ಮಹಾಶಿವರಾತ್ರಿ ಎಂದರೆ ಸಾಧನೆ ಮಾಡಿ ಶಿವಸ್ವರೂಪ ಗುರುದೇವರಲ್ಲಿಲೀನವಾಗುವುದು – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಮಹಾಶಿವರಾತ್ರಿ ನಿಮಿತ್ತ ಸನಾತನ ಸಂಸ್ಥೆ ಮಾಡಿದ ಕರ್ನಾಟಕ ರಾಜ್ಯದಲ್ಲಿ ಮಾಡಿದ ಧರ್ಮಪ್ರಸಾರ ಹಾಗೂ ಅದಕ್ಕೆ ಸಮಾಜದಿಂದ ದೊರಕಿದ ಅತ್ಯುತ್ತಮ ಸ್ಪಂದನ !

ಪೂ. ರಮಾನಂದ ಗೌಡ

ಬೆಂಗಳೂರು – ಮಹಾಶಿವರಾತ್ರಿಯ ನಿಮಿತ್ತ ರಾಜ್ಯದಾದ್ಯಂತ ಸನಾತನ ಸಂಸ್ಥೆಯ ವತಿಯಿಂದ ಧರ್ಮಪ್ರಸಾರ ಕಾರ್ಯದಲ್ಲಿ ಸಾಧಕರು, ಧರ್ಮಪ್ರೇಮಿಗಳು, ಯುವ ಸಾಧಕರು ಈ ಸೇವೆಯಲ್ಲಿ ಭಾಗವಹಿಸಿದರು. ಅದಕ್ಕಾಗಿ ಮಾಡಿದ ಪ್ರಯತ್ನ ಹಾಗೂ ಸಮಾಜದಿಂದ ದೊರೆತ ಸ್ಪಂದನದ ಸಂಕ್ಷಿಪ್ತ ಮಾಹಿತಿ ಮುಂದಿನಂತಿದೆ.

‘ಮಹಾಶಿವರಾತ್ರಿ ಅಂದರೆ ಸಾಧನೆ ಮಾಡಿ ಶಿವಸ್ವರೂಪ ಗುರುಗಳಲ್ಲಿ ಲೀನವಾಗುವುದು; ಅದಕ್ಕಾಗಿ ಮಾತೆ ಪಾರ್ವತಿಯಂತೆ ಕಠೋರ ಸಾಧನೆ ಮಾಡಬೇಕು’ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾಕರಾದ ಪೂ. ರಮಾನಂದ ಇವರು ಹೇಳಿದರು. ಮಹಾಶಿವರಾತ್ರಿಯ ಪರ್ವಕಾಲದಲ್ಲಿ ಎಲ್ಲಾ ಸಾಧಕರ ಸಾಧನೆ ಉತ್ತಮ ರೀತಿಯಲ್ಲಿ ಆಗಬೇಕು ಹಾಗೂ ಎಲ್ಲರಿಗೂ ಸೇವೆಯ ಲಾಭವಾಗಬೇಕೆಂದು ಸಾಧಕರು, ಧರ್ಮಪ್ರೇಮಿಗಳು, ಧರ್ಮಾಭಿಮಾನಿಗಳು, ಡಾಕ್ಟರ್, ವಕೀಲರಿಗೆ ಹಾಗೂ ಉದ್ಯಮಿಗಳಿಗೆ ‘ಆನ್‌ಲೈನ್ ಮಾರ್ಗದರ್ಶನ ಮಾಡಿದರು. ಈ ಮಾರ್ಗದರ್ಶನದಲ್ಲಿ ೧ ಸಾವಿರದ ೧೪೦ ಜನರು ಉಪಸ್ಥಿತರಿದ್ದರು.

ಮಹಾಶಿವರಾತ್ರಿಯ ನಿಮಿತ್ತ ರಾಜ್ಯದಾದ್ಯಂತ ಸನಾತನ ಸಂಸ್ಥೆಯ ವತಿಯಿಂದ ಧರ್ಮಪ್ರಸಾರ ಕಾರ್ಯದಲ್ಲಿ ಸಾಧಕರು, ಧರ್ಮಪ್ರೇಮಿಗಳು, ಯುವ ಸಾಧಕರು ಈ ಸೇವೆಯಲ್ಲಿ ಭಾಗವಹಿಸಿದರು. ಅದಕ್ಕಾಗಿ ಮಾಡಿದ ಪ್ರಯತ್ನ ಹಾಗೂ ಸಮಾಜದಿಂದ ದೊರೆತ ಸ್ಪಂದನದ ಸಂಕ್ಷಿಪ್ತ ಮಾಹಿತಿ ಮುಂದಿನಂತಿದೆ.

