ಉತ್ತರ ಪ್ರದೇಶದ ಮದರಸಾಗಳಲ್ಲಿ ರಾಷ್ಟ್ರವಾದದ ಪಾಠಗಳನ್ನು ಕಲಿಸಲಾಗುವುದು ! – ಧರ್ಮಪಾಲ ಸಿಂಗ, ಅಲ್ಪಸಂಖ್ಯಾತರ ರಾಜ್ಯ ಸಚಿವ

ಪ್ರತಿಯೊಂದು ಪುರಸಭೆಯಲ್ಲಿ ಒಂದು ಗೋಶಾಲೆ ಇರಲಿದೆ !

ಬರೇಲಿ (ಉತ್ತರಪ್ರದೇಶ) – ಉತ್ತರ ಪ್ರದೇಶದ ಮದರಸಾಗಳಲ್ಲಿ ಶಿಕ್ಷಣದ ಅಭ್ಯಾಸಕ್ರಮವು ಹೊಸ ಶಿಕ್ಷಣ ನೀತಿಗನುಸಾರವಾಗಿ ಇರಲಿದೆ. ಇದರಲ್ಲಿ ರಾಷ್ಟ್ರವಾದದ ಸಂದರ್ಭದ ಪಾಠಗಳಿರುತ್ತವೆ. ಇದರಲ್ಲಿ ಭಯೊತ್ಪಾದನೆಯ ಯಾವುದೇ ಸಂಗತಿ ಇರುವದಿಲ್ಲ. ಹಾಗೆಯೇ ವೃತ್ತಿ ಶಿಕ್ಷಣವನ್ನೂ ನೀಡಲಾಗುವುದು, ಎಂದು ಅಲ್ಪಸಂಖ್ಯಾತರ ಖಾತೆ ರಾಜ್ಯ ಸಚಿವ ಧರ್ಮಪಾಲ ಸಿಂಗ ಇವರು ಮಾಹಿತಿ ನೀಡಿದರು. ಪಶುಸಂಗೋಪನೆ ಸಚಿವರೂ ಆಗಿರುವ ಸಿಂಗ ಇವರು, ರಾಜ್ಯದ ಪ್ರತಿಯೊಂದು ಪುರಸಭೆಯಲ್ಲಿ ಕನಿಷ್ಠ ಒಂದು ಗೋಶಾಲೆ ಇರಲಿದೆ. ಅಲ್ಲಿ ಗೋವುಗಳನ್ನು ನೋಡಿಕೊಳ್ಳಲಾಗುವುದು. ಎಂದು ಹೇಳಿದರು. ಈ ಗೋವುಗಳ ಹಾಲು ಮತ್ತು ಸಗಣಿಯನ್ನು ಮಾರಾಟ ಮಾಡಿ ಅದರಿಂದ ಗೋಶಾಲೆಗಳಿಗೆ ಖರ್ಚು ಮಾಡಲಾಗುವುದು, ಎಂದು ತಿಳಿಸಿದರು. ಇಲ್ಲಿನ ‘ಇಡಿಂಯನ್ ವೆಟನರಿ ರಿಸರ್ಚ್ ಇನ್ಸಿಟ್ಯೂಟ್’ನಲ್ಲಿ ಅವರು ಮಾತನಾಡುತ್ತಿದ್ದರು.

ಧರ್ಮಪಾಲ್ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ವಕ್ಫ ಬೋರ್ಡ ಭೂಮಿಯ ಮೇಲಿನ ಅತಿಕ್ರಮಣವನ್ನು ಬುಲ್ಡೋಜರಗಳ ಮೂಲಕ ತೆರವುಗೊಳಿಸಲಾಗುವುದು ಮತ್ತು ಅದನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಬಳಸಲಾಗುವುದು ಎಂದು.