ಶ್ರೀಲಂಕಾದಲ್ಲಿ ನಾಗರಿಕರಿಂದ ರಾಷ್ಟ್ರಪತಿ ಭವನದ ಮುಂದೆ ಹಿಂಸಾತ್ಮಕ ಆಂದೋಲನ

45 ಜನರ ಬಂಧನ

ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾದಲ್ಲಿ ನಿರ್ಮಾಣವಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಸಾಮಾನ್ಯ ಜನರ ಸ್ಥಿತಿ ಹದಗೆಡುತ್ತಿರುವುದರಿಂದ ಸ್ಥಳಿಯರು ಮಾರ್ಚ್ 31 ರ ರಾತ್ರಿ ರಾಷ್ಟ್ರಪತಿ ಗೋಟಬಾಯಾ ರಾಜಪಕ್ಷೆ ಇವರ ಮನೆಯ ಮುಂದೆ ಆಂದೋಲನ ನಡೆಸಿದರು. ಆಂದೋಲನಕಾರರು ತೀಕ್ಷ್ಣವಾಗಿ ಘೋಷಣೆಗಳನ್ನು ಕೂಗುತ್ತಾ ರಾಷ್ಟ್ರಪತಿಗಳು ತ್ಯಾಗ ಪತ್ರ ನೀಡಬೇಕೆಂದು’, ಒತ್ತಾಯಿಸಿದ್ದರು. ಪೊಲೀಸರು ಆಂದೋಲನ ನಡೆಸುವವರನ್ನು ಚದುರಿಸಲು ಪ್ರಯತ್ನಿಸಿದಾಗ ಹಿಂಸಾಚಾರ ನಡೆಯಿತು. ಆಂದೋಲನಕಾರರ ಪೊಲೀಸರ ಮೇಲೆ ಬಾಟಲಿಗಳು ಮತ್ತು ಕಲ್ಲು ತೂರಾಟ ನಡೆಸಿದರು. ಪೊಲೀಸರು ಅಶ್ರುವಾಯು ಜೊತೆಗೆ ನೀರಿನಿಂದ ಆಂದೋಲನಕಾರರನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಜನರು ಒಂದು ಬಸ್ಸಿಗೆ ಬೆಂಕಿ ಹಚ್ಚಿದರು. ರಾಷ್ಟ್ರಪತಿಯ ಮನೆಯ ಮುಂದೆ ಈ ಎಲ್ಲಾ ದಾಂಧಲೆ ನಡೆಯುವಾಗ ಅವರು ಮನೆಯಲ್ಲಿರಲಿಲ್ಲ. ಆ ಸಮಯದಲ್ಲಿ ಆಂದೋಲನಕಾರರನ್ನು ತಡೆಯಲು ವಿಶೇಷ ಕಾರ್ಯಪಡೆ ಮತ್ತು ಅರೆ ಸೇನಾ ಪಡೆಯ ಉಪಯೋಗ ಮಾಡಲಾಯಿತು. ಈ ಸ್ಥಳದಲ್ಲಿ ಪ್ರಸ್ತುತ ಸಂಚಾರ ನಿರ್ಬಂಧ ಜಾರಿಗೊಳಿಸಲಾಗಿದ್ದು 45 ಜನರನ್ನು ಬಂಧಿಸಲಾಗಿದೆ. ಶ್ರೀಲಂಕಾದಲ್ಲಿ ಅನೇಕ ವಾರಗಳಿಂದ ಆಹಾರ ಪದಾರ್ಥಗಳ ಜೊತೆಗೆ ಅಗತ್ಯ ವಸ್ತುಗಳ ಬೆಲೆ, ಇಂಧನ, ಗ್ಯಾಸ್ ಕೊರತೆ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ.

ಡಿಸೆಲ ಕೊರತೆಯಿಂದ 13 ಗಂಟೆಗಳಿಗಿಂತ ಹೆಚ್ಚು ಕಾಲ ಶ್ರೀಲಂಕಾದಲ್ಲಿ ವಿದ್ಯುತ್ ಸರಬರಾಜು ಸಂಪೂರ್ಣವಾಗಿ ನಿಂತಿತ್ತು. ವಿದ್ಯುತ್ ಉಳಿಸಲು ರಸ್ತೆಯಲ್ಲಿನ ದಾರಿದೀಪಗಳು ಆರಿಸಲಾಗಿತ್ತು. ವಿದ್ಯುತ್ ಸರಬರಾಜು ನಿಂತಿರುವ ಪರಿಣಾಮ ಸರಕಾರಿ ಆಸ್ಪತ್ರೆಗಳ ಮೇಲೆಯೂ ಆಗಿದೆ.