೧. ಮಹಾಶಿವರಾತ್ರಿ ನಿಮಿತ್ತ ಮಾಡಿದ ವಿನೂತನ ಪ್ರಸಾರ

ಅ. ರಾಜ್ಯದಲ್ಲಿ ೫೬ ಕಡೆಗಳಲ್ಲಿ ಶಿವನ ಸಾಮೂಹಿಕ ನಾಮಜಪ ಮಾಡಲಾಯಿತು. ಸುಮಾರು ೯೦೦ ಕ್ಕಿಂತಲೂ ಹೆಚ್ಚು ಜಿಜ್ಞಾಸುಗಳು ಇದರಲ್ಲಿ ಪಾಲ್ಗೊಂಡರು.

ಆ. ರಾಜ್ಯದ ವಿವಿಧೆಡೆ ೧೮ ದೇವಸ್ಥಾನಗಳ ಸ್ವಚ್ಚತೆ ಮಾಡಲಾಯಿತು.

ಇ. ಕೆಲವು ದೇವಸ್ಥಾನಗಳಲ್ಲಿ ಶಿವನ ನಾಮಜಪದ ಧ್ವನಿಮುದ್ರಿಕೆ (ಅಡಿಯೋ) ಹಾಕಿ ಭಕ್ತಿ ಪ್ರಸಾರ ಮಾಡಲಾಯಿತು. ಅದೇ ರೀತಿ ಅನೇಕ ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ನೀಡುವ ಫಲಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಈ. ಶಿವನ ಮಾಹಿತಿ ಹಾಗೂ ವೈಶಿಷ್ಟ್ಯಗಳನ್ನು ತಿಳಿಸಲು ರಾಜ್ಯದ ೨೨೪ ಕಡೆಗಳಲ್ಲಿ ಫಲಕಗಳಲ್ಲಿ ಮಾಹಿತಿ ಬರೆದು ಪ್ರಬೋಧನೆ ಮಾಡಲಾಯಿತು.

ಉ. ರಾಜ್ಯದ ೨೩ ಕ್ಕೂ ಹೆಚ್ಚು ದಿನಪತ್ರಿಕೆಗಳಿಗೆ ಶಿವನ ಮಾಹಿತಿ ನೀಡುವ ಲೇಖನಗಳು ಮುದ್ರಣವಾಯಿತು. ಎಫ್.ಎಮ್. ರೇಡಿಯೋ ಹಾಗೂ ದೂರದರ್ಶನ ವಾಹಿನಿಗಳ ಮೂಲಕ ಶಿವನ ಮಾಹಿತಿಯ ಪ್ರಸಾರ ಮಾಡಲಾಯಿತು.

ಊ. ಶಿವನ ಮಹತ್ವ ಹಾಗೂ ಶಿವನ ಪೂಜೆಯ ವೈಶಿಷ್ಟ್ಯಗಳನ್ನು ತಿಳಿಸುವ ಪೋಸ್ಟ್‌ಗಳನ್ನು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಯಿತು.

ಎ. ಭಗವಾನ ಶಿವನ ಅಧ್ಯಾತ್ಮಶಾಸ್ತ್ರೀಯ ಮಾಹಿತಿ ನೀಡಲು ರಾಜ್ಯದಾದ್ಯಂತ ೬೬ ಪ್ರವಚನಗಳನ್ನು ಆಯೋಜಿಸಲಾಯಿತು. ಸುಮಾರು ೧ ಸಾವಿರದ ೬೦೦ ಕ್ಕೂ ಹೆಚ್ಚು ಜಿಜ್ಞಾಸುಗಳು ಇದರ ಲಾಭ ಪಡೆದರು.

ಏ. ಕರ್ನಾಟಕದಲ್ಲಿ ಸುಮಾರು ೧೪೭ ದೇವಸ್ಥಾನಗಳಲ್ಲಿ ಸನಾತನದ ಗ್ರಂಥ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

೨. ಫಲಶೃತಿ

ಅ. ರಾಜ್ಯದಾದ್ಯಾಂತ ಅನೇಕ ಕಡೆಗಳಲ್ಲಿ ಧರ್ಮಶಿಕ್ಷಣ ವರ್ಗಕ್ಕೆ ಬೇಡಿಕೆ ದೊರಕಿದೆ.

ಆ. ಅನೇಕ ಜಿಜ್ಞಾಸುಗಳು ಸನಾತನದ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಲು ಇಚ್ಛಿಸಿದರು.

