Exclusive : ಮುಸಲ್ಮಾನ ಯುವತಿಯರಿಗೆ ನಿಜವಾಗಿಯೂ ‘ಹಿಜಾಬ್’ನ ಅಗತ್ಯವಿದೆಯೇ ?

‘ಹಿಜಾಬ್ ನಿಷೇಧದ ನಿಮಿತ್ತ…

ಕರ್ನಾಟಕ ಉಚ್ಚ ನ್ಯಾಯಾಲಯವು ಶಾಲಾ ವಿದ್ಯಾರ್ಥಿನಿಯರಿಗೆ ಹಿಜಾಬ್(ಮುಸಲ್ಮಾನ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚಲು ಧರಿಸುವ ಬಟ್ಟೆ) ಧರಿಸಿ ಶಾಲೆಗೆ ಅಥವಾ ಪರೀಕ್ಷೆಗೆ ಹೋಗಲು ನಿಷೇಧಿಸಿದೆ; ಆದರೆ ಇಂದಿಗೂ ಕೆಲವು ಸ್ಥಳಗಳಲ್ಲಿ ಹಿಜಾಬ್ ಅನುಮತಿಗಾಗಿ ಆಂದೋಲನಗಳು ಮುಂದುವರಿದಿವೆ. ಹಿಜಾಬ್‌ಗಾಗಿ ಪರೀಕ್ಷೆಯನ್ನೇ ಧಿಕ್ಕರಿಸಿದ್ದಾರೆ. ನಿಜವಾಗಿಯೂ ‘ಹಿಜಾಬ್ ಯಾರಿಗೆ ಬೇಕು ?’, ಎಂಬ ಪ್ರಶ್ನೆಗೆ ಉತ್ತರ ನೀಡಲು ಒಂದು ಅನುಭವವನ್ನು ಬರೆಯುತ್ತಿದ್ದೇನೆ.

೧. ರೈಲಿನಲ್ಲಿ ೩ ಹಿಜಾಬಿ ಹುಡುಗಿಯರೊಂದಿಗೆ ಸಂಭಾಷಣೆ

ಶ್ರೀ. ಚೇತನ ರಾಜಹಂಸ

‘ಸುಮಾರು ೨೦೧೭ರ ಪ್ರಸಂಗ, ನಾನು ಒಂದು ಕಾರ್ಯಕ್ರಮದ ನಿಮಿತ್ತ ಗೋವಾದಿಂದ ರೈಲಿನ ಮೂಲಕ ಭಾಗ್ಯನಗರ (ಹೈದರಾಬಾದ)ಕ್ಕೆ ಹೊರಟೆನು. ಈ ಪ್ರವಾಸದಲ್ಲಿ ಹುಬ್ಬಳ್ಳಿ (ಈಗಿನ ಶ್ರೀ ಸಿದ್ಧಾರೂಢ ಜಂಕ್ಷನ್) ರೈಲು ನಿಲ್ದಾಣದಲ್ಲಿ ಮೂವರು ಮುಸಲ್ಮಾನ ವಿದ್ಯಾರ್ಥಿನಿಯರು ಮತ್ತು ಅವರ ಅಬ್ಬಾಜಾನ (ಬಹುಶಃ ಅಜ್ಜ ಇರಬೇಕು) ರೈಲು ಹತ್ತಿದರು. ನನ್ನ ಅಕ್ಕಪಕ್ಕದ ಜಾಗವು ಈ ನಾಲ್ಕು ಜನರಿಗೆ ಇದ್ದುದರಿಂದ ನಾನು ಅವರೊಂದಿಗೆ ಪರಿಚಯಮಾಡಿಕೊಂಡು ಸಂಭಾಷಣೆ ಮಾಡಿದೆ.

ಈ ಮೂವರೂ ಹುಡುಗಿಯರು ೧೧ ನೇ ತರಗತಿಯಲ್ಲಿ ಕಲಿಯುತ್ತಿದ್ದರು ಮತ್ತು ಹೈದರಾಬಾದ್‌ಗೆ ಯಾವುದೋ ಒಂದು ಪರೀಕ್ಷೆಗಾಗಿ ಹೊರಟಿದ್ದರು. ಅವರ ಪಾಲಕರೆಂದು ಅವರೊಂದಿಗೆ ಈ ಹುಡುಗಿಯರ ಪೈಕಿ ಒಬ್ಬಳ ಸಂಬಂಧಿಕರು ಬಂದಿದ್ದರು. ಈ ಹುಡುಗಿಯರು ಅವರಿಗೆ ‘ಅಬ್ಬಾಜಾನ್’ ಎಂದು ಕರೆಯುತ್ತಿದ್ದಳು. ಕಪ್ಪು ಬಣ್ಣದ ಹಿಜಾಬ್ ಧರಿಸಿದ ಮುವರೂ ಹುಡುಗಿಯರು ಮಾತನಾಡುತ್ತಿದ್ದರು. ಅವರಲ್ಲಿ ಒಬ್ಬಳು ಪೂರ್ಣ ಬುರುಖಾ ಧರಿಸಿದ್ದಳು; ಆದರೆ ಮುಖ ಮಾತ್ರ ಮುಚ್ಚಿರಲಿಲ್ಲ. ನಾನು ಅವರಿಗೆ ಕುತೂಹಲದಿಂದ, ‘ಹಿಜಾಬ್ ಎಂದರೇನು ?’ ಮತ್ತು ‘ಬುರ್ಖಾ ಎಂದರೇನು ?’ ಎಂದು ಕೇಳಿದೆನು. ಅವರ ಪೈಕಿ ಒಬ್ಬಳ ತಂದೆ ಮಸೀದಿಯಲ್ಲಿ ಮೌಲಾನಾ(ಇಸ್ಲಾಮಿ ವಿದ್ವಾನ್) ಆಗಿದ್ದರಿಂದ ಅವಳು ವಿವರವಾಗಿ ಈ ಬಗ್ಗೆ ಇಸ್ಲಾಮ್‌ನಲ್ಲಿನ ಮಾಹಿತಿಯನ್ನು ಹೇಳಿದಳು.

ನಾನು ಅವಳಿಗೆ, ‘ನಿನಗೆ ಇದೆಲ್ಲವೂ ಹೇಗೆ ಗೊತ್ತು ?’ ಎಂದು ಪ್ರಶ್ನಿಸಿದಾಗ ಅವಳು ತನ್ನ ತಂದೆ ಮೌಲಾನಾ ಆಗಿದ್ದು ಅವರೇ ಇದನ್ನು ಕಲಿಸಿದ್ದಾರೆ ಎಂದು ಹೇಳಿದಳು.

೨. ಹಿಜಾಬ್ ಮತ್ತು ಘುಂಘಟ್(ತಲೆಯ ಮೇಲೆ ಹೊದ್ದುಕೊಳ್ಳುವ ಸೆರಗು) ಇವುಗಳ ಬಗ್ಗೆ ‘ಕಾವೇರಿದ’ ಚರ್ಚೆ !

