ಅಮರೋಹಾ(ಉತ್ತರಪ್ರದೇಶ) ಇಲ್ಲಿಯ ಧಾರ್ಮಿಕ ಸ್ಥಳದಲ್ಲಿ ದುಷ್ಕರ್ಮಿಗಳಿಂದ ಧಾರ್ಮಿಕ ಪುಸ್ತಕ ದಹನ !

ಧಾರ್ಮಿಕ ಸ್ಥಳ ಕೂಡ ಅಗ್ನಿಗೆ ಆಹುತಿ

ಉತ್ತರಪ್ರದೇಶದಲ್ಲಿ ಧಾರ್ಮಿಕ ಬಿಗುವಿನ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನ

ಅಮರೋಹಾ (ಉತ್ತರಪ್ರದೇಶ) – ಅಮರೋಹಾ ಜಿಲ್ಲೆಯಲ್ಲಿನ ಕಾಕರ ಸರಾಯ ಗ್ರಾಮದಲ್ಲಿನ ಒಂದು ರುದ್ರ ಭೂಮಿಯಲ್ಲಿರುವ ಧಾರ್ಮಿಕ ಸ್ಥಳವನ್ನು ದುಷ್ಕರ್ಮಿಗಳು ಬೆಂಕಿ ಹಚ್ಚಿದರು. ಇದರಲ್ಲಿ ಕೆಲವು ಧಾರ್ಮಿಕ ಪುಸ್ತಕಗಳನ್ನು ಸುಡಲಾಯಿತು. ಈ ಘಟನೆಯ ಮಾಹಿತಿ ದೊರೆಯುತ್ತಲೇ ಯಾವುದೇ ಬಿಗುವಿನ ವಾತಾವರಣ ನಿರ್ಮಾಣವಾಗಬಾರದು ಎಂದು ಪೊಲೀಸರು ದೊಡ್ಡ ಪ್ರಮಾಣದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ರಾತ್ರಿಯ ಸಮಯದಲ್ಲಿ ಈ ಘಟನೆ ನಡೆದಿದೆ. ಬೆಳಿಗ್ಗೆ ಸ್ವಚ್ಛತೆಗಾಗಿ ಬರುವ ನಾಜಿಮರಿಗೆ ಅಲ್ಲಿ ಬಂದ ಮೇಲೆ ಅರಿವಿಗೆ ಬಂದಿದೆ. ಆದರ ನಂತರ ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಒಗ್ಗೂಡಿದರು ಮತ್ತು ಆಕ್ರೋಶ ವ್ಯಕ್ತಪಡಿಸಿದರು.