು ಯೋಗದಾನ ನೀಡುತ್ತದೆ. ಇದರಿಂದ ಪೇಟಾ ಭಾರತದಲ್ಲಿಯ ಎಷ್ಟು ದೊಡ್ಡ ಮಾರುಕಟ್ಟೆಯ ಮೇಲೆ ನಿಯಂತ್ರಣವನ್ನು ತರಲು ಪ್ರಯತ್ನಿಸುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ. ಪೇಟಾದಂತಹ ವಿದೇಶಿ ಪ್ರವೃತ್ತಿಯಿಂದ ಹಿಂದೂ ಸಮಾಜವನ್ನು ಉಳಿಸುವುದಕ್ಕಾಗಿ ವಿವಿಧ ಮಾಧ್ಯಮಗಳಿಂದ ಜಾಗೃತಿಯನ್ನು ಇದರ ಬಗ್ಗೆ ವ್ಯಾಪಕವಾಗಿ ಮೂಡಿಸುವುದು ಅತ್ಯಂತ ಆವಶ್ಯಕವಾಗಿದೆ.