ಪ್ರಯಾಗರಾಜ್, ಜನವರಿ 11 (ಸುದ್ದಿ.) – ಮಹಾಕುಂಭಕ್ಕೆ ಬರುವ ಪ್ರತಿಯೊಬ್ಬ ವ್ಯಕ್ತಿಯನ್ನು ಎಣಿಸಲಾಗುತ್ತದೆ ಹಾಗೂ ಉತ್ತರ ಪ್ರದೇಶ ಸರಕಾರವು ಆ ವ್ಯಕ್ತಿಯ ಮಾಹಿತಿಯನ್ನು ನೊಂದಣಿ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ‘ಆಟ್ರಿಬ್ಯೂಟ್ ಸರ್ಚ್ ಕ್ಯಾಮೆರಾ’, ‘ಆರ್.ಎಫ್.ಐ.ಡಿ. ರಿಸ್ಟ್ ಬ್ಯಾಂಡ್’ ಮತ್ತು ‘ಮೊಬೈಲ್ ಆಪ್’ ಎಂಬ 3 ವಿಧಾನಗಳನ್ನು ಬಳಸಲಾಗುವುದು.
1. ಕುಂಭ ಕ್ಷೇತ್ರಕ್ಕೆ ಪ್ರವೇಶಿಸುವ ಭಕ್ತರ ಮುಖವನ್ನು ‘ಆಟ್ರಿಬ್ಯೂಟ್ ಸರ್ಚ್ ಕ್ಯಾಮೆರಾ’ ಮೂಲಕ ‘ಸ್ಕ್ಯಾನ್’ ಮಾಡಲಾಗುತ್ತದೆ. ಮುಖ ಆಧಾರ್ ಕಾರ್ಡ್ ಲಿಂಕ್ ಆಗಿರುವುದರಿಂದ ಸಂಬಂಧಪಟ್ಟವರ ಆಧಾರ್ ಕಾರ್ಡ್ ವೀಕ್ಷಿಸಲು ಬರುವುದು ಹಾಗೆಯೇ ಸಂಬಂಧಪಟ್ಟ ಇತರೆ ಮಾಹಿತಿಗಳನ್ನು ಆಧಾರ್ ಕಾರ್ಡ್ ಮೂಲಕ ಪಡೆಯಬಹುದು.
2. ‘ಆರ್.ಎಫ್.ಐ.ಡಿ.ರಿಸ್ಟ್ ಬ್ಯಾಂಡ್’ನಲ್ಲಿ ಭಕ್ತರಿಗೆ ಕೈಯಲ್ಲಿ ಧರಿಸಲು ಇಂತಹ ಬ್ಯಾಂಡ್‌ಗಳನ್ನು ನೀಡಲಾಗುವುದು. ಈ ಬ್ಯಾಂಡ್‌ನಲ್ಲಿ ಯಂತ್ರವನ್ನು ಅಳವಡಿಸಲಾಗಿದೆ. ಇದನ್ನು ಸರಕಾರದ ಮೂಲಕ ನಿಯಂತ್ರಿಸಲಾಗುತ್ತದೆ. ಈ ಬ್ಯಾಂಡ್‌ಗಳನ್ನು ಸ್ಕ್ಯಾನ್ ಮಾಡಲು ಕುಂಭ ಕ್ಷೇತ್ರದಲ್ಲಿ ಯಂತ್ರವನ್ನು ಅಳವಡಿಸಲಾಗಿದೆ. ಆ ಮೂಲಕ, ‘ವ್ಯಕ್ತಿ ಎಲ್ಲಿದ್ದಾನೆ?’ ಎಂಬ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ.
3. ಭಕ್ತರ ಮಾಹಿತಿಗಾಗಿ ಸರಕಾರದಿಂದ ‘ಮೊಬೈಲ್ ಆ್ಯಪ್’ ಅಭಿವೃದ್ಧಿ ಪಡಿಸಲಾಗಿದೆ. ಉತ್ತರ ಪ್ರದೇಶ ಸರಕಾರವು ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಭಕ್ತರಿಗೆ ಮನವಿ ಮಾಡುತ್ತಿದೆ. ‘ಮೊಬೈಲ್ ಆ್ಯಪ್’ ಡೌನ್‌ಲೋಡ್ ಮಾಡಿದ ನಂತರ ಸಂಬಂಧಪಟ್ಟವರ ‘ಜಿ.ಪಿ.ಎಸ್. ಲೊಕೇಶನ್’ ಸಿಗಲಿದೆ. ಇದರಿಂದ ವ್ಯಕ್ತಿ ಎಲ್ಲಿದ್ದಾನೆ ಎಂಬುದು ತಿಳಿಯುತ್ತದೆ.