ಅಮರಾವತಿ – ಜಿಲ್ಲೆಯ ಅಂಜನಗಾಂವ ಸುರ್ಜಿ ತಾಲೂಕಿನಲ್ಲಿ ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾಗಳಿಗೆ ನೀಡಲಾಗಿರುವ ಜನನ ಪ್ರಮಾಣಪತ್ರಗಳಿಗೆ ಸಂಬಂಧಿಸಿದಂತೆ ನಡೆದ ಹಗರಣ ಬಯಲಾಗಿದೆ. ಹಗರಣದ ತನಿಖೆಗಾಗಿ ಭಾಜಪ ನಾಯಕ ಕಿರಿಟ್ ಸೋಮಯ್ಯ ಜನವರಿ 13 ರಂದು ಈ ತಾಲೂಕಿಗೆ ಭೇಟಿ ನೀಡಲಿದ್ದಾರೆ.
2011 ರ ಜನಗಣತಿಯ ಪ್ರಕಾರ ಅಂಜನಗಾಂವ ಸುರ್ಜಿ ತಾಲೂಕಿನ ಜನಸಂಖ್ಯೆ 1 ಲಕ್ಷ 60 ಸಾವಿರ 903ಗಳಷ್ಟಿದೆ. ಈ ಪೈಕಿ 28 ಸಾವಿರ 180 ಮುಸ್ಲಿಮರ ಜನಸಂಖ್ಯೆಯಿದೆ. ಕಳೆದ 6 ತಿಂಗಳಲ್ಲಿ ಜನನ ಪ್ರಮಾಣಪತ್ರಕ್ಕಾಗಿ 1 ಸಾವಿರ 450 ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಅದರಲ್ಲಿ 1 ಸಾವಿರ 400 ಅರ್ಜಿಗಳು ಬಾಂಗ್ಲಾದೇಶದ ರೋಹಿಂಗ್ಯಾಗಳಿಂದ ಬಂದಿವೆ ಎಂದು ಕಿರಿಟ್ ಸೋಮಯ್ಯ ಅವರು ಮಾಹಿತಿ ನೀಡಿದ್ದಾರೆ, ಸದ್ಯ ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
ಸಂಪಾದಕೀಯ ನಿಲುವುಮೊದಲು ಮಾಲೆಗಾಂವ ಮತ್ತು ಈಗ ಅಮರಾವತಿಯಲ್ಲಿನ ಘಟನೆಗಳನ್ನು ನೋಡಿದರೆ, ಬಾಂಗ್ಲಾದೇಶಿ ನುಸುಳುಕೋರರು ಮಹಾರಾಷ್ಟ್ರದಲ್ಲಿ ಎಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ! ಇವರನ್ನು ಅಲ್ಲಿನ ರಾಜ್ಯ ಸರಕಾರ ಹೇಗೆ ನಿಯಂತ್ರಿಸಲಿದೆ ? |