೩. ಅಭಿಪ್ರಾಯ

ಅ. ಸೌ. ಅಪರ್ಣಾ, ಬೆಂಗಳೂರು – ಸನಾತನದ ಆಷ್ಟಗಂಧ ಸಾಬೂನನ್ನು ಹಚ್ಚಿದ್ದರಿಂದ ನನಗೆ ಲಾಭ ವಾಯಿತು. ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಮನೆಯಲ್ಲಿ ಟ್ಟರೆ ಮನೆಯ ವಾತಾವರಣ ಸಕಾರಾತ್ಮಕವಾಗುತ್ತದೆ

ಆ. ಕು, ಭವ್ಯ ನಾಯ್ಕ್ ಶಿವಮೊಗ್ಗ – ದಾವಣಗೆರೆಯ ಗ್ರಂಥ ಪ್ರದರ್ಶನಕ್ಕೆ ಬರುವ ಎಲ್ಲ ಜಿಜ್ಞಾಸುಗಳು ಸನಾತನ ಸಂಸ್ಥೆಯ ಹೆಸರು ಕೇಳಿದ ಕೂಡಲೇ, ‘ನಿಮ್ಮ ಕಾರ್ಯ ತುಂಬಾ ಒಳ್ಳೆಯದಿದೆ’, ಎಂದು ಹೇಳುತ್ತಿದ್ದರು,

೪. ವೈಶಿಷ್ಟ್ಯಪೂರ್ಣ

ಅ. ಬಾಗಲಕೋಟೆಯ ಒಂದು ದೇವಸ್ಥಾನದಲ್ಲಿ ಗ್ರಂಥಪ್ರದರ್ಶನ ಏರ್ಪಡಿಸಲಾಗಿತ್ತು. ದೇವಸ್ಥಾನದ ಆಡಳಿತ ಮಂಡಳಿಯವರು ಸನಾತನದ ಸಾಧಕರನ್ನು ಒಂದು ಕಾರ್ಯಕ್ರಮದ ವ್ಯಾಸಪೀಠಕ್ಕೆ ಕರೆದು ಶಾಲು-ಶ್ರೀಫಲ ನೀಡಿ ಅವರ ಸತ್ಕಾರ ಮಾಡಿದರು. ‘ಸನಾತನದ ಸಾಧಕರು ಮಾತ್ರ ನಿಸ್ವಾರ್ಥ ಭಾವದಿಂದ ಸೇವೆ ಮಾಡುತ್ತಾರೆ’ ಎಂದು ದೇವಸ್ಥಾನದ ಪದಾಧಿಕಾರಿಗಳು ಉದ್ಗಾರ ತೆಗೆದರು. ಈ ಗ್ರಂಥಪ್ರದರ್ಶನಕ್ಕೆ ಬೇಕಾಗುವ ವಿದ್ಯತ್ ದೀಪದ ವ್ಯವಸ್ಥೆಯನ್ನು ಸ್ವತಃ ದೇವಸ್ಥಾನದ ಆಡಳಿತ ಮಂಡಳಿಯವರು ಮಾಡಿದರು.

ಆ. ಬಾಗಲಕೋಟೆಯ ಶಿವನ ದೇವಸ್ಥಾನದಲ್ಲಿ ಹಾಕಿದ ಗ್ರಂಥ ಪ್ರದರ್ಶನಕ್ಕೆ ಭೇಟಿ ನೀಡಿದ ಓರ್ವ ಜಿಜ್ಞಾಸುಗಳಿಗೆ ಲಾಕ್‌ಡೌನ್ ದಿಂದ ಕಳೆದ ೨ ವರ್ಷಗಳಿಂದ ಸನಾತನದ ಪಂಚಾಗ ದೊರಕಿರ ಲಿಲ್ಲವೆಂದು ಈ ವರ್ಷದ ಪಂಚಾಂಗ ಖರೀದಿಸಿದರಲ್ಲದೆ ಮುಂದಿನ ವರ್ಷದ ಪಂಚಾಗದ ಬೇಡಿಕೆ ನೀಡಿದರು. ಅಲ್ಲದೇ ಸನಾತನದ ಗ್ರಂಥ ಪ್ರದರ್ಶನದ ಜಾಗದಲ್ಲಿ ಬಿಸಿಲಿರುವುದು ಕಂಡು ಅವರು ‘ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಕರೆದರು. ಅನಂತರ ಆ ಜಿಜ್ಞಾಸೂಗಳು ತಮ್ಮ ಸ್ವಂತದ ಖರ್ಚಿಂದ ಪ್ರದರ್ಶಿನಿ ಜಾಗಕ್ಕೆ ಮಂಟಪ ಹಾಕಲು ಹೇಳಿದರು ಹಾಗೂ ಪ್ರತಿವರ್ಷ ತಮ್ಮ ಖರ್ಚಿನಿಂದಲೇ ಮಂಟಪ ಹಾಕಬೇಕು, ಎಂದು ದೇವಸ್ಥಾನದ ಟ್ರಸ್ಟ್ ನವರಿಗೆ ಹೇಳಿದರು.