ಇಸ್ರೇಲ್‍ನಲ್ಲಿ ಉಗ್ರರ ದಾಳಿಗೆ 5 ಜನರ ಸಾವು

ತೇಲ್ ಅವೀವ್ (ಇಸ್ರೇಲ್) – ತೆಲ್ ಅವೀವ್‍ನಲ್ಲಿ ಮಾರ್ಚ್ 29 ರ ಸಂಜೆ ಭಯೋತ್ಪಾದಕನು ನಡೆಸಿದ ಗುಂಡು ಹಾರಾಟದಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಒಬ್ಬ ಪೊಲೀಸ್‍ನು ಒಳಪಟ್ಟಿದ್ದಾನೆ. ಪೊಲೀಸರು ಭಯೋತ್ಪಾದಕನನ್ನು ಗುಂಡಿಕ್ಕಿ ಕೊಂದರು. ಈತನ ಹೆಸರು ಹಮರಶೆಹಾ (ವಯಸ್ಸು 26) ಇದ್ದು ಆತ ಪ್ಯಾಲೆಸ್ಟೈನ್‍ನ ನಾಗರಿಕನಿದ್ದಾನೆ. ಆತ ಇಸ್ರೇಲ್‍ನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದನು. ಭದ್ರತಾ ಪ್ರಕರಣಕ್ಕೆ ಸಂಬಂಧಿಸಿದಂತೆ 2013 ರಲ್ಲಿ ಅವನನ್ನು ಬಂಧಿಸಲಾಗಿತ್ತು. ಆಗ ಆತ 6 ತಿಂಗಳ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ. ತೆಲ್ ಅವೀವ್‍ನಲ್ಲಿನ ಈ ದಾಳಿಯು ಕಳೆದ ಏಳು ದಿನಗಳಲ್ಲಿ ಇಸ್ರೇಲ್‍ನಲ್ಲಿ ನಡೆದ ಮೂರನೇ ಭಯೋತ್ಪಾದಕ ದಾಳಿಯಾಗಿದೆ. ಇದುವರೆಗೆ ಹನ್ನೊಂದು ಜನರು ಸಾವನ್ನಪ್ಪಿದ್ದಾರೆ.