ಸೊಪೊರದಲ್ಲಿ ಬುರ್ಖಾಧಾರಿ ಮಹಿಳೆಯಿಂದ ಸಿ.ಆರ್.ಪಿಎಫ್.ನ ಬಂಕರ್ ಮೇಲೆ ಪೆಟ್ರೋಲ ಬಾಂಬ್ ಎಸೆತ !

(ಬಂಕರ್ ಎಂದರೆ ನೆಲಮಾಳಿಗೆ)

* ಭಯೋತ್ಪಾದಕರು ಬುರ್ಖಾ ಉಪಯೋಗಿಸುತ್ತಿರುವುದರಿಂದ ಕಾಶ್ಮೀರ ಒಳಗೊಂಡಂತೆ ಸಂಪೂರ್ಣ ದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬುರ್ಖಾ ಧರಿಸುವುದನ್ನು ನಿರ್ಬಂಧಿಸುವಂತೆ ಈಗ ಸಾರ್ವಜನಿಕರು ಮತ್ತು ರಕ್ಷಣಾ ಇಲಾಖೆಯವರು ಒತ್ತಾಯಿಸಬೇಕು !- ಸಂಪಾದಕರು 

ಶ್ರೀನಗರ (ಜಮ್ಮೂ-ಕಾಶ್ಮೀರ)– ಬುರ್ಖಾಧಾರಿ ಮಹಿಳೆಯೊಬ್ಬಳು ಸೊಪೊರದ ಕೇಂದ್ರೀಯ ಮೀಸಲು ಪಡೆಯ ಪೊಲೀಸ್ ದಳದ ಮೇಲೆ (ಸಿ.ಆರ್.ಪಿ.ಎಫ್.) ಬಂಕರ ಮೇಲೆ ಪೆಟ್ರೋಲ ಬಾಂಬ್ ಎಸೆದಿರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ವಿಷಯದಲ್ಲಿ ಕಾಶ್ಮೀರ ಪೊಲಿಸ ಮಹಾನಿರೀಕ್ಷಕರಾದ ವಿಜಯ ಕುಮಾರ ಇವರು, ಈ ಮಹಿಳೆಯನ್ನು ಗುರುತಿಸಲಾಗಿದ್ದು, ಅವಳನ್ನು ಆದಷ್ಟು ಬೇಗನೆ ಬಂಧಿಸುವುದಾಗಿ ತಿಳಿಸಿದ್ದಾರೆ.