೨ ಅ. ಹಿಂದೂ ಧರ್ಮದಲ್ಲಿ ಘುಂಘಟ ಇರುವ ಹಾಗೆ ಇಸ್ಲಾಂ ನಲ್ಲಿ ಹಿಜಾಬ್’, ಎಂದು ಹೇಳುವ ಪ್ರಯತ್ನ ! : ನಾನು, “ಬೇಸಿಗೆಯ ಕಾಲವಾಗಿದೆ. ಮೇ ತಿಂಗಳು ಅತ್ಯಂತ ಬಿಸಿಲಿನ ಸಮಯವಾಗಿರುವಾಗ ಕಪ್ಪು ಬಣ್ಣದ ಸ್ಕಾರ್ಫ್ (ಹಿಜಾಬ್) ಧರಿಸಿ ನಿಮಗೆ ಸೆಖೆ (ಉಷ್ಣತೆ) ಆಗುವುದಿಲ್ಲವೇ ?”, ಎಂದು ಕೇಳಿದಾಗ. ಮೂವರೂ, ‘ಇದು ನಮ್ಮ ಮಜಹಬ ಕಾ ಫೈಸಲಾ ಹೆ(ಇದು ನಮ್ಮ ಧರ್ಮದ ನಿರ್ಧಾರವಾಗಿದೆ) ! ಅದಕ್ಕಾಗಿ ನಾವು ಹಿಜಾಬ್ ಸ್ವೀಕರಿಸಿದ್ದೇವೆ” ಎಂದು ಹೇಳಿದರು. ಅವರ ಪೈಕಿ ಒಬ್ಬಳು ಮಾತನ್ನು ಮುಂದುವರಿಸುತ್ತಾ, ‘ನಿಮ್ಮ ಧರ್ಮದಲ್ಲಿಯೂ ಘುಂಘಟ(ಸೆರಗು)ನ್ನು ಹಾಕಿಕೊಳ್ಳುವಂತೆ ಈ ಹಿಜಾಬ್ ಆಗಿದೆ”, ಎಂದು ಹೇಳಿದಳು. ಸಂಕ್ಷಿಪ್ತದಲ್ಲಿ ‘ನಿಮ್ಮ ಮತ್ತು ನಮ್ಮ ಧರ್ಮದಲ್ಲಿನ ಕಲಿಕೆ ಒಂದೇಯಾಗಿದೆ’, ಎಂದು ಹೇಳುವ ಅವಳ ದಯನೀಯ ಪ್ರಯತ್ನವಾಗಿತ್ತು !

೨ ಆ. ಘುಂಘಟ ಪದ್ದತಿ ಸುಲ್ತಾನಿ ದಾಳಿಖೊರರಿಂದ ಬಂದಿದೆ ಎಂದು ಹೇಳಿದಾಗ ಆ ಮತಾಂಧ ಹುಡುಗಿಯರಿಗೆ ಸಿಟ್ಟು ಬರುವುದು : ನಾನು ಅವರಿಗೆ ‘ಘುಂಘಟ(ಸೆರಗು) ಸಂಪ್ರದಾಯ ಭಾರತದಲ್ಲಿ ಹೇಗೆ ಬಂದಿತು’, ಎಂದು ಸ್ವಲ್ಪ ವಿವರವಾಗಿ ಹೇಳುತ್ತಾ ಸುಲ್ತಾನಿ ದಾಳಿಖೊರರು ಹಿಂದೂ ಹುಡುಗಿಯರ ಮೇಲೆ ಮಾಡಿದ ಅತ್ಯಾಚಾರಗಳ ಬಗ್ಗೆ ವಿವರಿಸಿ ಹೇಳಿದೆನು. ಅವರಿಗೆ ನಾನು “ಘುಂಘಟ(ಸೆರಗು) ಸಂಪ್ರದಾಯವು ಭಯದಿಂದ ಬಂದಿತು. ಅದು ಹಿಂದೂ ಧರ್ಮದಲ್ಲಿ ಎಂದಿಗೂ ಇರಲಿಲ್ಲ. ನಮ್ಮ ಎಲ್ಲ ದೇವಿ ಮಾತೆಯರು ಎಂದಿಗೂ ಘುಂಘಟ(ಸೆರಗು) ಹಾಕಿಕೊಳ್ಳುವುದಿಲ್ಲ”, ಎಂದು ಸುಲಭ ಮಾತುಗಳಲ್ಲಿ ಹೇಳಿದೆನು. ನಾನು ಹೀಗೆ ಹೇಳಿದಾಗ ಅವರಲ್ಲಿ ಒಬ್ಬಳಿಗೆ ಸಿಟ್ಟು ಬಂದಿತು ಮತ್ತು ಅವಳು ಸ್ವಲ್ಪ ಸಿಟ್ಟಿನಿಂದಲೇ, ‘ನೀವು ಸುಳ್ಳು ಕಥೆಯನ್ನು ಹೇಳಿದ್ದೀರಿ. ಈ ದೇಶವು ಮೊದಲು ಮುಸಲ್ಮಾನರದ್ದೇ ಆಗಿತ್ತು. ಗಾಂಧಿ ಮತ್ತು ನೆಹರು ನಮ್ಮ ಜನರನ್ನು ಪಾಕಿಸ್ತಾನಕ್ಕೆ ಕಳುಹಿಸಿದರು’, ಎಂದಳು. ಅವರ ಈ ಮಾತುಗಳು ವಿದ್ಯಾರ್ಥಿ ವಯಸ್ಸಿನ ಮುಸಲ್ಮಾನರ ಮನಸ್ಸನ್ನು ಕಂಡುಹಿಡಿಯಲು ಸಾಕಾಗಿದ್ದವು.

೩. ‘ಹಿಜಾಬ್’ ಯಾರಿಗೆ ಬೇಕಿತ್ತು ?

೩ ಅ. ಹಿಜಾಬ್ ಧರಿಸುವ ಬಗ್ಗೆ ಕೆಲವರಿಗೆ ಮನೆಯಿಂದ ಅನಿವಾರ್ಯ ಇರುವುದು, ಇನ್ನೂ ಕೆಲವರಿಗೆ ಅದು ತಾವಾಗಿಯೇ ಹಾಕಿಕೊಳ್ಳುವುದು : ಇತರ ಇಬ್ಬರೂ ಮತ್ತು ಅವರ ಅಬ್ಬಾಜಾನ್ ಮಾತ್ರ ಕುತೂಹಲದಿಂದ ಸಂಭಾಷಣೆಯನ್ನು ಕೇಳುತ್ತಿದ್ದರು. ನಾನು ಅವರಿಗೆ, “ಹಲವು ಬಾರಿ ನಮಗೆ ತಿಳಿದ ಮಾಹಿತಿಯು ಸತ್ಯವಾಗಿರುತ್ತದೆ, ಎಂದೇನಿಲ್ಲ. ಆದ್ದರಿಂದ ಈ ಬಗ್ಗೆ ವಿಚಾರ ಮಾಡಬೇಡಿರಿ; ಆದರೆ ‘ನಿಮ್ಮ ಅಬ್ಬಾಜಾನ್ ಜೊತೆಗಿರುವರೆಂದು, ನೀವು ಇಷ್ಟು ಬಿಸಿಲಿನಲ್ಲಿ ಈ ಕಪ್ಪು ಸ್ಕಾರ್ಫ್‌ಅನ್ನು ಧರಿಸಿರಬಹುದು”, ಎಂದು ನನಗನಿಸುತ್ತದೆ’, ಎಂದು ಹೇಳಿದಾಗ ಅವರಲ್ಲಿನ ಓರ್ವ ಹುಡುಗಿಯು ನಾಚಿಕೊಂಡಳು. ಅಷ್ಟರಲ್ಲಿಯೇ ಅವರ ಅಬ್ಬಾಜಾನ್ ಸಂಭಾಷಣೆಯಲ್ಲಿ ಪಾಲ್ಗೊಳ್ಳುತ್ತಾ, “ನಾನು ಯಾವುದೇ ಒತ್ತಾಯವನ್ನು ಮಾಡಿಲ್ಲ. ಇದು ಅವರದ್ದೇ ನಿರ್ಧಾರವಾಗಿದೆ” ಎಂದರು. ಇನ್ನೊಬ್ಬ ಹುಡುಗಿಯೂ ಸ್ವಲ್ಪ ಒತ್ತಿ, “ಇದು ನಮ್ಮದೇ ನಿರ್ಧಾರವಾಗಿದೆ” ಎಂದು ಹೇಳಿದಳು. ಮೂರನೇಯ ಹುಡುಗಿಯು ಮಾತ್ರ ಪ್ರಾಮಾಣಿಕವಾಗಿ, “ನನಗೆ ನನ್ನ ಅಬ್ಬಾರವರು ಹೇಳಿದ್ದಾರೆ. ೯ ನೇ ತರಗತಿಯ ವರೆಗೆ ನಾವು ಧರಿಸುತ್ತಿರಲಿಲ್ಲ”, ಎಂದು ಹೇಳಿದಳು.

೩ ಆ. ಅವಕಾಶ ಸಿಗುತ್ತಲೇ ಮೂರೂ ಹೆಣ್ಣು ಮಕ್ಕಳು ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಹೊರಗೆ ಹೋಗುವುದು ! : ಸ್ವಲ್ಪ ಸಮಯದ ನಂತರ ರೈಲು ಗುಂತಕಲ್ ರೈಲು ನಿಲ್ದಾಣ ಬಂದಿತು. ಇಲ್ಲಿ ೫ ಗಂಟೆಗಳ ಕಾಲ ನಿಲುಗಡೆ ಇತ್ತು; ಏಕೆಂದರೆ ನಮ್ಮ ಮುಖ್ಯ ರೈಲು ಬೆಂಗಳೂರಿಗೆ ಹೋಗುವುದಿತ್ತು ಮತ್ತು ನಮ್ಮ ಹೈದರಾಬಾದ್‌ನ ಭೋಗಿಗಳು ಇನ್ನೊಂದು ರೈಲಿಗೆ ಜೋಡಿಸಲ್ಪಡುವುದಿತ್ತು. ರೈಲು ಗುಂತಕಲ್ ನಿಲ್ದಾಣದಲ್ಲಿ ನಿಂತಾಗ ಅಬ್ಬಾಜಾನ್ ಎದ್ದರು ಮತ್ತು ಈ ಮೂವರೂ ಹುಡುಗಿಯರಿಗೆ, “ಇಲ್ಲಿ ನನ್ನ ಹಳೆಯ ಸಂಬಂಧಿಕರಿದ್ದಾರೆ. ನಾನು ೩ ಗಂಟೆಗಳಲ್ಲಿ ಹಿಂದಿರುಗಿ ಬರುವೆನು. ಅಲ್ಲಿಯವರೆಗೆ ನಿಮ್ಮ ಕಾಳಜಿ ವಹಿಸಿ”, ಎಂದು ಹೇಳಿದರು. ಅವರು ರೈಲಿನಿಂದ ಇಳಿದಿದ್ದಾರೆ ಎಂದು ಖಚಿತವಾದ ತಕ್ಷಣ ಈ ಮುವರೂ ‘ಹಿಜಾಬಿ’ ಹುಡುಗಿಯರು ತಮ್ಮ ತಮ್ಮ ಜಾಗದಿಂದ ಎದ್ದು ನನಗೆ, “ಭೈಯ್ಯಾ, ನಾವು ೨ ಗಂಟೆಗಳ ಕಾಲ ಮಾರುಕಟ್ಟೆಗೆ ಹೋಗಿ ಬರುತ್ತೇವೆ. ಅಬ್ಬಾಜಾನ್ ಬರುವ ಮೊದಲೇ ನಾವು ಬರುತ್ತೇವೆ”, ಎಂದು ಹೇಳಿದರು.

೩ ಇ. ಹೆಣ್ಣು ಮಕ್ಕಳು ಇಸ್ಲಾಂನಲ್ಲಿ ಅನುಮತಿ ಇಲ್ಲದ ಅಲಂಕಾರಿಕ ವಸ್ತುಗಳನ್ನು ಖರೀದಿಸುವುದು ಮತ್ತು ಅದನ್ನು ಪೋಷಕರಿಗೆ ಹೇಳದಂತೆ ವಿನಂತಿಸಿ ‘ಹಿಜಾಬ್ ಯಾರಿಗೆ ಬೇಕು ?’, ಎಂಬ ಪ್ರಶ್ನೆಗೆ ಉತ್ತರ ಸಿಗುವುದು : ಗುಂತಕಲ್ ನಗರವು ಅಲಂಕಾರ ಮತ್ತು ಸೌಂದರ್ಯವರ್ಧಕಗಳಿಗಾಗಿ ಪ್ರಸಿದ್ಧವಾಗಿದೆ. ಸುಮಾರು ೨ ಗಂಟೆಗಳ ನಂತರ ಈ ಹುಡುಗಿಯರು ಪುನಃ ರೈಲಿನಲ್ಲಿ ಹತ್ತಿದರು. ಅವರು ಕಿವಿಯೊಲೆಗಳು, ಕೊರಳಿನ ಸರಗಳು, ಕಪ್ಪು ಬಿಂದಿಗಳು, ಕ್ಲಿಪ್ ಮತ್ತು ಚಿಕ್ಕ ಚಿಕ್ಕ ಕನ್ನಡಿಗಳನ್ನು ಖರೀದಿಸಿದ್ದರು. ರೈಲಿನಲ್ಲಿ ಕುಳಿತ ನಂತರ ಆ ಮೂವರೂ ‘ಹಿಜಾಬಿ’ ಸ್ಕಾರ್ಫ್ ತೆಗೆದು ಪಕ್ಕಕ್ಕಿಟ್ಟು ಆ ಅಲಂಕಾರಗಳನ್ನು ಧರಿಸಿದರು ಮತ್ತು ಕನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದರು. ಆಗ ನಾನು ನಗುನಗುತ್ತಾ ಅವರಿಗೆ, “ಗುಂತಕಲ್‌ನಲ್ಲಿ ಈ ಸೌಂದರ್ಯವರ್ಧಕಗಳು ಅಗ್ಗದಲ್ಲಿ ಸಿಗುತ್ತದೆಯೇ ? ಎಂದು ಕೇಳಿದೆನು. ಮೂವರೂ ಒಂದೇ ಸ್ವರದಲ್ಲಿ, “ಬಹಳ ಅಗ್ಗವಾಗಿರುತ್ತವೆ”, ಎಂದು ಹೇಳಿದರು. ನಾನು ಕೂಡಲೇ, “ಆದರೆ ಇಸ್ಲಾಂನಲ್ಲಿ ಅಲಂಕಾರ ಜಾಯಜ್ (ಅನುಮತಿ) ಇದೆಯೇ ?” ಎಂದು ಕೇಳಿದೆನು. ನನ್ನ ಈ ಪ್ರಶ್ನೆಯನ್ನು ಕೇಳಿದ ತಕ್ಷಣ ಮುವರೂ ಹುಡುಗಿಯರು ಪರಸ್ಪರರ ಕಡೆಗೆ ನೋಡಿ ಒಮ್ಮೆಲೇ ನಾಚಿಕೊಂಡರು. ಅವರಲ್ಲಿನ ಒಬ್ಬಳು “ಇಲ್ಲ”ವೆಂದು ಹೇಳುವ ಧೈರ್ಯವನ್ನು ತೋರಿಸುವಾಗಲೇ ಇನ್ನೊಬ್ಬಳು, ‘ಭೈಯ್ಯಾ ನಾವು ಈ ಅಲಂಕಾರವನ್ನು ಖರೀದಿಸಿದ ಬಗ್ಗೆ ನೀವು ಅಬ್ಬಾಜಾನ್‌ಗೆ ಹೇಳಬೇಡಿರಿ”, ಎಂದು ಹೇಳಿದಳು. ನಾನು ಒಪ್ಪಿಕೊಂಡು ತಲೆಯಲ್ಲಾಡಿಸಿದೆನು; ಏಕೆಂದರೆ ಅವರ ವಿನಂತಿಯಿಂದ ‘ಹಿಜಾಬ್ ಯಾರಿಗೆ ಬೇಕಾಗಿತ್ತು’, ಎಂಬ ಪ್ರಶ್ನೆಗೆ ನನಗೆ ಉತ್ತರ ಸಿಕ್ಕಿತ್ತು.

ಅಲಂಕಾರವು ಸ್ತ್ರೀಯ ನೈಸರ್ಗಿಕ ಕರ್ಮವಾಗಿದೆ; ಆದರೆ ಅದನ್ನು ನಿರಾಕರಿಸಿ ಕಪ್ಪು ಸ್ಕಾರ್ಫ್‌ನಲ್ಲಿ ಅವಳನ್ನು ಸುತ್ತಿಡುವ ಪ್ರವೃತ್ತಿಯ ಬಗ್ಗೆ ನಿಜವಾಗಿಯೂ ಸ್ತ್ರೀಮುಕ್ತಿ ಚಳುವಳಿಯು ಇರಬೇಕು; ಆದರೆ ಇದನ್ನು ಆಧುನಿಕ ಸ್ತ್ರೀಮುಕ್ತಿವಾದಿಗಳಿಗೆ ಯಾರು ಹೇಳುವರು ?

– ಶ್ರೀ. ಚೇತನ ರಾಜಹಂಸ, ವಕ್ತಾರರು, ಸನಾತನ ಸಂಸ್ಥೆ