Water Supply in Kumbh : ಕುಂಭ ಮೇಳ ಕ್ಷೇತ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ 56 ಸಾವಿರ ನಲ್ಲಿಗಳ ಜೋಡಣೆ !

ಪ್ರಯಾಗರಾಜ್, ಜನವರಿ 11 (ಸುದ್ದಿ.) – ಕುಂಭ ಕ್ಷೇತ್ರದಲ್ಲಿ ವಿವಿಧ ಆಖಾಡಾಗಳು, ಸಾವಿರಾರು ಅಂಗಡಿಗಳು, ಲಕ್ಷಾಂತರ ಟೆಂಟ್‌ಗಳಿಗೆ ಕುಡಿಯುವ ನೀರು ಒದಗಿಸುವುದು ಸರ್ಕಾರದ ಮುಂದೆ ದೊಡ್ಡ ಸವಾಲಾಗಿದೆ. ಭಕ್ತರಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಪ್ರಯಾಗರಾಜ್ ಪ್ರಾಧಿಕಾರವು ಕುಂಭ ಕ್ಷೇತ್ರದಲ್ಲಿ 56 ಸಾವಿರ ನಲ್ಲಿಗಳನ್ನು ನಿರ್ಮಿಸಿದೆ.

ಈ ಎಲ್ಲಾ ನಲ್ಲಿಗಳನ್ನು ಸದ್ಯ ತಾತ್ಕಾಲಿಕವಾಗಿ ಅಳವಡಿಸಲಾಗಿದ್ದು, ಇದಕ್ಕಾಗಿ ಸರ್ಕಾರವು ಕುಂಭ ಕ್ಷೇತ್ರದಲ್ಲಿ ಸುಮಾರು 1 ಸಾವಿರದ 249 ಕಿಲೋಮೀಟರ್ ಪೈಪ್‌ಗಳನ್ನು ಜೋಡಿಸಿದೆ. 85 ಕೊಳವೆ ಬಾವಿಗಳನ್ನು, ಬೋರ್ ವೆಲ್ ಗಳನ್ನು ಅಖಾಡಗಳ ಹೊರಗೆ ಮತ್ತು ಸಂಚಾರ ಪ್ರದೇಶಗಳಲ್ಲಿ ನಿರ್ಮಿಸಲಾಗಿದೆ. ಇದರಿಂದಾಗಿ ಅನ್ನ ಛತ್ರಗಳಲ್ಲಿ ಉಪಾಹಾರದ ಜೊತೆಗೆ ಮಧ್ಯಾಹ್ನ ಹಾಗೂ ರಾತ್ರಿ ಮಹಾಪ್ರಸಾದ ಸೇವಿಸುವ ಭಕ್ತರಿಗೆ ಕೂಡ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ.