ಪಶುಹತ್ಯೆ ಮಾಡುವ ಮೊದಲು ಅವುಗಳ ಪ್ರಜ್ಞೆ ತಪ್ಪಿಸಿ ! – ಕರ್ನಾಟಕ ಸರಕಾರದ ಆದೇಶ

ಈ ಆದೇಶದಿಂದ ಹಲಾಲ ಮಾಂಸದ ಮೇಲೆ ಪರೋಕ್ಷ ನಿರ್ಬಂಧ !

* ಎಲ್ಲ ರಾಜ್ಯಗಳು, ವಿಶೇಷವಾಗಿ ಭಾಜಪ ಸರಕಾರವಿರುವ ರಾಜ್ಯಗಳು ಇಂತಹ ಆದೇಶ ನೀಡಬೇಕಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು 

ಬೆಂಗಳೂರು (ಕರ್ನಾಟಕ) – ಕರ್ನಾಟಕ ರಾಜ್ಯದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ವಿಭಾಗವು ‘ಪ್ರಾಣಿ ಹತ್ಯೆ ಮಾಡುವ ಮೊದಲು ಯಾವ ಪ್ರಕ್ರಿಯೆಯನ್ನು ಮಾಡಬೇಕು ?’ ಎಂಬ ಸಂದರ್ಭದಲ್ಲಿ ಎಲ್ಲ ಪಶುಹತ್ಯಾಗ್ರಹಗಳಿಗೆ ಆದೇಶ ನೀಡಿದೆ. ಈ ಆದೇಶದಲ್ಲಿ ‘ಯಾವುದೇ ಪ್ರಾಣಿಯ ಹತ್ಯೆ ಮಾಡುವಾಗ ಅದನ್ನು ಪ್ರಜ್ಞೆಯಲ್ಲಿರಬಾರದು. ಹತ್ಯೆಯ ಮೊದಲು ಪ್ರಾಣಿಯ ಪ್ರಜ್ಞೆ ತಪ್ಪಿಸುವುದು ಆವಶ್ಯಕವಾಗಿದೆ’. ಪ್ರಾಣಿಯ ಪ್ರಜ್ಞೆ ತಪ್ಪಿಸಲು ಅದರ ತಲೆಯ ಮೇಲೆ ಆಘಾತ ಮಾಡಲಾಗುತ್ತದೆ ಅಥವಾ ಗ್ಯಾಸ್‌ ಅಥವಾ ವಿದ್ಯುತ್‌ ಆಘಾತ ನೀಡಲಾಗುತ್ತದೆ. ಅನಂತರ ಅವುಗಳ ಹತ್ಯೆ ಮಾಡಲಾಗುತ್ತದೆ. ಸದ್ಯ ರಾಜ್ಯದಲ್ಲಿ ಹಲಾಲ ಮಾಂಸಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಆದೇಶಕ್ಕೆ ಮಹತ್ವ ಪ್ರಾಪ್ತಿಯಾಗಿದೆ. ಈಗ ರಮಝಾನ ಮಾಂಸವೂ ಆರಂಭವಾಗಿದೆ. ಮುಸಲ್ಮಾನರಲ್ಲಿ ಪ್ರಾಣಿಯ ಕುತ್ತಿಗೆಯ ನರವನ್ನು ಕತ್ತರಿಸಿ ರಕ್ತಸ್ರಾವವಾಗಿ ಅದರ ಹತ್ಯೆ ಮಾಡಲಾಗುತ್ತದೆ. ಇದರಲ್ಲಿ ಪ್ರಾಣಿಗೆ ಬಹಳ ನೋವಾಗುತ್ತದೆ. ಇಂತಹ ಹತ್ಯೆಗಳ ಮೇಲೆ ಈ ಆದೇಶದಿಂದಾಗಿ ನಿರ್ಬಂಧ ಬರಲಿದೆ.

ಈ ಆದೇಶದ ನಂತರ ಬೆಂಗಳೂರು ಮಹಾನಗರ ಪಾಲಿಕೆಯು ‘ಪ್ರಾಣಿಹತ್ಯಾಗ್ರಹ ಹಾಗೂ ಮಾಂಸ ಮಾರಾಟದ ಅಂಗಡಿಗಳಿಗೆ ಪರವಾನಿಗೆಯನ್ನು ನೀಡುವಾಗ ಅವರ ಬಳಿ ಪ್ರಾಣಿಗಳ ಪ್ರಜ್ಞೆ ತಪ್ಪಿಸಿ ಹತ್ಯೆ ಮಾಡುವ ಸೌಲಭ್ಯವಿದೆಯೇ ? ಎಂಬುದರ ತಪಾಸಣೆ ಮಾಡಲಾಗುವುದು, ಎಂದು ಹೇಳಿದೆ.

* ಕಾಂಗ್ರೆಸ್ಸಿನಿಂದ ಈ ಆದೇಶಕ್ಕೆ ವಿರೋಧ !

ಪಶುವಿಭಾಗದ ಆದೇಶದ ಬಗ್ಗೆ ಜನರಿಗೆ ಕರೆ ನೀಡುವಾಗ ಕಾಂಗ್ರೆಸ್ಸಿನ ಪ್ರದೇಶಾಧ್ಯಕ್ಷ ಡಿ.ಕೆ. ಶಿವಕುಮಾರರವರು ‘ನೀವು ಹೆದರಬೇಡಿ. ಏನಾದರೂ ಅಡಚಣೆ ಇದ್ದರೆ ನನ್ನನ್ನು ಸಂಪರ್ಕಿಸಿ. ನಾನು ನನ್ನ ಕಾರ್ಯಕರ್ತರನ್ನು ಕಳಿಸುತ್ತೇನೆ. ನನಗೆ ಇಂತಹ ಆದೇಶಗಳಿಂದ ಆಶ್ಚರ್ಯವಾಗಿದೆ. ಇಂದಿನ ವರೆಗೆ ಜನರು ಹೇಗೆ ಪ್ರಾಣಿ ಹತ್ಯೆ ಮಾಡುತ್ತಿದ್ದರೋ, ಅದೇ ರೀತಿಯಲ್ಲಿ ಮಾಡುತ್ತಿರಬೇಕು, ಎಂದು ಹೇಳಿದರು.