ಶ್ರೀಲಂಕಾದಿಂದ ಭಾರತೀಯ 16 ಮೀನುಗಾರರ ಬಂಧನ !

ಸಮುದ್ರ ಗಡಿ ಉಲ್ಲಂಘನೆ ಆರೋಪ

ಭಾರತದ ಸಮುದ್ರ ಗಡಿ ಎಲ್ಲಿಯವರೆಗಿದೆ, ಎಂಬುದು ಮೀನುಗಾರರಿಗೆ ತಿಳಿಯಲು ಭಾರತ ಸರಕಾರವು ಪಾಕಿಸ್ತಾನ ಮತ್ತು ಶ್ರೀಲಂಕಾ ಇವುಗಳ ನಡುವಿನ ಸಮುದ್ರ ಗಡಿಯ ಬಳಿ ವ್ಯವಸ್ಥೆಗಳನ್ನು ಮಾಡಬೇಕಾಗಿದೆ. ಕಳೆದ ಹಲವಾರು ವರ್ಷಗಳಿಂದ ಈ ಸಮಸ್ಯೆ ಭಾರತೀಯ ಮೀನುಗಾರರನ್ನು ಕಾಡುತ್ತಿದ್ದರೂ ಈ ವರೆಗೆ ಆಡಳಿತಗಾರರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ! – ಸಂಪಾದಕರು 

ಕೊಲಂಬೊ (ಶ್ರೀಲಂಕಾ) – ಸಮುದ್ರ ಗಡಿಯನ್ನು ಉಲ್ಲಂಘಿಸಿದ ಆರೋಪದ ಮೆಲೆ 16 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಅವರ ಎರಡು ಯಾಂತ್ರಿಕ ದೋಣಿಗಳನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲಾ ಮೀನುಗಾರರು ತಮಿಳುನಾಡು ರಾಜ್ಯದವರಾಗಿದ್ದಾರೆ. ಕಳೆದ ತಿಂಗಳು ಶ್ರೀಲಂಕಾದ ನೌಕಾಪಡೆಯು ಕೆಲವು ಭಾರತೀಯ ಮೀನುಗಾರರನ್ನು ಬಂಧಿಸಿತ್ತು; ಆದರೆ ಭಾರತ ಸರಕಾರವು ಕಠಿಣ ನಿಲುವು ತಳೆದ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು.