ಬುದ್ಧಿಜೀವಿಗಳು ಕೇವಲ ಹಿಂದೂಗಳಿಗೆ ಉಪದೇಶ ನೀಡುತ್ತಾರೆ ! – ಕರ್ನಾಟಕದ ಗೃಹ ಸಚಿವ

ಕರ್ನಾಟಕದಲ್ಲಿ ಹಿಜಾಬ್ ಮತ್ತು ಹಲಾಲ್ ವಾದವಿವಾದ !

ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು – ರಾಜ್ಯದಲ್ಲಿ ಹಿಜಾಬ್ ಮತ್ತು ಹಲಾಲ್ ವಿವಾದದ ಹಿನ್ನಲೆಯಲ್ಲಿ ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಇವರು, ಜಾತ್ಯಾತೀತದ ಬಗ್ಗೆ ಹಿಂದೂಗಳಿಗೆ ಮಾತ್ರ ಉಪದೇಶ ನೀಡುವ ಬುದ್ಧಿಜೀವಿಗಳು ಸಂವಿಧಾನಕ್ಕೆ ಗೌರವ ನೀಡದವರಿಗೆ ಶಿಕ್ಷಣ ನೀಡಿ ಹಿಜಾಬ್ ವಿಷಯವಾಗಿ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಗೌರವ ನೀಡಬೇಕು. ಆದರೂ ಕೂಡ ಬುದ್ಧಿಜೀವಿಗಳು ಕೇವಲ ಹಿಂದೂಗಳಿಗೆ ಉಪದೇಶ ನೀಡುತ್ತಾರೆ, ಎಂದು ಜ್ಞಾನೇಂದ್ರ ಅವರು ಪ್ರತಿಕ್ರಿಯೆ ನೀಡಿದರು. ಹಿಜಾಬ್ ನಿಷೇಧ ಕಾನೂನುರೀತ್ಯಾ ಸರಿ ಇರುವುದು ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಮತಾಂಧರ ಒಂದು ಗುಂಪಿನಿಂದ `ಕರ್ನಾಟಕ ಬಂದ’ಗೆ ಕರೆ ನೀಡಿದರು. ಈ ಹಿನ್ನಲೆಯಲ್ಲಿ ಜ್ಞಾನೇಂದ್ರ ಇವರು ಈ ಪ್ರತಿಕ್ರಿಯೆ ವ್ಯಕ್ತಪಡಿದರು.