ಪ್ರಯಾಗರಾಜ್, ಜನವರಿ 11 (ಸುದ್ದಿ) – ಕುಂಭ ಮೇಳದ ಕ್ಷೇತ್ರದಲ್ಲಿ ಭದ್ರತೆಯ ದೃಷ್ಟಿಯಿಂದ ಅಲ್ಲಿನ ಎಲ್ಲಾ ರಸ್ತೆಗಳು, ಪ್ರಮುಖ ಸ್ಥಳಗಳು, ಪ್ರಮುಖ ಧಾರ್ಮಿಕ ಸ್ಥಳಗಳು ಇತ್ಯಾದಿಗಳಲ್ಲಿ 2 ಸಾವಿರದ, 750 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ನಿಯಂತ್ರಿಸಲು ‘ಇಂಟಿಗ್ರೇಟೆಡ್ ಕಂಟ್ರೋಲ್ ಕಮಾಂಡ್ ಸೆಂಟರ್’ (ಐಸಿಸಿಸಿ) ರಚಿಸಲಾಗಿದೆ.
52 ಆಸನಗಳ ಸಾಮರ್ಥ್ಯ ಹೊಂದಿರುವ 4 ‘ಇಂಟಿಗ್ರೇಟೆಡ್ ಕಂಟ್ರೋಲ್ ಮತ್ತು ಕಮಾಂಡ್ ಸೆಂಟರ್’ಗಳನ್ನು (ಐಸಿಸಿಸಿ) ನಿರ್ಮಿಸಲಾಗಿದೆ. (ಐಸಿಸಿಸಿ ಅಂದರೆ, ವಿಪತ್ತು ಸಂಭವಿಸಿದರೆ ಅದನ್ನು ನಿಯಂತ್ರಿಸುವುದಕ್ಕಾಗಿ ನಿರ್ಮಿಸಲಾದ ಕಕ್ಷೆ) ತ್ರಿವೇಣಿ ಸಂಗಮ, ಅಕ್ಷಯವಟ್, ಲೇಟೆ ಮಾರುತಿ ಇತ್ಯಾದಿ 268 ಜನನಿಬಿಡ ಸ್ಥಳಗಳನ್ನು ಗುರುತಿಸಲಾಗಿದ್ದು, ಆ ಸ್ಥಳಗಳಲ್ಲಿ ‘ವಿಡಿಯೋ ಅನಾಲಿಟಿಕ್ಸ್’ ಅನ್ನು ಸ್ಥಾಪಿಸಲಾಗಿದೆ. ಈ ಮೂಲಕ ಜನಸಂದಣಿಯ ಮೇಲೆ ಎಲ್ಲಾ ಕಡೆಯಿಂದಲೂ ನಿಗಾ ಇಡಬಹುದು. ವಾಹನ ನಿಲ್ದಾಣಗಳ ಸ್ಥಳಗಳಲ್ಲಿ ಗಾಡಿಗಳ ಸಂಖ್ಯೆಗಳ ಚಿತ್ರಗಳನ್ನು ತೆಗೆಯಲು 108 ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ.