‘ನಾಗಾಲ್ಯಾಂಡ್‌ನಲ್ಲಿ ಚರ್ಚನಿಂದಾಗಿ ನಾಗಾ ಸಮಾಜದ ‘ವಿಕಾಸ’ವಾಗಿರುವುದರಿಂದ ಆನಂದ !’ – ವ್ಯಾಟಿಕನ್‌

ರಾಜ್ಯದಲ್ಲಿ ಚರ್ಚನ ಕಾರ್ಯ ಹೆಚ್ಚುತ್ತಿರುವ ಹೇಳಿಕೆ !

* ಕ್ರೈಸ್ತ ಸಮಾಜವು ಬಡ ಮಕ್ಕಳಿಗೆ ಶೈಕ್ಷಣಿಕ ವಿದ್ಯಾರ್ಥಿವೇತನ ನೀಡಲು ಮಾಡಿರುವ ಕಾರ್ಯವನ್ನು ಹೊಗಳಲಾಯಿತು ! – ಸಂಪಾದಕರು 

* ಕ್ರೈಸ್ತರ ಪೂರ್ವ ಇತಿಹಾಸವನ್ನು ನೋಡುವಾಗ ಅವರ ತಥಾಕಥಿತ ಸಾಮಾಜಿಕ ಕಾರ್ಯದ ಹಿಂದೆ ‘ಹಿಂದೂಗಳ ಮತಾಂತರ ಮಾಡುವ’ ಉದ್ದೇಶವು ಅಡಗಿರುವುದು ಆಗಾಗ ಕಂಡು ಬಂದಿದೆ ! ಸ್ವತಃ ಪೋಪ್‌ ಫ್ರಾನ್ಸಿಸ್‌ರವರು ೨೦೧೫ರಲ್ಲಿ ಇಂತಹ ಆಶಯವಿರುವ ಟ್ವೀಟ್‌ನ್ನು ಪ್ರಸಾರ ಮಾಡಿದ್ದರು. ಆದುದರಿಂದ ಸರಕಾರವೂ ಕ್ರೈಸ್ತರ ಈ ಸಾಮಾಜಿಕ ಕಾರ್ಯದಿಂದ ಸಾಧಿಸಲಾದ ‘ವಿಕಾಸ’ದ ತನಿಖೆ ಮಾಡಿ ಸತ್ಯತೆಯನ್ನು ಜನತೆಯ ಎದುರು ಇಡಬೇಕು, ಎಂಬುದು ಅಪೇಕ್ಷೆಯಾಗಿದೆ ! – ಸಂಪಾದಕರು 

ಚ್ಚಬಿಷಪ್‌ ಲಿಯೊಪೊಲ್ಡೊ ಗಿರೆಲೀಯು

ಕೊಹಿಮಾ (ನಾಗಾಲ್ಯಾಂಡ್‌) – ‘ವ್ಯಾಟಿಕನ್‌ ಸಿಟಿ’ಯ ದೂತ ಮತ್ತು ಭಾರತ ಹಾಗೂ ನೇಪಾಳ ದೇಶಗಳ ಪೋಪ್‌ ಫ್ರಾನ್ಸಿಸ್‌ರವರ ರಾಜಕೀಯ ಪ್ರತಿನಿಧಿ ಆಚ್ಚಬಿಷಪ್‌ ಲಿಯೊಪೊಲ್ಡೊ ಗಿರೆಲೀಯು ನಾಗಾಲ್ಯಾಂಡಿನ ೪ ದಿನಗಳ ಪ್ರವಾಸದಲ್ಲಿದ್ದರು. ‘ಇಸ್ಟ ಮೊಜೊ’ಎಂಬ ಪೂರ್ವೋತ್ತರ ಭಾರತದಲ್ಲಿನ ಪ್ರಸಿದ್ಧ ವಾರ್ತಾಸಂಕೇತಸ್ಥಳವು ಪ್ರಸಾರಿಸಿದ ವಾರ್ತೆಗನುಸಾರ ಮಾರ್ಚ ೨೭ ರಂದು ಇಲ್ಲಿನ ಚರ್ಚಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಲ್ಲಿನ ಕ್ರೈಸ್ತ ಸಮಾಜವು ಬಡ ಮಕ್ಕಳಿಗೆ ಶೈಕ್ಷಣಿಕ ವಿದ್ಯಾರ್ಥಿವೇತನ ಪ್ರದಾನಿಸಲು ನಡೆಸಿದ ಕಾರ್ಯವನ್ನು ಪ್ರಶಂಶಿಸಿದೆ. ಈ ಸಮಯದಲ್ಲಿ ಗಿರೆಲೀಯವರು ‘ರಾಜ್ಯದಲ್ಲಿ ಚರ್ಚಿನ ಕಾರ್ಯವು ವೃದ್ಧಿಯಾಗುತ್ತಿದ್ದು ಈ ಮೂಲಕ ನಾಗಾ ಜನರ ‘ವಿಕಾಸ’ವಾಗುತ್ತಿರುವ ಬಗ್ಗೆ ‘ಆನಂದ’ ವ್ಯಕ್ತಪಡಿಸಿದರು.

ನಾಗಾಲ್ಯಾಂಡ್‌ನಲ್ಲಿ ಇಲ್ಲಿಯ ವರೆಗೆ ೬೨ ಸಾವಿರ ನಾಗಾ ಜನರು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದಾರೆ ! – ಬಿಶಪ್‌ ಡಾ. ಜೇಮ್ಸ್‌ ಥೋಪಿಲ

* ಪೂರ್ವೋತ್ತರ ಭಾರತದಲ್ಲಿನ ಸ್ಥಿತಿಯನ್ನು ನೋಡಿ ರಾಷ್ಟ್ರವ್ಯಾಪಿ ಮತಾಂತರ ವಿರೋಧಿ ಕಾನೂನು ರಚಿಸುವುದು ಎಷ್ಟು ಆವಶ್ಯಕವಾಗಿದೆ, ಎಂಬುದು ಗಮನಕ್ಕೆ ಬರುತ್ತದೆ ! ಇದಕ್ಕಾಗಿ ಕೇಂದ್ರ ಸರಕಾರವು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು 

ಬಿಶಪ್ ಡಾ. ಜೇಮ್ಸ್‌ ಥೋಪಿಲ

ಈ ಪ್ರಸಂಗದಲ್ಲಿ ಕೊಹಿಮಾದಲ್ಲಿನ ಬಿಶಪ್ ಡಾ. ಜೇಮ್ಸ್‌ ಥೋಪಿಲರವರು ಮಾತನಾಡುತ್ತ, ೭೦ ವರ್ಷಗಳ ಹಿಂದೆ ರಾಜ್ಯದಲ್ಲಿ ಒಬ್ಬ ಕ್ಯಾಥೂಲಿಕ ವ್ಯಕ್ತಿಯೂ ಇರಲಿಲ್ಲ. ಇಂದು ನಾಗಾ ಜಾತಿಯ ಜನರಲ್ಲಿ ೬೨ ಸಾವಿರ ಜನರು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದಾರೆ. ಇವರಲ್ಲಿ ೨೦೦ ನನ್‌ ಮತ್ತು ೬೦ ಪಾದ್ರಿಗಳಿದ್ದಾರೆ. ಶೈಕ್ಷಣಿಕ ಸಂಸ್ಥೆ ಮತ್ತು ಆಸ್ಪತ್ರೆಗಳಲ್ಲಿ ಚರ್ಚಿನ ಅತ್ಯಂತ ಹೆಚ್ಚಿನ ಪ್ರಭಾವ ಇರುವುದಾಗಿ ಅವರು ಹೇಳಿದ್ದಾರೆ. ‘ಕ್ಯಾಥೂಲಿಕ ಅಸೋಸಿಯೇಶನ್ ಆಫ್‌ ನಾಗಾಲ್ಯಾಂಡ್‌’ನ ಅಧ್ಯಕ್ಷ ಜಾನಿ ರುವಾಂಗಮೇಯಿಯವರು ಮಾತನಾಡುತ್ತ ‘ಕ್ಯಾಥೂಲಿಕ ಸಮುದಾಯವು ನಾಗಾಲ್ಯಾಂಡಿನಲ್ಲಿ ಇನ್ನೊಂದು ಎಲ್ಲಕ್ಕಿಂತಹ ದೊಡ್ಡ ಸಮುದಾಯವಾಗಿದೆ’ ಎಂದು ಹೇಳಿದರು.