ಹೋಳಿಯ ಸಮಯದಲ್ಲಿ ಮತಾಂಧರು ಹಿಂದೂಗಳ ಮೇಲೆ ಆಕ್ರಮಣವನ್ನು ನಡೆಸಿದ ನಂತರವೂ ಹಿಂದೂಗಳ ಮೇಲೆಯೇ ಕಾರ್ಯಾಚರಣೆ ನಡೆಯುತ್ತಿರುವುದರಿಂದ ೩೦ ಹಿಂದೂಗಳು ಪಲಾಯನ ಮಾಡಿದ್ದಾರೆ

ಬದಾಯು (ಉತ್ತರಪ್ರದೇಶ)ದಲ್ಲಿನ ಅಲ್ಲಾಪೂರ ಭೋಗಿ ಎಂಬ ಊರಿನಲ್ಲಿ ನಡೆದ ಘಟನೆ !

* ಉತ್ತರಪ್ರದೇಶದಲ್ಲಿ ಭಾಜಪದ ಸರಕಾರವಿರುವಾಗ ಹಿಂದೂಗಳ ಮೇಲೆ ಇಂತಹ ಅನ್ಯಾಯವಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! ಈ ಘಟನೆಯ ವಿಚಾರಣೆ ನಡೆಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಹಿಂದೂಗಳನ್ನು ರಕ್ಷಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು 

* ಹೀಗೆ ನಡೆಯಲು ಈ ಊರು ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆ ? ಸರಕಾರವು ಈ ಘಟನೆಯಲ್ಲಿನ ಅಪರಾಧಿಗಳ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಬೇಕಿದೆ !- ಸಂಪಾದಕರು 

ಬದಾಯು (ಉತ್ತರಪ್ರದೇಶ) – ಇಲ್ಲಿನ ಅಲ್ಲಾಪೂರ ಭೋಗಿ ಎಂಬ ಊರಿನಲ್ಲಿ ಹೋಳಿಯಂದು ದೊಡ್ಡ ‘ಡಿಜೆ’ (ದೊಡ್ಡ ಧ್ವನಿಕ್ಷೇಪಕ ವ್ಯವಸ್ಥೆ) ನಿಲ್ಲಿಸುವ ವಿಷಯದಲ್ಲಿ ನಡೆದಂತಹ ವಾದದಿಂದಾಗಿ ಮತಾಂಧರು ಹಿಂದೂಗಳ ಮೇಲೆ ಆಕ್ರಮಣ ಮಾಡಿದ್ದರು. ಈ ಸಮಯದಲ್ಲಿ ನಡೆದ ಕಲ್ಲುತೂರಾಟದಲ್ಲಿ ಓರ್ವ ಪೊಲೀಸ ಅಧಿಕಾರಿ ಹಾಗೂ ೯ ಜನರು ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಗ್ರಾಮದ ಮುಖ್ಯಸ್ತರಾದ ಬೆಗಮ ಜೈನಬರವರ ದೂರಿನ ನಂತರ ೧೭ ಜನರ ವಿರುದ್ಧ ದೂರನ್ನು ನೋಂದಾಯಿಸಿ ಅವರನ್ನು ಬಂಧಿಸಿದ್ದಾರೆ. ಪೊಲೀಸರಿಂದ ಹಿಂದೂಗಳ ಮೇಲೆಯೇ ಕಾರ್ಯಾಚರಣೆ ನಡೆಯುತ್ತಿರುವುದರಿಂದ ೩೦ ಹಿಂದೂ ಕುಟುಂಬಗಳು ಊರಿನಿಂದ ಪಲಾಯನ ಮಾಡಿವೆ.

೧. ಹೋಳಿಯ ದಿನವೇ ಶಬ-ಎ-ಬಾರಾತ ಎಂಬ ಮುಸಲ್ಮಾನರ ಹಬ್ಬವಿತ್ತು. ಮದ್ಯಾಹ್ನ ಹೋಳಿಯ ಸಮಯದಲ್ಲಿ ಹಿಂದೂಗಳು ‘ಡಿಜೆ’ ಹಚ್ಚಿ ಹಬ್ಬವನ್ನು ಆಚರಿಸುತ್ತಿದ್ದರು. ಈ ಸಮಯದಲ್ಲಿ ಮುಸಲ್ಮಾನರು ಸ್ಮಶಾನಕ್ಕೆ ಹೋಗುವಾಗ ‘ಡಿಜೆ’ಯನ್ನು ನಿಲ್ಲಿಸಲು ಹೇಳಿದರು. ಅದಕ್ಕೆ ಹಿಂದೂಗಳು ನಿರಾಕರಿಸಿದ್ದರಿಂದ ಅವರ ಮೇಲೆ ಆಕ್ರಮಣ ಮಾಡಲಾಯಿತು.

೨. ಮುಖ್ಯಸ್ಥೆ ಜೈನಬರವರ ಪತಿ ರಿಝವಾನರವರು ಮಾಜಿ ಮುಖ್ಯಸ್ಥರಾದ ವಲೀ ಮಹಮ್ಮದನು ಹಿಂದೂಗಳನ್ನು ಕೆಣಕಿದ್ದರಿಂದ ಈ ಹಿಂಸಾಚಾರ ನಡೆದಿದೆ ಎಂದು ಆರೋಪಿಸಿದರು. ಪೊಲೀಸರು ವಲೀ ಮಹಮ್ಮದನೊಂದಿಗೆ ೧೭ ಜನರನ್ನು ಬಂಧಿಸಿದ್ದಾರೆ.

೩. ಹಿಂದೂಗಳ ಆರೋಪವು ಹೀಗಿದೆ, ರಿಝವಾನ, ಗುಡ್ಡೂ ಮುಂತಾದ ೧೫೦ ಮುಸಲ್ಮಾನರು ಹಿಂದೂಗಳ ಮೇಲೆ ಆಕ್ರಮಣ ಮಾಡಿಯೂ ಅವರ ಮೇಲೆ ಯಾವುದೇ ಅಪರಾಧವನ್ನು ದಾಖಲಿಸಲಾಗಿಲ್ಲ. ಪೊಲೀಸರು ಹಿಂದೂಗಳಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ಇದರಿಂದಾಗಿ ಹಿಂದೂಗಳು ಇಲ್ಲಿಂದ ಪಲಾಯನ ಮಾಡುತ್ತಿದ್ದಾರೆ.

೪. ಪೊಲೀಸ ಉಪ ಅಧೀಕ್ಷಕರಾದ ಓ.ಪಿ. ಸಿಂಹರವರು ‘ಹಿಂದೂಗಳ ಪಲಾಯನದ ವಾರ್ತೆಯು ನಿಜವಾಗಿದ್ದರೆ ಅವರಿಗೆ ಸಂರಕ್ಷಣೆಯನ್ನು ನೀಡಲಾಗುವುದು’ ಎಂದು ಹೇಳಿದ್ದಾರೆ. (ಹಿಂದೂಗಳ ಪಲಾಯನವಾಗುತ್ತಿದೆಯೇ ಅಥವಾ ಇಲ್ಲ, ಎಂಬುದು ಪೊಲೀಸರಿಗೇ ತಿಳಿಯದಿದ್ದರೆ ಅದು ಪೊಲೀಸರಿಗೆ ಲಜ್ಜಾಸ್ಪದವಾಗಿದೆ ! – ಸಂಪಾದಕರು)