ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಸಚಿವರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವರು !

ಪ್ರಯಾಗರಾಜ್ – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಸಂಗಮ ಕ್ಷೇತ್ರದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಜನವರಿ 16 ಅಥವಾ 21 ರಂದು ನಡೆಯಲಿದೆ. ಆ ಸಮಯದಲ್ಲಿ, ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಸಚಿವರು ಸಂಗಮದಲ್ಲಿ ಸ್ನಾನ ಮಾಡಲಿದ್ದಾರೆ. ಗಂಗಾ ನದಿಗೆ ಹೆತಾಪಟ್ಟಿಯಿಂದ ದಾರಾಗಂಜ್ ನಡುವೆ ಇರುವ ಪ್ರಸ್ತಾವಿತ ಸೇತುವೆಯ ಸ್ಥಳದಲ್ಲಿ ಸಭೆ ನಡೆಯುವ ಸಾಧ್ಯತೆಯಿದೆ. ಈ ಸ್ಥಳವನ್ನು ಮುಖ್ಯಮಂತ್ರಿಗಳು ಅನುಮೋದಿಸಿದ್ದಾರೆ. ಈ ಪ್ರಸ್ತಾವಿತ ಸೇತುವೆ ನಿರ್ಮಾಣಕ್ಕಾಗಿ 750 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಲಾಗಿದ್ದು, ಈ ಯೋಜನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯುವ ಸಾಧ್ಯತೆಯಿದೆ.
2019 ರಲ್ಲಿ ನಡೆದ ಅರ್ಧ ಕುಂಭ ಮೇಳದ ಕಾಲಾವಧಿಯಲ್ಲಿ ಸಂಗಮ ಕ್ಷೇತ್ರದಲ್ಲಿ ಇದೇ ರೀತಿಯ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ಆ ಸಭೆಯಲ್ಲಿ ಗಂಗಾ ಹೆದ್ದಾರಿ ಯೋಜನೆಗೆ ಅನುಮೋದನೆ ನೀಡಲಾಗಿತ್ತು.
ಸಂಗಮದ ಬಳಿ ಸಾಂಕೇತಿಕ ರಾಮಸೇತು ನಿರ್ಮಾಣ !
ಯಮುನಾ ನದಿಯಲ್ಲಿ ಬೋಟ್ ಕ್ಲಬ್ ನಿಂದ ಅರೈಲ್ ನಡುವೆ ಸಾಂಕೇತಿಕ ರಾಮಸೇತುವನ್ನು ನಿರ್ಮಿಸಲಾಗುತ್ತಿದ್ದು, ಈ ಯೋಜನೆಗೆ ಅನುಮೋದನೆ ದೊರೆಯುವ ಸಾಧ್ಯತೆಯಿದೆ. ಪ್ರಯಾಗರಾಜ ಮಹಾಪೌರರು ಈ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿದ್ದಾರೆ.
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ
ಅಂದಿನ ಸಮಾಜವಾದಿ ಮತ್ತು ಕಾಂಗ್ರೆಸ್ ಸರಕಾರಗಳು ಗೋರಿಗಳ ಗೋಡೆಗಳ ಮೇಲೆ ಹಣ ವ್ಯಯ ಮಾಡುವುದನ್ನೇ ‘ಜಾತ್ಯತೀತತೆ’ ಎಂದು ಭಾವಿಸಿದ್ದವು!