‘ಆಫ್ಟರ್‌ನೂನ್ ವಾಯ್ಸ್’ನ ‘ನ್ಯೂಸ್‌ಮೇಕರ್ಸ್ ಅಚೀವರ್ಸ್ ಅವಾರ್ಡ್ 2024’ ಸಮಾರಂಭ
ಮುಂಬಯಿ, ಮೇ 2 (ಸುದ್ದಿ) – ಮಹಾರಾಷ್ಟ್ರ ದಿನದಂದು ‘ಆಫ್ಟರ್‌ನೂನ್ ವಾಯ್ಸ್’ ನ ಆನ್‌ಲೈನ್ ಪತ್ರಿಕೆಯ ‘ನ್ಯೂಸ್‌ಮೇಕರ್ಸ್ ಅಚೀವರ್ಸ್ ಅವಾರ್ಡ್ 2024’ ನ 16 ನೇ ಪ್ರಶಸ್ತಿ ಪ್ರಧಾನ ಸಮಾರಂಭವು ನಾರಿಮನ್ ಪಾಯಿಂಟ್‌ನಲ್ಲಿರುವ ಯಶವಂತರಾವ ಪ್ರತಿಷ್ಠಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪತ್ರಿಕೋದ್ಯಮ, ಬರಹಗಾರರು, ಭಾರತೀಯ ನೃತ್ಯ, ಸಾಮಾಜಿಕ ಕಾರ್ಯ, ವೈದ್ಯಕೀಯ ಕ್ಷೇತ್ರ, ಚಲನಚಿತ್ರ ರಂಗ ಹೀಗೆ ನಾನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ‘ಆಫ್ಟರನೂನ್ ವಾಯ್ಸ್’ ನ ಸಂಸ್ಥಾಪಕ ಸಂಪಾದಕಿ ಡಾ. ವೈದೇಹಿ ತಾಮ್ಹಣ ಮತ್ತು ಅವರ ಸಹೋದ್ಯೋಗಿಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
Honour of dignitaries from various fields including Journalism, Writing, Films, Social Work, Indian Dance and more !@Afternoon_Voice‘s ‘#NewsmakersAchieversAward 2024′ Ceremony
Recipients of the Lifetime Achievement Award
Kathak Dancer Padma Shri Dr. Puru Dadheech, Classical… pic.twitter.com/0xPP2JVGUE
— Sanatan Prabhat (@SanatanPrabhat) May 2, 2024
ಈ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ ಅವರ ಪತ್ನಿ ಸೌ. ಅಮೃತಾ ಫಡ್ನವಿಸ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮಕ್ಕೆ ‘ಸುದರ್ಶನ ನ್ಯೂಸ್’ ವಾಹಿನಿಯ ಮುಖ್ಯ ಸಂಪಾದಕ ಶ್ರೀ. ಸುರೇಶ ಚವಾಂಕೆ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ, ಸನಾತನದ ಧರ್ಮ ಪ್ರಚಾರಕ ಶ್ರೀ. ಅಭಯ ವರ್ತಕ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಜೀವಮಾನ ಸಾಧನೆ ಪ್ರಶಸ್ತಿಯ ಗೌರವಕ್ಕಾಗಿ !ಕಥ್ಥಕ ನರ್ತಕಿ ಪದ್ಮಶ್ರೀ ಡಾ. ಪುರು ದಧಿಚ್, ಮಣಿಪುರಿ ನೃತ್ಯಗಾರ್ತಿ ಪದ್ಮಶ್ರೀ ದರ್ಶನಾ ಝವೇರಿ, ನಟಿ ಸಲ್ಮಾ ಆಘಾ ಮತ್ತು ಚಲನಚಿತ್ರ ನಿರ್ಮಾಪಕ ಕೆ.ಸಿ. ಬೊಕಾಡಿಯಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
