ಕರ್ನಾಟಕದಲ್ಲಿನ ಅನೇಕ ದೇವಸ್ಥಾನಗಳ ವಾರ್ಷಿಕ ಉತ್ಸವಗಳಲ್ಲಿ ಮುಸಲ್ಮಾನ ಅಂಗಡಿಯವರಿಗೆ ಅನುಮತಿ ಇಲ್ಲ !

ಕರ್ನಾಟಕ ಉಚ್ಚ ನ್ಯಾಯಾಲಯದ ಹಿಜಾಬ ನಿರ್ಬಂಧದ ತೀರ್ಪನ್ನು ಮುಸಲ್ಮಾನ ಸಮಾಜವು ವಿರೋಧಿಸಿದ್ದರ ಪರಿಣಾಮ

ಈಗ ಬಹುಸಂಖ್ಯಾತ ಹಿಂದೂ ಸಮಾಜವು ಅಲ್ಪಸಂಖ್ಯಾತ ಸಮಾಜದ ಮೇಲೆ ಹೇಗೆ ಅನ್ಯಾಯ ಮಾಡುತ್ತಿದೆ ಎಂಬುದರ ಬಗ್ಗೆ ಮಾತನಾಡುವರು; ಆದರೆ ಅಲ್ಪಸಂಖ್ಯಾತ ಸಮಾಜವು ಮಾಡುತ್ತಿರುವ ಕಾನೂನುದ್ರೋಹದ ಬಗ್ಗೆ ಜಾತ್ಯಾತೀತರು ಒಂದು ಅಕ್ಷರವನ್ನೂ ಹೇಳುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !- ಸಂಪಾದಕರು 

ಬೆಂಗಳೂರು (ಕರ್ನಾಟಕ) – ಪುತ್ತೂರು ತಾಲೂಕಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಪ್ರಿಲ್‌ ೨೦ ರಿಂದ ವಾರ್ಷಿಕ ಜಾತ್ರೆಯನ್ನು ಆಯೋಜಿಸಲಾಗಿದೆ. ಈ ಜಾತ್ರೆಯಲ್ಲಿ ಹಾಕಲಾಗುವ ಅಂಗಡಿಗಳಿಗಾಗಿ ಭೂಮಿಯ ಹರಾಜು ನಡೆಸಲಾಗುವುದು. ಈ ಹರಾಜಿನಲ್ಲಿ ಮುಸಲ್ಮಾನರ ಸಹಭಾಗವನ್ನು ನಿರ್ಬಂಧಿಸಲಾಗಿದೆ. ಇದರಲ್ಲಿ ಕೇವಲ ಹಿಂದೂಗಳಿಗೇ ಸವಾಲು ಹಾಕಲು ಅನುಮತಿಯನ್ನು ನೀಡಲಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯವು ಮಹಾವಿದ್ಯಾಲಯದಲ್ಲಿ ಹಿಜಾಬ (ಮುಸಲ್ಮಾನ ಮಹಿಳೆಯರ ತಲೆ ಮತ್ತು ಕುತ್ತಿಗೆಯನ್ನು ಮುಚ್ಚಲು ಬಳಸಿದ ಬಟ್ಟೆ) ಧರಿಸಿ ಬರಬಾರದು’, ಎಂಬ ತೀರ್ಪನ್ನು ನೀಡಿದ ನಂತರ ಮುಸಲ್ಮಾನ ಸಂಘಟನೆಗಳು ಬಂದ್ ಘೋಷಿಸಿದವು. ಆಗ ಮುಸಲ್ಮಾನರು ದೇವಸ್ಥಾನಗಳ ಪರಿಸರದಲ್ಲಿರುವ ತಮ್ಮ ಅಂಗಡಿಗಳನ್ನೂ ಮುಚ್ಚಿದ್ದರು. ಆದುದರಿಂದ ದೇವಸ್ಥಾನಗಳು ಅವರಿಗೆ ವಾರ್ಷಿಕ ಜಾತ್ರೆಗಳಲ್ಲಿ ಅಂಗಡಿಗಳನ್ನು ಹಾಕಲು ಅನುಮತಿ ನೀಡಬಾರದು ಎಂದು ಹಿಂದೂ ಸಂಘಟನೆಗಳು ಮನವಿ ಮಾಡಿದ್ದವು.

೧. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿಯೂ ಇಂತಹದೇ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಕೆಲವು ದಿನಗಳಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪರಿಸರದಲ್ಲಿ ವಾರ್ಷಿಕ ಉತ್ಸವವನ್ನು ಆಚರಿಸಲಾಗುವುದು. ಆದರೆ ಅಲ್ಲಿ ಮುಸಲ್ಮಾನರಿಗೆ ವ್ಯಾಪಾರ ಮಾಡಲು ಆಗುವುದಿಲ್ಲ. ಅಲ್ಲಿ ಭಿತ್ತಿಪತ್ರಕಗಳನ್ನು ಹಚ್ಚಲಾಗಿದೆ. ಇದರಲ್ಲಿ ‘ಕಾನೂನನ್ನು ಗೌರವಿಸದ ಹಾಗೂ ಐಕ್ಯತೆಯನ್ನು ವಿರೋಧಿಸುವ ಜನರಿಗೆ ಇಲ್ಲಿ ವ್ಯಾಪಾರ ಮಾಡುವ ಅನುಮತಿಯನ್ನು ನೀಡಲಾಗುವುದಿಲ್ಲ. ನಾವು ಪೂಜಿಸುವ ಗೋವನ್ನು ಅವರು ಕೊಲ್ಲುತ್ತಾರೆ. ಈಗ ಹಿಂದೂ ಜಾಗೃತವಾಗಿದ್ದಾನೆ. ಆದುದರಿಂದ ಈ ಜನರಿಗೆ ಇಲ್ಲಿ ಅಂಗಡಿಗಳನ್ನು ಹಾಕುವ ಅನುಮತಿಯನ್ನು ನೀಡಲಾಗುವುದಿಲ್ಲ’ ಎಂದು ಬರೆಯಲಾಗಿದೆ.

೨. ಈ ಭಿತ್ತಿಪತ್ರಕದ ಬಗ್ಗೆ ಮಂಗಳೂರು ಪೊಲೀಸ ಆಯುಕ್ತರಾದ ಶಶೀ ಕುಮಾರ ರವರು ‘ಯಾವುದೇ ಸಾಮಾಜಿಕ ಸಂಸ್ಥೆಯು ಇದರ ವಿರುದ್ಧ ದೂರನ್ನು ನೋಂದಾಯಿಸಿದರೆ ನಾವು ಕಾನೂನುಬದ್ಧವಾಗಿ ಕಾರ್ಯಾಚರಣೆಯನ್ನು ಮಾಡುವೆವು. ಹಾಗೆಯೇ ಕೆಲವೇ ದಿನಗಳಲ್ಲಿ ತಹಸಿಲದಾರರು ಈ ಪರಿಸರದಲ್ಲಿ ಸಂಚರಿಸಿ ಈ ಬಗ್ಗೆ ಸವಿಸ್ತಾರ ವರದಿಯನ್ನು ಸಿದ್ಧಪಡಿಸುವರು’ ಎಂದು ಹೇಳಿದರು.

‘ಸಂವಿಧಾನ ವಿರೋಧಿ ಕೃತ್ಯಗಳನ್ನು ಮಾಡುವವರ ವಿರುದ್ಧ ಸರಕಾರವು ಕಾರ್ಯಾಚರಣೆಯನ್ನು ಮಾಡಬೇಕು !’ (ಅಂತೆ) – ಕಾಂಗ್ರೆಸ್‌ ನೇತಾರ ಸಿದ್ಧರಾಮಯ್ಯ

* ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ಣಯದ ವಿರುದ್ಧ ಬಂದ್‌ ಪಾಲಿಸುವುದು ಸಂವಿಧಾನದ್ರೋಹವಲ್ಲವೇ ? ಮತಾಂಧರಿಗೆ ಹೀಗೆ ಮಾಡುವ ಸ್ವಾತಂತ್ರ‍್ಯವನ್ನು ನಿಡಲಾಗಿದೆಯೇ ? ಈ ಬಗ್ಗೆ ಸಿದ್ಧರಾಮಯ್ಯನವರು ಏಕೆ ಮಾತನಾಡುವುದಿಲ್ಲ ?- ಸಂಪಾದಕರು

ಸಿದ್ಧರಾಮಯ್ಯ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನೇತಾರ ಸಿದ್ಧರಾಮಯ್ಯನವರೂ ಈ ಪ್ರಕರಣವು ನಿಷೇದಾರ್ಹವಾಗಿದೆ ಎಂದು ಹೇಳಿದ್ದಾರೆ. ‘ಸಂವಿಧಾನದ ವಿರುದ್ಧ ಕೃತ್ಯ ಮಾಡುವವರ ಮೇಲೆ ರಾಜ್ಯ ಸರಕಾರವು ಕಠೋರ ಕಾರ್ಯಾಚರಣೆಯನ್ನು ಮಾಡಲೇ ಬೇಕು’, ಎಂದು ಅವರು ಮನವಿ ಮಾಡಿದರು.