Maijan Raza Arrested : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಶಿರಚ್ಛೇದ ಮಾಡುವ ಬೆದರಿಕೆ ಹಾಕಿದ್ದ ಮೈಜಾನ್ ರಜಾ ಬಂಧನ

ಬರೇಲಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ್ದ ಮೈಜಾನ್ ರಜಾ ನನ್ನು ಪೊಲೀಸರು ಬಂಧಿಸಿದ್ದಾರೆ. “ಮಹಾಕುಂಭ ನಡೆಯಲು ನಾವು ಬಿಡುವುದಿಲ್ಲ ಎಂದು ನಾವು ಸವಾಲು ಹಾಕುತ್ತೇವೆ.” “ಎಷ್ಟೇ ರುಂಡಗಳನ್ನು ತೆಗೆಯಬೇಕಾದರೂ ಸೈ,” ಎಂದು ರಾಝಾ ಬೆದರಿಕೆ ಹಾಕಿದ್ದ. ಆತ ಮೈಜಾನ್ ರಝಾ ಎಂಬ ಎಕ್ಸ್ ಖಾತೆಯಿಂದ ಸನಾತನ ಧರ್ಮ, ಶ್ರೀ ರಾಮ ಮಂದಿರ ಮತ್ತು ಮಹಾಕುಂಭದ ಬಗ್ಗೆ ಅಶ್ಲೀಲ ಟಿಪ್ಪಣೆಗಳನ್ನು ಮಾಡಿದ್ದ. ಅಲ್ಲದೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ್ದ. “2025 ರಾಮ ಮಂದಿರದ ಕೊನೆಯ ವರ್ಷವಾಗಿದೆ” ಎಂದು ಹೇಳಿದ್ದ. ಈ ಬಗ್ಗೆ ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದವು. ನಂತರ ರಾಝಾನನ್ನು ಬಂಧಿಸಲಾಯಿತು.

ಸಂಪಾದಕೀಯ ನಿಲುವು

ಅಂತಹವರನ್ನು ಜೈಲಿನಲ್ಲಿಟ್ಟು ಸಾಕುವ ಬದಲು, ತ್ವರಿತ ನ್ಯಾಯಾಲಯದಲ್ಲಿ ಅವರ ವಿಚಾರಣೆ ನಡೆಸಿ ತಕ್ಷಣವೇ ಗಲ್ಲು ಶಿಕ್ಷೆ ವಿಧಿಸುವುದು ಅಗತ್ಯ !