‘ಜೆನೆರಿಕ ಆಧಾರ’ ಕಂಪನಿಯ ಮಾಧ್ಯಮದಿಂದ ನಾಗರಿಕರಿಗೆ ಅಗ್ಗದ ದರದಲ್ಲಿ ಔಷಧಗಳನ್ನು ಒದಗಿಸುತ್ತಿರುವ ಅರ್ಜುನ್ ದೇಶಪಾಂಡೆ ಅವರನ್ನು ‘ಅತ್ಯುತ್ತಮ ಉದ್ಯಮಿ’ ಎಂದು ಗೌರವಿಸಲಾಯಿತು. ನಕ್ಸಲ ಪೀಡಿತ ಪ್ರದೇಶಗಳಲ್ಲಿ ನೂರಾರು ಜನರಿಗೆ ಉದ್ಯೋಗ ಕಲ್ಪಿಸಲು ಮುಂದಾಗಿದ್ದ ರಾಜ್ಯದ ಆಹಾರ ಮತ್ತು ಔಷಧ ಆಡಳಿತ ಸಚಿವ ಧರ್ಮರಾವ ಬಾಬಾ ಆತ್ರಾಮ ಅವರಿಗೆ ‘ಅತ್ಯುತ್ತಮ ಜನನಾಯಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ಉದಯ ನಿರಗುಡಕರ ಅವರನ್ನು ‘ಅತ್ಯುತ್ತಮ ಸುದ್ದಿ ವರದಿಗಾರ’ ಎಂದು ಸನ್ಮಾನಿಸಲಾಯಿತು. ಇದರೊಂದಿಗೆ ನಟಿ ಅದಾ ಶರ್ಮಾ ಅವರಿಗೆ ‘ಅತ್ಯುತ್ತಮ ಕಲಾವಿದೆ’ ಪ್ರಶಸ್ತಿಯನ್ನು ನೀಡಲಾಯಿತು. ಮುಖ್ಯಮಂತ್ರಿಗಳ ವೈದ್ಯಕೀಯ ನೆರವು ವಿಭಾಗದ ವಿಶೇಷ ‘ಕಾರ್ಯನಿರ್ವಾಹಕ ಅಧಿಕಾರಿ’ ಮಂಗೇಶ ಚಿವಟೆ ಹಾಗೂ ಮುಂಬಯಿ ಮಹಾನಗರ ಪಾಲಿಕೆಯ ಅಧೀಕ್ಷಕ ಜಿತೇಂದ್ರ ಪರದೇಸಿ ಅವರನ್ನು ಸನ್ಮಾನಿಸಲಾಯಿತು. ಅತ್ಯುತ್ತಮ ಬಹುಪಾತ್ರ ನಟನೆಗಾಗಿ ನಟಿ ಮಧು ಮತ್ತು ನಟ ದೀಪಕ ತಿಜೋರಿ, ಶಿಳ್ಳೆ ಹಾಕಿ ಅತ್ಯುತ್ತಮ ಸಂಗೀತ ನಿರ್ಮಾಣ ಮಾಡುವ ಶಿರೀಷ ಜೋಶಿ, ಅತ್ಯುತ್ತಮ ಚಲನಚಿತ್ರ ನಿರ್ಮಾಪಕಿ ಹಿನಾ ಡಿಸೋಜಾ, ಚಲನಚಿತ್ರೋದ್ಯಮದಲ್ಲಿ ಅತ್ಯುತ್ತಮ ವ್ಯಕ್ತಿತ್ವಕ್ಕಾಗಿ ನಟಿ ರಸಿಕಾ ಆಗಾಶೆ, ಅತ್ಯುತ್ತಮ ನಟನೆಗಾಗಿ ಅರಹಂ ಸಾವಂತ ಇವರನ್ನು ಗೌರವಿಸಲಾಯಿತು. ಆಮ್ ಆದ್ಮಿ ಪಕ್ಷದ ನಾಯಕಿ ಪ್ರೀತಿ ಶರ್ಮಾ ಮೆನನ್ ಅವರು ರಾಜಕೀಯದಲ್ಲಿ ಉತ್ತಮ ಕೆಲಸ ಮಾಡಿದ್ದಕ್ಕಾಗಿ ಅವರನ್ನು ಸನ್ಮಾನಿಸಲಾಯಿತು. ಸಮಾಜಸೇವೆಗಾಗಿ ಡಾ. ನಿಆ ಮದ್ಮಪಾಣಿ, ಡಾ. ತಾತ್ಯಾಸಾಹೇಬ ಲಹಾನೆ, ಸೇಲ್ಸ್ ಮ್ಯಾನೆಜರ್ ನೀತು ಜೋಶಿ ಅವರನ್ನು ಸನ್ಮಾನಿಸಲಾಯಿತು. |